ಸಾರಾಂಶ
ಬೇಲೂರು ತಾಲೂಕಿನ ಹಗರೆ ಸಮೀಪದ ಬೆಟ್ಟದಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸಂಗಯ್ಯನಕೊಪ್ಪಲು ಗ್ರಾಮದಿಂದ ಹೊಲಬಗೆರೆ ಬಸವಕಣಿವೆಗೆ ಸಾಗಲು ನಕಾಶೆಯಲ್ಲಿರುವ ರಸ್ತೆಯಂತೆ ರೈತರೆಲ್ಲಾ ಜಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಎತ್ತಿನಹೊಳೆ ಕಾಲುವೆಯಿಂದ ಕೆರೆಗೆ ನೀರು ಹರಿಸಲು ತೂಬು ಸಮೇತ ಉಪ ಕಾಲುವೆ ಮಾಡಲು ರಸ್ತೆಯನ್ನು ಅಗೆದು ಕಾಲುವೆಯನ್ನು ನಿರ್ಮಿಸಿದರು. ಆದರೆ ಕಾಲುವೆಯ ಮೇಲ್ಭಾಗ ಸೇತುವೆ ನಿರ್ಮಿಸಲು ಎರಡು ಬದಿಯಲ್ಲೂ ಸಹ ಕಬ್ಬಿಣದ ರಾಡುಗಳನ್ನು ಅಳವಡಿಸಿದ್ದೂ ಇಂದಿಗೂ ಸಹ ಸೇತುವೆ ಮಾಡಲು ಮುಂದಾಗಿಲ್ಲ.
ಕನ್ನಡಪ್ರಭ ವಾರ್ತೆ ಬೇಲೂರು
ರಸ್ತೆಗೆ ಅಡ್ಡಲಾಗಿ ಉಪ ಕಾಲುವೆ ನಿರ್ಮಿಸಿರುವ ಎತ್ತಿನಹೊಳೆ ಅಧಿಕಾರಿಗಳು, ಅದರ ಮೇಲ್ಭಾಗದ ಸೇತುವೆ ನಿರ್ಮಿಸಲು ಮೀನಾಮೇಷ ಎಣಿಸುತ್ತಿದ್ದು ಬೆಟ್ಟದಾಲೂರು ರೈತರು ಪ್ರತಿಭಟಿಸಲು ಪ್ರಾರಂಭಿಸಿದ್ದಾರೆ.ತಾಲೂಕಿನ ಹಗರೆ ಸಮೀಪದ ಬೆಟ್ಟದಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸಂಗಯ್ಯನಕೊಪ್ಪಲು ಗ್ರಾಮದಿಂದ ಹೊಲಬಗೆರೆ ಬಸವಕಣಿವೆಗೆ ಸಾಗಲು ನಕಾಶೆಯಲ್ಲಿರುವ ರಸ್ತೆಯಂತೆ ರೈತರೆಲ್ಲಾ ಜಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ಎತ್ತಿನಹೊಳೆ ಕಾಲುವೆಯಿಂದ ಕೆರೆಗೆ ನೀರು ಹರಿಸಲು ತೂಬು ಸಮೇತ ಉಪ ಕಾಲುವೆ ಮಾಡಲು ರಸ್ತೆಯನ್ನು ಅಗೆದು ಕಾಲುವೆಯನ್ನು ನಿರ್ಮಿಸಿದರು. ಆದರೆ ಕಾಲುವೆಯ ಮೇಲ್ಭಾಗ ಸೇತುವೆ ನಿರ್ಮಿಸಲು ಎರಡು ಬದಿಯಲ್ಲೂ ಸಹ ಕಬ್ಬಿಣದ ರಾಡುಗಳನ್ನು ಅಳವಡಿಸಿದ್ದೂ ಇಂದಿಗೂ ಸಹ ಸೇತುವೆ ಮಾಡಲು ಮುಂದಾಗಿಲ್ಲ.
ಇದರಿಂದ ಪ್ರತಿನಿತ್ಯ ಓಡಾಡುವ ರೈತರಿಗೆ ರಸ್ತೆಯೇ ಇಲ್ಲದಂತಾಗಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ಬಳಿ ಎಷ್ಟೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕೇವಲ ಉಡಾಫೆ ಮಾತುಗಳನ್ನಾಡುತ್ತಾರೆ. ಸೇತುವೆ ನಿರ್ಮಿಸಲು ನಮಗೆ ಅನುಮತಿ ಇಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ತರಕಾರಿ, ಜೋಳ ಸಾಗಿಸಲು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ತಿರುಗಾಡಲು ಸಾಧ್ಯವಿಲ್ಲದೆ ಪರದಾಡುವ ಪರಿಸ್ಥಿತಿ ನಮ್ಮದಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು ಆದಷ್ಟು ಬೇಗ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಮಗೆ ಸೇತುವೆ ನಿರ್ಮಿಸಿಕೊಡುವಂತೆ ಎತ್ತಿನಹೊಳೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಬೆಟ್ಟದಾಲೂರು ಗ್ರಾಮದ ರೈತರಾದ ರಾಜೇಗೌಡ್ರು, ಕಾಂತನಾಯ್ಕ, ಪ್ರದೀಪ, ದರ್ಶನ್, ಶಿವಪ್ಪನಾಯ್ಕ, ಮಾರನಾಯ್ಕ, ಚನ್ನೆಗೌಡ, ಕಾಂತರಾಜ ಭರತ್, ಮೋಹನ್ ಕುಮಾರ್, ಇನ್ನಿತರರು ಭಾಗವಹಿಸಿದ್ದರು.