ಲಾಭದಾಯಕ ಕೃಷಿಗೆ ರೈತರು ಮುಂದಾಗಬೇಕು-ಶಾಸಕ ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ

| Published : Jan 13 2025, 12:48 AM IST

ಲಾಭದಾಯಕ ಕೃಷಿಗೆ ರೈತರು ಮುಂದಾಗಬೇಕು-ಶಾಸಕ ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಜಾನುವಾರುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಲಾಭದಾಯಕ ಕೃಷಿ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಯಾಸೀರ್ ಅಹ್ಮದ್ ಖಾನ್ ಪಠಾಣ ಹೇಳಿದರು.

ಶಿಗ್ಗಾಂವಿ: ರೈತರಿಗೆ ಜಾನುವಾರುಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಲಾಭದಾಯಕ ಕೃಷಿ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಯಾಸೀರ್ ಅಹ್ಮದ್ ಖಾನ್ ಪಠಾಣ ಹೇಳಿದರು.ತಾಲೂಕಿನ ಮುಗಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಿಸ್ತರಣಾ ಘಟಕದ ಬಲಪಡಿಸುವ ಯೋಜನೆಯಡಿ ಮಿಶ್ರತಳಿ ಹಸು ಹಾಗೂ ಎಮ್ಮೆಗಳ ಪ್ರದರ್ಶನ ಮತ್ತು ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಪ್ರೋತ್ಸಾಹ ನೀಡಲು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ೫೦೦ ಹಸುಗಳನ್ನು ಹೊಸದಾಗಿ ನೀಡುವಂತೆ ಸರಕಾರಕ್ಕೆ ಮನವಿ ಮಾಡುವುದರ ಮೂಲಕ ಹಿಂದೂಳಿದ ಬಡಕುಟುಂಬಗಳಿಗೆ ಸಹಕಾರಿಯಾಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಹಸು ಸಾಕುವುದು ಉದ್ಯೋಗದ ಜೊತೆಗೆ ನಮ್ಮ ಸಂಪ್ರದಾಯವು ಹೌದು. ಅದು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಸಂಕೇತ ಹಸುಗಳನ್ನು ಭಕ್ತಿಯಿಂದ ಕಾಣುವುದು ನಮ್ಮ ಸಂಸ್ಕೃತಿ ಎಂದ ಅವರು, ನಮ್ಮ ಭಾಗದಲ್ಲಿ ನೀರಾವರಿ ಮೂಲಗಳ ಕೊರತೆ ಇರುವ ಹಿನ್ನೆಲೆಯಲ್ಲಿ ರೈತರ ಬದುಕು ಹಸನಾಗುತ್ತಿಲ್ಲ. ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಹೈನುಗಾರಿಕೆ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಎಸ್.ವಿ. ಸಂತಿ ಮಾತನಾಡಿ, ಜಾನುವಾರುಗಳ ರಕ್ಷಣೆ ಅತಿ ಮುಖ್ಯ. ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಾನುವಾರುಗಳಿಗೆ ಉಚಿತ ಲಸಿಕೆ, ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಣೆಯ ಸ್ವಚ್ಛತೆ ಅರಿವು ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಎಸ್. ಪಾಟೀಲಮಾತನಾಡಿ, ಪಶುಪಾಲನೆ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಹೈನೋದ್ಯಮ ಪ್ರೋತ್ಸಾಹಿಸಬೇಕಿದೆ ಎಂದರು. ಹೈನುಗಾರಿಕೆ ಫಲಾನುಭವಿ ಮಲ್ಲವ್ವ ಸೋಮನಕಟ್ಟಿ ಮಾತನಾಡಿ, ಹೈನುಗಾರಿಕೆ ಅವಲಂಬನೆಯಿAದ ನನ್ನ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಅಷ್ಟೇ ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗಿದೆ ಎಂದರು. ಮುಖಂಡರಾದ ಶಿವಾನಂದ ರಾಮಗೇರಿ, ಗುಡ್ಡಪ್ಪ ಜಲದಿ, ಎಸ್.ಎಫ್.ಮಣಕಟ್ಟಿ ಮಾತನಾಡಿದರು.ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜೇಂದ್ರ ಅರಳೇಶ್ವರ, ಡಾ. ಮಹಾಂತಸ್ವಾಮಿ, ಫಕ್ಕೀರಪ್ಪ ದುಂಡಪ್ಪನವರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜವ್ವ ದೊಡ್ಡಮನಿ, ಉಪಾಧ್ಯಕ್ಷೆ ರೇಣುಕಾ ಬಿಶೆಟ್ಟಿ, ಸದಸ್ಯ ನಿಂಗಪ್ಪ ದುಂಡಪ್ಪನವರ, ಗ್ರಾಮದ ಶಿವಪ್ಪ ಅರಳಿಕಟ್ಟಿ, ಶ್ರೀಕಲ್ಮೇಶ್ವರ ಟ್ರಸ್ಟ್‌ ಶಿವಪ್ಪ ದುಂಡಪ್ಪನವರ, ಬಸಪ್ಪ ಭದ್ರಶೆಟ್ಟಿ, ಯಲ್ಲಪ್ಪ ಅರಳಿಕಟ್ಟಿ, ಮಹಾದೇವಪ್ಪ ಕಾಮನಹಳ್ಳಿ, ಬಸನಗೌಡ ಪಾಟೀಲ, ಡಾ. ವಿನೂತಾ ಪಿ., ಡಾ. ರೂಪಾ, ಡಾ. ಕಾವ್ಯಾ, ಎಂ.ಪಿ. ಗಿರಡ್ಡಿ, ಸಿ.ಡಿ. ಯತ್ನಳ್ಳಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧರ್ಮಣ್ಣ ಅರಳಿಕಟ್ಟಿ ಹಾಗೂ ಸದಸ್ಯರು ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ನಿಂಗಪ್ಪ ಸಕ್ರಿ ಕಾರ್ಯಕ್ರಮ ನಿರೂಪಿಸಿದರು. ಹಾಲು ಕರೆಯುವ ಸ್ಪರ್ಧೆ ವಿಜೇತರು: ಹಾಲು ಕರೆಯುವ ಸ್ಪರ್ಧೆಯ ಜರ್ಸಿ ವಿಭಾಗದಲ್ಲಿ ವಿರೂಪಾಕ್ಷಪ್ಪ ಭದ್ರಶೆಟ್ಟಿ, ಕಂಟೆಪ್ಪ ನಡುವಿನಮನಿ, ಮೀನಾಕ್ಷಿ ಮಾಡಳ್ಳಿ, ಎಚ್.ಎಫ್. ವಿಭಾಗದಲ್ಲಿ ರಮೇಶ ದುಂಡಪ್ಪನವರ, ಮಲ್ಲೇಶಪ್ಪ ಗೊಬ್ಬಿ, ಬಸವರಾಜ ದುಂಡಪ್ಪನವರ, ಎಮ್ಮೆ ವಿಭಾಗದಲ್ಲಿ ವಿರೂಪಾಕ್ಷಪ್ಪ ಪೂಜಾರ, ಚನ್ನಪ್ಪ ನಡುವಿನಮನಿ, ಶಿವಯ್ಯ ಕಳಸಗೇರಿಮಠ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.