ರೈತರು ಉಪ ಕಸುಬುಗಳಿಗೂ ಒತ್ತು ನೀಡಬೇಕು

| Published : Jul 21 2024, 01:16 AM IST

ಸಾರಾಂಶ

ರೈತರು ಒಂದೇ ಬೆಳೆಗೆ ಆಶ್ರಯವಾಗದೆ ಮಿಶ್ರ ಬೆಳೆ ಇಟ್ಟರೆ ಲಾಭ ಆಗುತ್ತದೆ.ದ್ವಿದಳ, ಸಿರಿಧಾನ್ಯ, ತೊಗರಿ, ಅಳಸಂದೆ ಜೊತೆಗೆ ಖಾಲಿ ಜಾಗದಲ್ಲಿ ಹೂ, ತರಕಾರಿ, ಹಣ್ಣುಗಳನ್ನು ಬೆಳೆದರೆ ಇನ್ನಷ್ಟು ಲಾಭ ಬರುತ್ತದೆ. ಈ ನಿಟ್ಟಿನಲ್ಲಿ ರೈತರು ಮಿಶ್ರ ಬೆಳೆಗೆ ಒತ್ತು ನೀಡಬೇಕು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ರೈತರು ಕೃಷಿಯೊಂದಿಗೆ ಉಪ ಕಸುಬು ಮಾಡಿದರೆ ಅರ್ಥಿಕವಾಗಿ ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ. ಕೃಷಿ ಇಲಾಖೆ ನೀಡುವ ಯೋಜನೆಗಳನ್ನು ಸದ್ವಿನಿಯೋಗಿಸಿಕೊಳ್ಳಿ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಸಿದರು.

ತಾಲ್ಲೂಕಿನ ಡಿ.ಪಾಳ್ಯ ಹೋಬಳಿ ಗುಂಡ್ಲಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸುಮಾರು 52 ಲಕ್ಷ ವೆಚ್ಚದ ಹಸು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದ.

ಹತ್ತು ವರ್ಷಗಳಿಂದ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇದರಿಂದ ರೈತರು ಎದೆಗುಂದೆದೆ ಕೃಷಿಯೊಂದಿಗೆ ಉಪಕಸುಗಳಾದ ಹೈನುಗಾರಿಕೆ, ಜೇನುಸಾಕಾಣಿಕೆ ಯಂತಹ ಉಪಕಸುಬು ಮಾಡಿದರೆ ಅರ್ಥಿಕವಾಗಿ ಮುಂದೆ ಬರಬಹುದು ಎಂದರು.

ಮಿಶ್ರ ಬೆಳೆಗೆ ಆದ್ಯತೆ ನೀಡಿ

ರೈತರು ಒಂದೇ ಬೆಳೆಗೆ ಆಶ್ರಯವಾಗದೆ ಮಿಶ್ರ ಬೆಳೆ ಇಟ್ಟರೆ ಲಾಭ ಆಗುತ್ತದೆ.ದ್ವಿದಳ, ಸಿರಿಧಾನ್ಯ, ತೊಗರಿ, ಅಳಸಂದೆ ಜೊತೆಗೆ ಖಾಲಿ ಜಾಗದಲ್ಲಿ ಹೂ, ತರಕಾರಿ, ಹಣ್ಣುಗಳನ್ನು ಬೆಳೆದರೆ ಇನ್ನಷ್ಟು ಲಾಭ ಬರುತ್ತದೆ. ಈ ನಿಟ್ಟಿನಲ್ಲಿ ರೈತರು ಮಿಶ್ರ ಬೆಳೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಕಳೆದ ಬಾರಿ ಈ ಭಾಗದ ರೈತರಿಗೆ ಫಸಲು ಬೀಮಾ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದ ಕೀರ್ತಿ ಈ ಭಾಗದ ರೈತರಿಗೆ ಸಲ್ಲುತ್ತದೆ. ರೈತರಿಗೆ ಸುಮಾರು 24 ಕೋಟಿ ರು. ವಿಮೆ ಹಣ ನೇರವಾಗಿ ಜಮಾ ಆಗಿದೆ ಎಂದರು.

ಶಾಸಕರಿಗೆ ಪೂರ್ಣಕುಂಭ ಸ್ವಾಗತ

ಸಮಾರಂಭಕ್ಕೆ ಮುನ್ನ ಗ್ರಾಮಸ್ಥರು ಶಾಸಕರನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆಯೋಂದಿಗೆ ಬರಮಾಡಕೊಂಡರು. ವೇದಿಕೆಗೆ ಶಾಸಕರನ್ನು ಪೂರ್ಣಕುಂಭ ಕಲಶದೊಂದಿಗೆ ಕರೆದೊಯ್ಯಲಾಯಿತು.

ಇದೇ ವೇಳೆ ವಿಜ್ಞಾನಿಗಳು ಡ್ರೋಣ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಿಸುವುದನ್ನು ರೈತರಿಗೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಜಾವದ್ ನಸೀಮ್ ಖಾನಂ, ಉಪ ಕೃಷಿ ನಿರ್ದೇಶಕಿ ದೀಪಶ್ರೀ,ತಹಸೀಲ್ದಾರ್ ಮಹೇಶ್ ಪತ್ರಿ.ಕೃಷಿ ಸಹಾಯಕ ನಿರ್ದೇಶಕ ಮೋಹನ್,ಪಶು ಇಲಾಖೆ ಮಾರುತಿರೆಡ್ಡಿ.ಇಓ ಹೊನ್ನಯ್ಯ ಭಾಗವಹಿಸಿದ್ದರು.