ರೈತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕು

| Published : Dec 24 2024, 12:45 AM IST

ರೈತ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರೈತ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವುದೇ ನಿಜವಾದ ರೈತ ದಿನಾಚರಣೆಯಾಗುತ್ತದೆ ಎಂದು ಹೊನ್ನಾಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಮಾ ಅವರು ಹೇಳಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರೈತ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವುದೇ ನಿಜವಾದ ರೈತ ದಿನಾಚರಣೆಯಾಗುತ್ತದೆ ಎಂದು ಹೊನ್ನಾಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಮಾ ಅವರು ಹೇಳಿದರು.

ಅವರು ಸೋಮವಾರ ಪಟ್ಟಣದ ಟಿ.ಎ.ಪಿ.ಸಿ.ಎಂ. ಸೊಸೈಟಿಯ ಅವರಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತ ದಿನ, ಕಿಸಾನ್ ಗೋಷ್ಠಿ. ಹಾಗೂ ಆಹಾರ ಭದ್ರತಾ ಯೋಜನೆಯಡಿ ಹತ್ತಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತಾಪಿ ಬದುಕಿನ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ, ಪ್ರಗತಿಪರ ರೈತರೆಂದು ಪ್ರೋತ್ಸಾಹಿಸಬೇಕು. ಒಂದೇ ತೆರನಾದ ಬೆಳೆ ಬೆಳೆಯುವುದು ರೈತನ ಹಿತದೃಷ್ಟಿಯಿಂದ ಲಾಭದಾಯಕವಲ್ಲ. ಕೃಷಿ ಇಲಾಖೆ ಸಂಪರ್ಕಕ್ಕೆ ಬಾರದೇ ಇರುವಂತಹ ಅದೇಷ್ಟೋ ರೈತರಿದ್ದು, ಇಂತಹ ರೈತರು ಕಾಲ ಕಾಲಕ್ಕೆ ಕೃಷಿ ಇಲಾಖೆ ಅಧಿಕಾರಿಗಳು, ಹಾಗೂ ಇತರೆ ಬೆಳೆ ಮತ್ತು ಕೀಟಗಳ ತಜ್ಞರ ಸಂಪರ್ಕವಿಟ್ಟುಕೊಂಡು ತಮ್ಮ ಕೃಷಿ ಚಟುವಟೆಕೆ ಮಾಡಿದ್ದೇ ಆದಲ್ಲಿ ಸಾಕಷ್ಟು ಲಾಭಪಡೆಯಬಹುದು ಎಂದು ಹೇಳಿದರು.

ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಬಸಪ್ಪ ಅವರು ಮಾತನಾಡಿ, ಕೃಷಿ ಇಲಾಖೆಗಳು ನಡೆಸುವ ತರಬೇತಿ, ಮಾಹಿತಿ ವಿಚಾರ ಗೋಷ್ಠಿಗಳಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿದರೆ ತಮ್ಮ ರೈತಾಪಿ ಕೆಲಸಗಳಿಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರೈತರುಗಳಾದ ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಂಕದಕಟ್ಟೆ ಅಣ್ಣಪ್ಪ, ಅರಣ್ಯ ಕೃಷಿಯಲ್ಲಿ ಸಾಧನೆ ಮಾಡಿದ ಭೈರನಹಳ್ಳಿ ರಾಜು, ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಡೆಕಟ್ಟೆ ಚನ್ನಕೇಶವ, ಕುರಿ ಮತ್ತು ಮೇಕೆ ಸಾಗಾಣಿಕೆಯಲ್ಲಿ ಸಾಧನೆ ಮಾಡಿದ ಕುಂದೂರು ಪರಮೇಶ್ವರಪ್ಪ, ಸಾವಯವ ಕೃಷಯಲ್ಲಿ ಸಾಧನೆ ಮಾಡಿದ ಹುಣಸಘಟ್ಟ ಮೀನಾಕ್ಷಮ್ಮ, ಇವರಿಗೆ ಕೃಷಿ ಇಲಾಖೆವತಿಯಿಂದ ಪ್ರಶಸ್ತಿ ಪತ್ರಗಳನ್ನುನೀಡಿ ಗೌರವಿಸಲಾಯಿತು.

ರೈತ ಸಂಘದ ಉಪಾಧ್ಯಕ್ಷ ಬಸರಾವರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಬಸಪ್ಪ,ರೈತ ಮುಖಂಡ ಎಚ್. ಕಡದಕಟ್ಟೆ ಜಗದೀಶ್ ಅವರು ರೈತರ ಮತ್ತು ಕೃಷಿ ಕ್ಷೇತ್ರದ ಹಲವಾರು ಸಮಸ್ಯೆಗಳ ಕುರಿತು ಮಾತನಾಡಿ ರೈತರಲ್ಲಿ ವಿಶೇಷವಾಗಿ ಒಗ್ಗಟ್ಟು ಮೂಡಬೇಕಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆಯ ಕೃಷಿ ಅಧಿಕಾರಿ ಆತೀಕ್ ವುಲ್ಲಾ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.ಕೃಷಿ ಸಮಾಜದ ಮುಖಂಡ ರುದ್ರಾನಾಯ್ಕ ಸೇರಿದಂತೆ ಅವಳಿ ತಾಲೂಕುಗಳಿಂದ ಬಂದಿದ್ದ ಹಲವಾರು ಜನ ರೈತರು ಉಪಸ್ಥಿತರಿದ್ದರು.