ರಸ್ತೆಗಾಗಿ ರೈಲ್ವೆ ಕಚೇರಿ ಮುಂದೆ ರೈತರ ಪ್ರತಿಭಟನೆ

| Published : Sep 26 2024, 10:35 AM IST

ಸಾರಾಂಶ

ಕುಣಿಗಲ್: ರೈಲ್ವೆ ಇಲಾಖೆ ಕಾಮಗಾರಿ ಗೆಂದು ಭೂಮಿಯನ್ನು ನೀಡಿದ ಹಲವಾರು ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ಮೊದಲಿನ ರಸ್ತೆಯನ್ನು ರೈಲ್ವೆ ಇಲಾಖೆಯ ವಶಪಡಿಸಿಕೊಂಡು ತಡೆಗೋಡೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಕುಣಿಗಲ್ ಪಟ್ಟಣದ ಜೋಡಿ ಅಗ್ರಹಾರ ಭಾಗದ ಐವತ್ತಕ್ಕಿಂತ ಹೆಚ್ಚು ರೈತರು ರೈಲ್ವೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ರಸ್ತೆಗಾಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಸುರೇಶ್ ಮೊದಲಿನಿಂದಲೂ ಇದ್ದಂತಹ ರಸ್ತೆಯನ್ನು ರೈಲ್ವೆ ಇಲಾಖೆ ಬಂದ್ ಮಾಡಿದೆ. ಭೂಮಿಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಸರಿಯಾದ ರಸ್ತೆ ಹಾಗೂ ಮೂಲಭೂತ ಸೌಕರ್ಯ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಅದನ್ನು ಗಾಳಿಗೆ ತೂರಿ ನಮ್ಮ ರಸ್ತೆಗಳನ್ನು ಬಂದು ಮಾಡಿದ್ದಾರೆ ಎಂದು ಆರೋಪಿಸಿದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ ಹಲವಾರು ರೈತರು ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿದರು.ರೈತ ಮುಖಂಡ ಜೆಸಿಪಿ ಭೈರಪ್ಪ ಮಾತನಾಡಿ ಮೂಲಭೂತ ಸೌಕರ್ಯ ಒದಗಿಸಬೇಕಾದ ರೈಲ್ವೆ ಇಲಾಖೆ ತಮಗೆ ಬೇಕಾದ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿಕೊಳ್ಳುತ್ತಿದ್ದರ ಬಗ್ಗೆ ಗಮನಹರಿಸುತ್ತಿಲ್ಲ ಈ ಬಗ್ಗೆ ಅಧಿಕಾರಿಗಳು ಸ್ಪಂದಿಸದೆ ಇರುವುದು ನಮಗೆ ನೋವುಂಟು ಮಾಡಿದೆ ಎಂದರು. ಕಾಮಗಾರಿ ಸ್ಥಳದಿಂದ ನಂತರ ರೈಲ್ವೆ ಇಲಾಖೆ ಮುಂದೆ ಜಮಾಯಿಸಿದ ಹಲವಾರು ರೈತರು ರೈಲ್ವೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಕ್ಷಣ ತಡೆಗೋಡೆಯ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಹಲವಾರು ರೈತರು ಸೇರಿದಂತೆ ಸ್ಥಳೀಯರು ಇದ್ದರು.