ಬರ ಪರಿಹಾರ ಹಣ ಜಮೆ ಮಾಡುವಂತೆ ಆಗ್ರಹಿಸಿ ಮನವಿ

| Published : Jan 19 2024, 01:47 AM IST

ಸಾರಾಂಶ

ಕೆಲ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದರಿಂದ ಅಲೆದಾಟ ತಪ್ಪುತ್ತಿಲ್ಲ ಎಂದು ದೂರು. ದೇವದುರ್ಗದಲ್ಲಿ ಕೆಆರ್‌ಎಸ್‌ ಪದಾಧಿಕಾರಿಗಳಿಂದ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕು ಬರಗಾಲ ಷೋಷಣೆ ಮಾಡಿ ಒಂದುವೆರೆ ತಿಂಗಳವಾಗುತ್ತಿದ್ದು, ರಾಜ್ಯ ಸರ್ಕಾರ ಬರ ಪರಿಹಾರ ಹಣ ಜಮೆ ಮಾಡುತ್ತಿಲ್ಲ. ಕೂಡಲೇ ರೈತರ ಬ್ಯಾಂಕ್ ಖಾತೆ ಹಣ ಜಮೆ ಮಾಡುವಂತೆ ಕೆಆರ್‌ಎಸ್‌ ತಾಲೂಕು ಸಮಿತಿ ಪದಾಧಿಕಾರಿಗಳು ಗುರುವಾರ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮುಂಗಾರು-ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಬಹುತೇಕ ರೈತರು ಬೆಳೆ ನಷ್ಟ ಅನುಭಿಸಬೇಕಿದೆ. ಇದರಿಂದಾಗಿ ರೈತರು ಬೆಳಗೆ ಹಾಕಿದ ಹಣ ವಾಪಸ್ ಬಂದಿಲ್ಲ. ಬೆಳೆ ಪರಿಹಾರ ಮಂಜೂರು ಮಾಡಿದ್ದರೂ, ಎಫ್ಐಡಿ ನೆಪ ಹೇಳಿಕೊಂಡು ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆ ರೈತರು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ.

ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಎಫ್‌ಐಡಿ ಮಾಡಲು ಸರ್ವರ್ ಸಮಸ್ಯೆಯಿಂದ ನಿತ್ಯ ಕಚೇರಿಗೆ ಅಲೆಯುವಂತಾಗಿದೆ. ಸರ್ವರ್ ಸಮಸ್ಯೆ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದಾಗಿ ನಿತ್ಯ ರೈತರು ಕಚೇರಿಗೆ ಅಲೆಯಬೇಕಾಗಿದೆ. ಕೆಲ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದರಿಂದ ಅಲೆದಾಟ ತಪ್ಪುತ್ತಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಮಂಜೂರು ಮಾಡಿರುವ ಬರ ಪರಿಹಾರ ಸಂಬಂಧಪಟ್ಟಂತ ಅಧಿಕಾರಿಗಳು ಕೊಡಲೇ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಕಚೇರಿ ಮುಂದೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಶಫೀಕ್ ಪಾಷಾ, ಸಿದ್ದಲಿಂಗಪ್ಪ, ರಮೇಶ, ದುರುಗಣ್ಣ ಇರಬಗೇರಾ, ಯಂಕಪ್ಪ ವೆಂಗಳಾಪುರು ಸೇರಿದಂತೆ ಇತರರು ಇದ್ದರು.