ನಮ್ಮ ಭೂಮಿಯಲ್ಲಿರುವ ಮಣ್ಣಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು. ಅಂದಾಗ ಕೃಷಿಯಲ್ಲಿ ಯಶಸ್ಸಿ ಸಾಧಿಸಲು ಸಾಧ್ಯವಾಗುತ್ತದೆ. ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಪಡೆದುಕೊಳ್ಳಬೇಕು.

ಮುಂಡರಗಿ: ಮಣ್ಣು ರೈತನ ಕಣ್ಣು. ಪ್ರತಿಯೊಬ್ಬ ರೈತರು ಮಣ್ಣಿನ ಆರೋಗ್ಯ ಕಾಪಾಡಬೇಕು. ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಆರೋಗ್ಯ ಚೀಟಿ ಪಡೆದು ಅದರಲ್ಲಿ ಶಿಫಾರಸು ಅನ್ವಯ ರಸಗೊಬ್ಬರ ಬಳಸಬೇಕು ಎಂದು ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ತಿಳಿಸಿದರು.ಇತ್ತೀಚೆಗೆ ತಾಲೂಕಿನ ಜಂತ್ಲಿ- ಶಿರೂರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ವಾಟರ್‌ಶೆಡ್ ಮಹೋತ್ಸವ ಮತ್ತು 2025- 26ನೇ ಸಾಲಿನ ಅತ್ಮ ಯೋಜನೆಯಡಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಿಸಾನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ನಮ್ಮ ಭೂಮಿಯಲ್ಲಿರುವ ಮಣ್ಣಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು. ಅಂದಾಗ ಕೃಷಿಯಲ್ಲಿ ಯಶಸ್ಸಿ ಸಾಧಿಸಲು ಸಾಧ್ಯವಾಗುತ್ತದೆ. ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಪಡೆದುಕೊಳ್ಳಬೇಕು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ರೈತರಿಗೆ ಜಲಾನಯದ ಪರಿಕಲ್ಪನೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗೆ ಮತ್ತು ಹೊಸ ತಳಿಗಳನ್ನು ಬಳಸಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ವಿಜ್ಞಾನಿಗಳ ಸಲಹೆಯಂತೆ ಬೆಳೆಗಳ ಸಂರಕ್ಷಣೆ ಕಾರ್ಯ ಕೈಗೊಳ್ಳಬೇಕು ಎಂದರು.

ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಹಿರಿಯ ವಿಜ್ಞಾನಿ ಡಾ. ಎಸ್.ಕೆ. ಮುದ್ಲಾಪೂರ ಕಡಲೆ, ಜೋಳ, ಸೂರ್ಯಕಾಂತಿ ಮತ್ತು ಕುಸಬೆ ಬೆಳೆಯ ರೋಗ ಹಾಗೂ ಕೀಟ ನಿಯಂತ್ರಣದ ಕುರಿತು ಉಪನ್ಯಾಸ ನೀಡಿದರು.ಜಂತ್ಲಿ- ಶಿರೂರ ಗ್ರಾಪಂ ಅಧ್ಯಕ್ಷೆ ಜೈತುಂಬಿ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ರವಿ ದೊಡ್ಡಮನಿ, ಯಲ್ಲಪ್ಪ ಜಡಿ, ಯಲ್ಲಪ್ಪ ಹೊಂಬಳ, ಹೇಮಣ್ಣ ಪೂಜಾರ, ಪಿಡಿಒ ವಸಂತ ಗೋಕಾಕ, ವೀರೇಶ ಆವಾರಿ, ಎಸ್.ಬಿ. ರಾಮೇನಹಳ್ಳಿ, ಹನುಮಂತಪ್ಪ, ವಿರುಪಾಕ್ಷಪ್ಪ ಹಳ್ಳಿಕೇರಿಮಠ, ಶೇಖಪ್ಪ ದೇಸಾಯಿ, ರಂಗಪ್ಪ ಡಂಬಳ, ಮಂಜು ಬಳಗಾನೂರ, ಬಸವರಾಜ ಕಲಕೇರಿ, ಬಾಬೂಜಿ ಹಡಪದ, ಮಾರುತಿ ರಾಥೋಡ, ಅಕ್ಕಮಹಾದೇವಿ ಶೆಲವಡಿ, ಗೌರಿಶಂಕರ ಸಜ್ಜನರ, ರಾಕೇಶ ಕದಾಂಪೂರ ಉಪಸ್ಥಿತರಿದ್ದರು. ಬಸವರಾಜ ಬೇವಿನಮರದ ನಿರೂಪಿಸಿದರು.