ಕಳಪೆ ಗೊಬ್ಬರ ಮಾರಾಟ: ರೈತರ ಪ್ರತಿಭಟನೆ

| Published : Jul 06 2025, 11:48 PM IST

ಸಾರಾಂಶ

ಕಳಪೆ ಗೊಬ್ಬರ ಮಾರಾಟ ಮಾಡಿದ ಮಳಿಗೆ ಮಾಲೀಕರು ಹಾಗೂ ಅದನ್ನು ತಡೆಯಲು ವಿಫಲವಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಶಿಗ್ಗಾಂವಿ: ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಎರಡು ಮಳಿಗೆಗಳಲ್ಲಿ ಕಳಪೆ ಗೊಬ್ಬರ ಮಾರಲಾಗಿದ್ದು, ಇದರಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೋತನಹಳ್ಳಿ ಗ್ರಾಮದ ನೊಂದ ರೈತರು ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಎದುರು ಸೇರಿದ್ದ ರೈತರು, ಕಳಪೆ ಗೊಬ್ಬರ ಚೀಲಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಗೊಬ್ಬರ ಮಾರಾಟ ಮಾಡಿದ ಮಳಿಗೆ ಮಾಲೀಕರು ಹಾಗೂ ಅದನ್ನು ತಡೆಯಲು ವಿಫಲವಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಿಗ್ಗಾಂವಿ ತಾಲೂಕು ಆಡಳಿತ ಸಹ ಬೇಡಿಕೆಗೆ ತಕ್ಕಷ್ಟು ಡಿಎಪಿ ಪೂರೈಕೆ ಮಾಡಲಿಲ್ಲ. ಬಿತ್ತನೆ ಸಮಯದಲ್ಲಿ ಡಿಎಪಿ ಗೊಬ್ಬರದ ಅಗತ್ಯವಿತ್ತು. ಹೀಗಾಗಿ ಪಕ್ಕದ ಹಾನಗಲ್ಲ ತಾಲೂಕಿನ ಮಾಸನಕಟ್ಟಿಯ ಉಳವಿ ಚನ್ನಬಸವೇಶ್ವರ ಕಂಪನಿ ಹಾಗೂ ಹೊನ್ನಮ್ಮದೇವಿ ಟ್ರೇಡರ್ಸ್ ಮಳಿಗೆಗಳಲ್ಲಿ ಚೀಲಕ್ಕೆ ₹೧,೪೦೦ ರೂಗಳನ್ನು ಕೊಟ್ಟು ಗೊಬ್ಬರ ಖರೀದಿ ಮಾಡಿದ್ದೆವು ಎಂದು ಹೋತನಹಳ್ಳಿ ಗ್ರಾಮದ ರೈತರು ತಮ್ಮ ಅಳಲನ್ನು ತೋಡಿಕೊಂಡರು. 10ರಂದು ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ

ಹಿರೇಕೆರೂರು: ತಾಲೂಕಿನ ಚನ್ನಳ್ಳಿ ಸಮೀಪದ ಕಡೇನಂದಿಹಳ್ಳಿಯ ರೇವಣಸಿದ್ಧೇಶ್ವರ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಪ್ರಯುಕ್ತ ಜು. 10ರಂದು ಸಂಜೆ 4.30ಕ್ಕೆ ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರಧಾನ ಹಾಗೂ ಗುರು ಪೂರ್ಣಿಮಾ ಧರ್ಮ ಸಮಾರಂಭ ಜರುಗಲಿದೆ.ದುಗ್ಲಿ- ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕನ್ನೂರು-ಸಿಂಧನೂರು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಯು.ಬಿ. ಬಣಕಾರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕಡೇನಂದಿಹಳ್ಳಿ ಹೋಳಿಹಂಪೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜಪ್ಪ ಚನ್ನಳ್ಳೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜ ಚನ್ನಳ್ಳಿ ಭಾಗವಹಿಸುವರು.