ಸಿ ಆ್ಯಂಡ್ ಡಿ ಹಕ್ಕುಪತ್ರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ: ಪೂರ್ವಭಾವಿ ಸಭೆ

| Published : Dec 18 2024, 12:45 AM IST

ಸಿ ಆ್ಯಂಡ್ ಡಿ ಹಕ್ಕುಪತ್ರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ: ಪೂರ್ವಭಾವಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಗ್ರಾಮಗಳಿಂದ 65 ಬಸ್‌ಗಳಲ್ಲಿ ರೈತರು ಪ್ರತಿಭಟನೆಗೆ ತೆರಳಲಿದ್ದಾರೆ. ಬೆಳಗ್ಗೆ 8. 30ಕ್ಕೆ ಎಲ್ಲ ಬಸ್‌ಗಳು ಹೊರಡಲಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕು ಪತ್ರಕ್ಕೆ ಆಗ್ರಹಿಸಿ ಡಿ.೨೦ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ರೈತರ ಆಹೋರಾತ್ರಿ ಪ್ರತಿಭಟನೆಗೆ ಪೂರ್ವಭಾವಿ ಸಭೆ ಒಕ್ಕಲಿಗರ ಸಮುದಾಯಭವನದಲ್ಲಿ ಸೋಮವಾರ ನಡೆಯಿತು.

ತಾಲೂಕಿನ ಗ್ರಾಮಗಳಿಂದ ೬೫ ಬಸ್‌ಗಳಲ್ಲಿ ರೈತರು ಪ್ರತಿಭಟನೆಗೆ ತೆರಳಲಿದ್ದಾರೆ. ಬೆಳಗ್ಗೆ ೮.೩೦ಕ್ಕೆ ಕಕ್ಕೆಹೊಳೆ ಜಂಕ್ಷನ್‌ನಿಂದ ಎಲ್ಲ ಬಸ್‌ಗಳು ಹೊರಡಲಿದ್ದು, ಕುಶಾಲನಗರ, ಸುಂಟಿಕೊಪ್ಪ ಮಾರ್ಗವಾಗಿ ೧೦.೩೦ಕ್ಕೆ ಸುದರ್ಶನ ಸರ್ಕಲ್ ತಲುಪಲಿವೆ. ಅಲ್ಲಿಂದ ಮೆರವಣಿಗೆ ನಡೆಯಲಿದ್ದು, ಗಾಂಧಿ ಮೈದಾನದಲ್ಲಿ ಧರಣಿ ನಡೆಯಲಿದೆ ಎಂದು ರೈತಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.

ಹಾಲಿ, ಮಾಜಿ ಶಾಸಕರು, ಸಂಸದರಿಗೆ ಆಹ್ವಾನ ನೀಡಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿ.ಸಿ.ಎಫ್. ಧರಣಿ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರೈತ ಮುಖಂಡರಾದ ಕೆ.ಎಂ.ದಿನೇಶ್, ಕೆ.ಎಂ.ಲೋಕೇಶ್, ಎಸ್.ಬಿ.ಭರತ್ ಕುಮಾರ್, ಬಗ್ಗನ ಅನಿಲ್, ನಂದಕುಮಾರ್, ಮಿಥುನ್ ಹಾನಗಲ್, ವಿ.ಎಂ.ವಿಜಯ, ಬಿ.ಜೆ.ದೀಪಕ್, ರಾಜಪ್ಪ, ದಿವಾಕರ್ ಕೂತಿ, ಚೌಡ್ಲು ಯೋಗೇಂದ್ರ ಹಾಗೂ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

೧೬ಎಸ್‌ಪಿಟಿ೦೨: ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ರೈತ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು.