ಸಕ್ಕರೆಯ ಎಂಎಸ್ಪಿ ದರ 60ರು. ಗೆ ಹೆಚ್ಚಿಸಬೇಕು. ಪ್ರತಿ ಟನ್ ಕಬ್ಬಿಗೆ 5500 ರೂ. ದರ ನೀಡಬೇಕು. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಗೋಷಿಸಬೇಕು ಎಂಬುದರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಇಲ್ಲಿನ ರಾ.ಹೆ. 150 ರ ರಾಮ ಮಂದಿರ ವೃತ್ತದಲ್ಲಿ ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಕಲಬುರಗಸಕ್ಕರೆಯ ಎಂಎಸ್ಪಿ ದರ 60ರು. ಗೆ ಹೆಚ್ಚಿಸಬೇಕು. ಪ್ರತಿ ಟನ್ ಕಬ್ಬಿಗೆ 5500 ರೂ. ದರ ನೀಡಬೇಕು. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಗೋಷಿಸಬೇಕು ಎಂಬುದರ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಇಲ್ಲಿನ ರಾ.ಹೆ. 150 ರ ರಾಮ ಮಂದಿರ ವೃತ್ತದಲ್ಲಿ ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.ರೈತರು 2 ದಿನಗಳಿಂದ ರಾಮ ಮಂದಿರದಿಂದ ಸಾಗುವ ಹೆದ್ದಾರಿ ಮೇಲೆಯೇ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ ಸಂಚಾರಕ್ಕೆ ಸಂಚಕಾರ ಬಂದಿದೆ. ಸರಕು ವಾಹನಗಳು, ಬಸ್ಗಳು ಪರ್ಯಾಯ ಮಾರ್ಗದಲ್ಲಿ ಚಲಿಸಲು ಪೊಲೀಸರು ನಿರ್ದೇಶನ ನೀಡಿದ್ದಾರಾದರೂ ಎಲ್ಲ ಕಡೆ ಭಾರಿ ವಾಹನ ದಟ್ಟಣೆ ಕಾಡುತ್ತಿರುವುದರಿಂದ ಹೆದ್ದಾರಿ ಸುತ್ತಮುತ್ತ ಸಂಚಾರ ಸಮಸ್ಯೆ ಉಂಟಾಗಿದೆ.ಏತನ್ಮಧ್ಯೆ ರಾಮ ಮಂದಿರ ವೃತ್ತದ ಸುತ್ತಮುತ್ತ ನಾಲ್ಕೂ ದಿಕ್ಕಿನಲ್ಲಿ ಸಂಚಾರ ನಿಷೇಧಿಸಿ ಪೊಲೀಸರು 3 ಸುತ್ತು ಬ್ಯಾರಿಕೇಡ್ ಹಾಕಿದ್ದರಿಂದ ಸಾಮಾನ್ಯ ಜನ ತಮ್ಮ ನಿತ್ಯದ ಅಗತ್ಯಗಳಿಗಾಗಿ ರಾಮ ಮಂದಿರ ಸುತ್ತಲಿರುವ ತರಕಾರಿ, ದಿನಸಿ, ಔಷಧಿ ಮಳಿಗೆಗಳಿಗೂ ತೆರಳಲು ಸಂಕಷ್ಟ ಎದುರಿಸಬೇಕಾಯಿತು.
ಸೇಡಂ ರಸ್ತೆಯ ನಾಗನಹಳ್ಳಿಯ ಬಳಿ, ರಾಮ ಮಂದಿರ ಬಳಿ, ಜೇವರ್ಗಿ ರಸ್ತೆ ಹಾಗೂ ಹೈಕೋರ್ಟ್ ರಸ್ತೆಯಲ್ಲೆಲ್ಲಾ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ತಡೆದಿದ್ದರಿಂದ ಜನ ಪರದಾಡುವಂತಾಯಿತು.ಕಲಬುರಗಿ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. 24 ಗಂಟೆಯಿಂದಲೂ ಕಲಬುರಗಿ ಮೂಲಕ ಹಾದು ಹೋಗುವ ಬೀದರ್- ಬೆಂಗಳೂರು- ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ಸ್ತಬ್ಧಗೊಂಡಿವೆ.ಧರಣಿಯಿಂದಾಗಿ ಶಹಾಬಾದ್ ಮಾರ್ಗವಾಗಿ ಅನೇಕ ಸರಕು ವಾಹನ ಸಂಚರಿಸಲು ಮುಂದಾಗಿವೆಯಾದರೂ ಈ ಮಾರ್ಗದಲ್ಲಿ ಭಾರಿ ದಟ್ಟಣೆ ಕಾಡುತ್ತಿರುದರಿಂದ ಅನೇಕ ವಾಹನಗಳು ನಡು ರಸ್ತೆಯಲ್ಲೇ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿವೆ. ಇತ್ತ ರಾಮ ಮಂದಿರ ವೃತ್ತದಲ್ಲೇ ಠಿಕಾಣಿ ಹೂಡಿರುವ ರೈತ ಮುಖಂಡರು ಸರ್ಕಲ್ ಪೂರ್ತಿ ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ರಾತ್ರಿ ಹೊತ್ತು ಹೆದ್ದಾರಿಯಲ್ಲೇ ಮಲಗಿದ್ದಾರೆ. ಎತ್ತಿನ ಬಂಡಿಗಳನ್ನು ತಂದು ಹೆದ್ದಾರಿಯಲ್ಲಿ ನಿಲ್ಲಿಸಿ ಸಂಚಾರಕ್ಕೆ ತಡೆ ಒಡ್ಡಲಾಗಿದೆ.ಹೋರಾಟಕ್ಕೆ ಶಾಸಕ ಅಲ್ಲಂಪ್ರಭು ಬೆಂಬಲ: ರೈತರ ಹೋರಾಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಬೆಂಬಲ ಸೂಚಿಸಿ ಧರಣಿ ಸ್ಥಳಕ್ಕೆ ಭೇಟಿ ನೀಡಿದರು. ರೈತರು ಮನವಿ ಸಲ್ಲಿಸಿದಾಗ ಕೇಂದ್ರ ಸರ್ಕಾರ ದೆಹಲಿಗೆ ಬನ್ನಿ ಅಂದಿತ್ತು. ಅಲ್ಲಿಗೆ ಬಂದರೆ ಮಾತಾಡೋಣ ಎಂದಿತ್ತು. ಅವರು ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿತ್ತು. ಹೀಗಾಗಿ ರಾಜ್ಯದ ಜನರು ಕಾಯುತ್ತಾ ಕೂತಿದ್ದರು. ಆದರೆ ದೆಹಲಿಯಿಂದ ಸಿಹಿ ಸುದ್ದಿ ಬರಲೇ ಇಲ್ಲ. ಹೀಗಾಗಿ ರೈತರು ಹೋರಾಟಕ್ಕೆ ಇಳಿಯುವಂತಾಗಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದರು.ರೈತರಿಗಾದ ಅವಮಾನ ನಮಗೆಲ್ಲರಿಗೂ ಆದ ಅವಮಾನ. ನ್ಯಾಯಯುತ, ಶಾಂತಿಯುತ ಹೋರಾಟ ನಡೆದಿದೆ.ಇದು ಹಿಂಸಾರಹಿತವಾದ ಹೋರಾಟ, ಕೇಂದ್ರ ಎಚ್ಚೆತ್ತುಕೊಳ್ಳದಿದ್ದರೆ ಅಹಿಂಸೆಗೆ ತಿರುಗುತ್ತದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಅವರಿಗೆ ಚರ್ಮ ದಪ್ಪವಾಗಿದೆ ಎಂದರ್ಥ ಎಂದು ಧರಣಿಯಲ್ಲಿರುವ ರೈತ ಮುಖಂಡರು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರೈತ ಮುಖಂಡರಾದ ಜಗದೀಶ ಪಾಟೀಲ ರಾಜಾಪುರ, ಗುರಪ್ಪ ಪಾಟೀಲ, ಸಿದ್ಧರಾಮ ಬೆಣ್ಣೂರ, ಶರಣಬಸಪ್ಪ ಮಮಶೆಟ್ಟಿ, ವೀರೇಶ ಚಿತ್ತಾಪುರ, ವೀರೇಶ ದೊಡ್ಡಮನಿ, ಮಲ್ಲಣಗೌಡ ಬಿರಾದಾರ, ಶಾಂತವೀರಪ್ಪ ಸಸ್ತಾಪುರ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿಯ ಅದ್ಯಕ್ಷ ಮಹಾದೇವಪ್ಪ ಗೌಡ ಪಾಟೀಲ್ ನರಿಬಳ್, ಕೆಪಿಆರ್ಎಸ್ನ ಶರಣಬಸಪ್ಪ ಮಮಶೆಟ್ಟಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.