ಕಾರ್ಖಾನೆಗಳಿಗೆ ಸರ್ಕಾರದ ನೆರವು ಇಲ್ಲದಿದ್ದರೇ ರೈತರಿಗೆ ಸಂಕಟ

| Published : Aug 29 2025, 01:00 AM IST

ಕಾರ್ಖಾನೆಗಳಿಗೆ ಸರ್ಕಾರದ ನೆರವು ಇಲ್ಲದಿದ್ದರೇ ರೈತರಿಗೆ ಸಂಕಟ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರತತ್ವದ ಅಡಿಯಲ್ಲಿ ನಡೆಯುತ್ತಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡಿ ಶಕ್ತಿ ತುಂಬದಿದ್ದರೇ ಮುಂಬರುವ ದಿನಗಳಲ್ಲಿ ರೈತರಿಗೆ ಸಂಕಟ ಎದುರಾಗಬಹುದು ಎಂದು ಹಿಡಕಲ್‌ ಡ್ಯಾಮ್‌ನ ಸಂಗವ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಹಕಾರತತ್ವದ ಅಡಿಯಲ್ಲಿ ನಡೆಯುತ್ತಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡಿ ಶಕ್ತಿ ತುಂಬದಿದ್ದರೇ ಮುಂಬರುವ ದಿನಗಳಲ್ಲಿ ರೈತರಿಗೆ ಸಂಕಟ ಎದುರಾಗಬಹುದು ಎಂದು ಹಿಡಕಲ್‌ ಡ್ಯಾಮ್‌ನ ಸಂಗವ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಹಿಡಕಲ್‌ ಡ್ಯಾಂನಲ್ಲಿ ಶ್ರೀ ಸಂಗಮ ಸಹಕಾರಿ ಸಕ್ಕರೆಯ ಕಾರ್ಖಾನೆ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು ಕೂಡಿಕೊಂಡು ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು. ನಮ್ಮ ಕಾರ್ಖಾನೆಯಲ್ಲಿ ಪ್ರತಿದಿನ 2500 ಮೆಗಾ ಟನ್‌ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಸದರಿ ಹಂಗಾಮಿನಲ್ಲಿ ಒಟ್ಟು 214045-425 ಮೆ.ಟನ್‌ ಕಬ್ಬು ನುರಿಸಿ ಶೇ.12.09 ಇಳುವರಿಯಲ್ಲಿ ಒಟ್ಟು 2,58,888 ಕ್ವಿಂಟಲ್‌ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಪ್ರತಿದಿನ 5 ಸಾವಿರ ಮೆ.ಟನ್‌ ಕಬ್ಬು ನುಡಿಸಿದರೇ ಕಾರ್ಖಾನೆಗೆ ಲಾಭವಾಗುತ್ತದೆ. ನಮ್ಮಕಾರ್ಖಾನೆಯಲ್ಲಿ ಪ್ರಥಮ ಹಂತದಲ್ಲಿ 8.00 ಮೇ. ವ್ಯಾಟ್‌ ಉತ್ಪಾದಿಸುವ ಘಟಕ ಹೊಂದಿದ್ದು, ಸನ್ 2023-24ನೇ ಸಾಲಿನ ಹಂಗಾಮಿನಲ್ಲಿ 1,47,49,900 ಯೂನಿಟ್‌ ಉತ್ಪಾದಿಸಲಾಗಿದೆ. 31-03-2025 ಅಂತ್ಯಕ್ಕೆ ಅವಧಿ ಸಾಲ ₹44.99 ಕೋಟಿ ದುಡಿಯುವ ಬಂಡವಾಳ, ಸಾಲ ₹56.81 ಕೋಟಿ ಬಡ್ಡಿ ಲೋನ್‌ ಇದೆ ಎಂದು ವಿವರಿಸಿದರು.ಮಾಜಿ ಸಚಿವ ಸಚಿವ ಶಶಿಕಾಂತ ನಾಯಕ ಮಾತನಾಡಿ, ಶ್ರೀ ಸಂಗವ ಸಹಕಾರಿ ಸಕ್ಕರೆ ಕಾರ್ಖಾನೆಯ ಆರಂಭವಾದ ನಂತರ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಿತ್ತು. ಆಡಳಿತ ಮಂಡಳಿಯವರು ರೈತರು ಶ್ರಮದ ಬೆವರಿಗೆಯೋಗ್ಯ ಬೆಲೆ ಕೊಡಲು ಬದ್ದ ಇದ್ದಾರೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.ಶ್ರೀ ಸಂಗವ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಬಸಗೌಡ ಬಾ.ಪಾಟೀಲ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಪೂಜಾರ ವಾರ್ಷಿಕ ವರದಿ ಓದಿದರು. ಕಾರ್ಯಾಲಯ ಅಧೀಕ್ಷಕ ಅಣ್ಣಪ್ಪ ಅಕ್ಕತೇಂಗರಹಾಳ ಕಾರ್ಯಕ್ರಮ ನಿರೂಪಿಸಿದರು. ದುರದುಂಡಿ ಭರಮಗೌಡನವರ ವಂದಿಸಿದರು. ವಾರ್ಷಿಕ ಮಹಾಸಭೆಯಲ್ಲಿ ನಿರ್ದೇಶಕರಾದ ಜಿ.ಎಂ.ಪಾಟೀಲ, ಅರ್ಜುನ ನಾಯಕ ಪಾಟೀಲ, ಸುಭಾಷ ಪಾಟೀಲ, ಸಂಪತ ಬಾಂದುರ್ಗೆ, ಸುನಿಲ ಅಣ್ಣಸಾಬ ಪರ್ವತರಾವ, ಸಂಗೀತಾಕರಗುಪ್ಪಿ, ರಾಜಶ್ರೀ ಕವಟಗಿಮಠ, ಶ್ರೀಮಂತ ಸನ್ನಾನಾಯಕ, ಶಿವಪ್ಪ ಘಸ್ತಿ, ರವೀಂದ್ರ ಪಾಟೀಲ, ಅಮರನಾಥ ಮಹಾಜನಶೆಟ್ಟಿ, ಲಗಮಣ್ಣ ಕೆಂಪಮಲಕಾರಿ ಹಾಗೂ ಕಾರ್ಖಾನೆ ವ್ಯಾಪ್ತಿಗೆ ಬರುವ ಹುಕ್ಕೇರಿ, ಗೋಕಾಕ, ಬೆಳಗಾವಿ ಚಿಕ್ಕೋಡಿ ಎಲ್ಲ ಸರ್ವ ಸದಸ್ಯರು ಉಪಸ್ಥಿತರಿದ್ದರು.ಸಕ್ಕರೆ ಕಾರ್ಖಾನೆ ಆರಂಭವಾದ ನಂತರ ಹಲವು ವಾರ್ಷಿಕ ಸಭೆಗಳು ತಂಟೆ, ತಕರಾರು ಮಧ್ಯೆ ಕೇವಲ 5 ನಿಮಿಷಗಳಲ್ಲಿ ಮುಗಿದು ಹೋಗುತ್ತಿದ್ದವು. ಆದರೆ, ಈಗ ಎಲ್ಲ ವಾರ್ಷಿಕ ಮಹಾಸಭೆಗಳು ಶಾಂತ ರೀತಿಯಲ್ಲಿ ಜರಗುತ್ತ ಬಂದಿವೆ.

-ರಾಜೇಂದ್ರ ಪಾಟೀಲ, ಹಿಡಕಲ್‌ ಡ್ಯಾಮ್‌ನ ಸಂಗವ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು.