ಸಂಘಕ್ಕೆ ಈ ವರ್ಷ 25,36,538 ರು. ನಿವ್ವಳ ಲಾಭ ಬಂದಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಗುಣಮಟ್ಟದ ಹಾಲು ಹಾಕುವ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಒಕ್ಕೂಟದಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ರಾಶುಗಳಿಗೆ ವಿಮೆ ಮಾಡಿಸುವಂತೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಲಗೂರು

ವ್ಯವಸಾಯದ ಜೊತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ರೈತರ ಆರ್ಥಿಕ ಸಮಸ್ಯೆಗಳಿಗೆ ಸಹಕಾರಿಯಾಗಲಿದೆ ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ತಿಳಿಸಿದರು.

ಸಮೀಪದ ದಳವಾಯಿ ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘಕ್ಕೆ ಈ ವರ್ಷ 25,36,538 ರು. ನಿವ್ವಳ ಲಾಭ ಬಂದಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಗುಣಮಟ್ಟದ ಹಾಲು ಹಾಕುವ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.

ಸಂಘದ ಆಡಳಿತ ಅಧಿಕಾರಿ ಎ.ಎನ್.ರವೀಶ್ ಮಾತನಾಡಿ, ಒಕ್ಕೂಟದಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ರಾಶುಗಳಿಗೆ ವಿಮೆ ಮಾಡಿಸುವಂತೆ ಸಲಹೆ ನೀಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಡಿ.ವೈ.ನಾಗರಾಜು ಮಾತನಾಡಿ, 10 ಲಕ್ಷ 75 ಸಾವಿರ ರು.ಗಳನ್ನು ಬೋನಸ್ ಹಣವನ್ನು ಅತಿ ಶೀಘ್ರದಲ್ಲೇ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದರು.

ಈ ವೇಳೆ ಸಂಘದ ಕಾರ್ಯನಿರ್ವಾಹಕ ಡಿ.ವೈ.ನಾಗರಾಜು (ಬಾಬು) ಮನ್ಮುಲ್ ನಿರ್ದೇಶಕ ಕೃಷ್ಣೆಗೌಡರಿಗೆ ಹಾಗೂ ವಿಸ್ತರಣಾಧಿಕಾರಿ ಮತ್ತು ಡಾ.ಸದಾಶಿವ ಮತ್ತು ಸಂಘದ ಆಡಳಿತ ಅಧಿಕಾರಿ ಎ.ಎನ್.ರವೀಶ್ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಮಳವಳ್ಳಿ ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಶಂಕರ, ಕಂಪ್ಯೂಟರ್ ಆಪರೇಟರ್ ಡಿ.ಎಸ್.ಪುರುಷೋತ್ತಮ, ಎಚ್.ಸುರೇಶ, ಹಾಲು ಪರೀಕ್ಷಕ ಚಂದ್ರಶೇಖರ ಮೂರ್ತಿ, ಕೆ.ಆರ್.ರಾಜು, ಕೃತಕ ಗರ್ಭಧಾರಣೆ ಕಾರ್ಯಕರ್ತೆ ಸುಮಾ ಸೇರಿದಂತೆ ಇತರರು ಇದ್ದರು.ಡೇರಿಗೆ 9.60 ಲಕ್ಷ ನಿವ್ವಳ ಲಾಭ: ಶೋಭಿತ್ ಕುಮಾರ್ಹಲಗೂರು: ಸಮೀಪದ ಲಿಂಗಪಟ್ಟಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಈ ಸಾಲಿನಲ್ಲಿ ₹9,60,000 ನಿವ್ವಳ ಲಾಭ ಬಂದಿದೆ ಎಂದು ವಿಸ್ತರಣಾಧಿಕಾರಿ ಶೋಭಿತ್ ಕುಮಾರ್ ತಿಳಿಸಿದರು. ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಲಾಭ ಬರಲು ನಿಮ್ಮ ಸಹಕಾರ ಅತ್ಯವಶ್ಯಕ. ಗುಣಮಟ್ಟದ ಹಾಲು ಸರಬರಾಜು ಮಾಡಿ ಒಕ್ಕೂಟವನ್ನು ಬೆಳೆಸಿ, ಸಂಘವನ್ನು ಉಳಿಸಿ ಎಂದು ಕರೆ ನೀಡಿದರು.ಈ ವೇಳೆ ಸರ್ಕಾರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕೆ.ಹರ್ಷವರ್ಧನ ಮತ್ತು ಬಿ.ಕೆ. ಅನುಷಾರಿಗೆ ಕಿರುಕಾಣಿಕೆ ನೀಡಿ ಅಭಿನಂದಿಸಲಾಯಿತು. ಶೋಭಿತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಕೃಷ್ಣೆಗೌಡ ವಾರ್ಷಿಕ ವರದಿ ಮಂಡಿಸಿದರು. ಸಭೆಯನ್ನು ಅಧ್ಯಕ್ಷ ಶಿವರಾಂ ಉದ್ಘಾಟಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಪದ್ಮ, ನಿರ್ದೇಶಕರಾದ, ಬಿ.ಗಂಗಾಧರ, ಉಮೇಶ್, ಬಾಲು ಮಹದೇವ, ಎಲ್.ಎಸ್.ರಮೇಶ, ಎಲ್.ಸಿ.ಮಂಜು, ಪುಟ್ಟಮ್ಮ, ಚಿಕ್ಕಹುಚ್ಚ ಹೆಗಡೆ, ಆರ್.ಜೀವನ್, ಕಾಳಯ್ಯ, ಹಾಲು ಪರೀಕ್ಷಿತ ಮಹದೇವಯ್ಯ, ಕಂಪ್ಯೂಟರ್ ಆಪರೇಟರ್ ಎಲ್.ಎಸ್.ಸುನೀಲ್, ಹಾಯಕ ಮುನಿಸಿದ್ದೇಗೌಡ ಎಲ್ ಸಿ ಇದ್ದರು.