ಸಾರಾಂಶ
ತಾಲೂಕಿನ ಬೀಚನಕುಪ್ಪೆ ಸರ್ವೇ ನಂ. 76ರಲ್ಲಿ ಸುಮಾರು 133 ಎಕರೆ ಸರ್ಕಾರಿ ಜಮೀನು ಜೊತೆಗೆ ಉಳಿದ ರೈತರ ಜಮೀನುಗಳನ್ನು ವಶಕ್ಕೆ ಪಡೆದು ಟೌನ್ ಶಿಪ್‌ನ ನೆಪ ಹೇಳಿ, ಬರ್ಗರೀನ್ ಪ್ರಾಪರ್ಟಿ ಹೆಸರಲ್ಲಿ ಟೌನ್ ಶಿಫ್ ನಿರ್ಮಾಣ ಮಾಡಲು ಹಲವು ನಕಲಿ ದಾಖಲೆ ಸೃಷ್ಟಿಸಿ, ರೈತರ ಹೆಸರಲ್ಲಿ ಜಮೀನು ಖರೀದಿಸಿರುವ ಖಾಸಗಿ ಮಾಲೀಕನ ಪರ ಕೆಲಸ ಮಾಡಿ ಹಣ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕೂಡಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಮಿಷನ್ ಆಸೆಗಾಗಿ ಕೆಐಎಡಿಬಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈ ಜೋಡಿಸಿ, ನೂರಾರು ಎಕರೆ ಸರ್ಕಾರಿ ಭೂಮಿ ಸ್ವಾಧೀನ ಮಾಡಿ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.ತಾಲೂಕಿನ ಕೆಆರ್‌ಎಸ್ ಬಳಿಯ ಬೀಚನಕುಪ್ಪೆ ಗ್ರಾಮದ ಸರ್ವೇ ನಂ. 76ರ ಸರ್ಕಾರಿ ಬಿ ಖರಾಬು ಜಮೀನು ಸೇರಿ ರೈತರ ಜಮೀನು ವಶಪಡಿಸಿಕೊಳ್ಳಲು ಮುಂದಾಗಿರುವ ಸ್ಥಳದಲ್ಲಿ ಸೇರಿದ ರೈತರು, ಕೆಐಎಡಿಬಿ ವಿರುದ್ಧ ಘೋಷಣೆ ಕೂಗಿದರು.
ಸರ್ಕಾರಿ ಗೋಮಾಳ, ಗ್ರಾಮಠಾಣಾ, ಬಿ. ಖರಾಬು ಜಾಗಗಳನ್ನು ಕಬಳಿಸಲು ಪಕ್ಕದಲ್ಲಿರುವ ಕೆಲವು ರೈತರ ಜಮೀನನ್ನು ಭೂಸ್ವಾಧೀನದ ನೆಪದಲ್ಲಿ ವಶಕ್ಕೆ ಪಡೆದು ಹಣವುಳ್ಳ ಖಾಸಗಿ ವ್ಯಕ್ತಿಗೆ ಸಹಕಾರ ನೀಡಿ ತಾವು ಕಮಿಷನ್ ರೂಪದಲ್ಲಿ ಹಣ ಪಡೆದುಕೊಳ್ಳುವ ಹುನ್ನಾರಕ್ಕೆ ಕೆಎಐಡಿಬಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ರೈತ ಹಾಗೂ ಗ್ರಾಪಂ ಸದಸ್ಯ ಬಿ.ವಿ.ಸುರೇಶ್ ಆರೋಪಿಸಿದರು.ತಾಲೂಕಿನ ಬೀಚನಕುಪ್ಪೆ ಸರ್ವೇ ನಂ. 76ರಲ್ಲಿ ಸುಮಾರು 133 ಎಕರೆ ಸರ್ಕಾರಿ ಜಮೀನು ಜೊತೆಗೆ ಉಳಿದ ರೈತರ ಜಮೀನುಗಳನ್ನು ವಶಕ್ಕೆ ಪಡೆದು ಟೌನ್ ಶಿಪ್‌ನ ನೆಪ ಹೇಳಿ, ಬರ್ಗರೀನ್ ಪ್ರಾಪರ್ಟಿ ಹೆಸರಲ್ಲಿ ಟೌನ್ ಶಿಫ್ ನಿರ್ಮಾಣ ಮಾಡಲು ಹಲವು ನಕಲಿ ದಾಖಲೆ ಸೃಷ್ಟಿಸಿ, ರೈತರ ಹೆಸರಲ್ಲಿ ಜಮೀನು ಖರೀದಿಸಿರುವ ಖಾಸಗಿ ಮಾಲೀಕನ ಪರ ಕೆಲಸ ಮಾಡಿ ಹಣ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಕೂಡಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಭೂಸ್ವಾಧೀನ ಕೈ ಬಿಡದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹುಂಡವಾಡಿ ಮಹದೇವು, ಕೆಆರ್‌ಎಸ್ ವಸಂತಕುಮಾರ್ ಸೇರಿದಂತೆ ಇತರರು ಎಚ್ಚರಿಸಿದರು.