ರೈತರಿಗೆ ಬೆಳೆ ಪರಿಹಾರ ವಿತರಿಸಲು ರೈತ ಮನವಿ

| Published : Dec 14 2023, 01:30 AM IST

ಸಾರಾಂಶ

ರೈತರಿಗೆ ಬೆಳೆ ಪರಿಹಾರ ವಿತರಿಸಲು ರೈತ ಮನವಿ: ರೈತ ಸಂಘದ ರಾಜ್ಯ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯ

ರೈತ ಸಂಘದ ರಾಜ್ಯ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯ

ಮಲೇಬೆನ್ನೂರು: ರಾಜ್ಯದಲ್ಲಿ ಮಳೆ ಅಭಾವ ತಲೆದೋರಿರುವ ಕಾರಣ ರೈತರು ಬೆಳೆ ಬೆಳೆಯದೇ ನಷ್ಟದಲ್ಲಿದ್ದು, ಪ್ರತಿ ಎಕರೆಗೆ ೩೫ ಸಾವಿರ ಪರಿಹಾರ ನೀಡುವಂತೆ ರೈತ ಸಂಘದ ರಾಜ್ಯ ಮುಖಂಡ ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.

ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಸಭೆ ನಡೆಸಿ ನಂತರ ನಾಡ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ ಉಪತಹಸೀಲ್ದಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಅರ್ಪಿಸಿ ಮಾತನಾಡಿ, ೧೯೭೧ರಿಂದ ೨೦೨೩ರವರೆಗೆ ಬಗರ್‌ಹುಕುಂ ಸಾಗುವಳಿ ಮಾಡಿದ ಕಲಂ ನಂ. ೫೦, ೫೩ ಮತ್ತು ೫೭ರಡಿಯಲ್ಲಿನ ಅರ್ಜಿದಾರರಿಗೆ ಮತ್ತು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಲ್ಲ. ೯೪ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿದರು.

ರಾಷ್ಟ್ರದ ೧೪೦ ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡಿ ತಮ್ಮ ಜೀವನವನ್ನು ತ್ಯಾಗ ಮಾಡಿರುವ ವಯೋವೃದ್ಧ ರೈತರಿಗೆ ಐದು ಸಾವಿರ ರು. ಪಿಂಚಣಿ ನೀಡಬೇಕು. ರೈತರನ್ನು ವಿವಾಹವಾದ ವಧುವಿಗೆ ಸರ್ಕಾರಿ ನೌಕರಿ ನೀಡುವಂತೆ ರವಿಕುಮಾರ್ ಒತ್ತಾಯಿಸಿದರು. ಡಿ ೨೩ರಂದು ಬೆಂಗಳೂರಲ್ಲಿ ನಡೆಯುವ ರೈತರ ಮಹಾ ಅಧಿವೇಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಮುಖಂಡರಾದ ಎಸ್.ಮಂಜುನಾಥ್, ಮುರಿಗೇಂದ್ರಯ್ಯ, ಅಂಜಿನಪ್ಪ, ಹನುಮಂತಪ್ಪ, ಖಲೀಲ್ ಮತ್ತಿತರರು ಹಾಜರಿದ್ದರು.

- - -

ಚಿತ್ರ-೨. ರೈತ ಸಂಘದ ಮುಖಂಡರು ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

- - -