ಕೊಬ್ಬರಿ ಬೆಲೆ ಬಗೆಹರಿಸಲು ರೈತರು ನನ್ನ ಬೆಂಬಲಿಸಿ: ಸಿಇಒ ಅಶೋಕ್

| Published : May 12 2024, 01:17 AM IST

ಕೊಬ್ಬರಿ ಬೆಲೆ ಬಗೆಹರಿಸಲು ರೈತರು ನನ್ನ ಬೆಂಬಲಿಸಿ: ಸಿಇಒ ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಅನುಭವಿಸುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳುವಂತೆ ಹಾಸನ ಮೆಗಾಪುಡ್ ಪಾರ್ಕ್ ಸಿಇಒ ಅಶೋಕ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ರೈತರು ಅನುಭವಿಸುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳುವಂತೆ ಹಾಸನ ಮೆಗಾಪುಡ್ ಪಾರ್ಕ್ ಸಿಇಒ ಅಶೋಕ್ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನ ಮೆಗಾ ಫುಡ್ ಪಾರ್ಕ್‌ ಎಲ್ಲ ಪದಾರ್ಥಗಳು ರಫ್ತು ಗುಣಮಟ್ಟ ಹೊಂದಿರುವ ಕಾರಣ ಫುಡ್ ಪಾರ್ಕ್‌ ನ ಜಾಗವಾದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಒಡನಹಳ್ಳಿ ಗ್ರಾಮ ಸರ್ವೇ ನಂಬರ್ 124/12 ಅನ್ನು ಕರ್ನಾಟಕ ಅಗ್ರಿ ಬ್ಯುಸಿನೆಸ್‌ ಮತ್ತು ಫುಡ್ ಪ್ರೋಸಸಿಂಗ್ ಪಾಲಿಸಿ 2015 ಹಾಗೂ ಇಂಡಸ್ಟ್ರಿ ಪಾಲಿಸಿ 2020-24 ಅನ್ವಯ ಅಗ್ರಿ ಇಒಯು ಕೃಷಿ ರಫ್ತು ಆಧಾರಿತ ಘಟಕ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರದ ಗಮನಕ್ಕೆ ತಂದು ಘೋಷಿಸಬೇಕು. ಇದಕ್ಕೆ ಬೇಕಿರುವ ಎಲ್ಲ ಷರತ್ತುಗಳಿಗೂ ಮತ್ತು ನಿಬಂಧನೆಗಳಿಗೂ ನಾವು ಅರ್ಹತೆ ಪಡೆದುಕೊಂಡಿರುತ್ತೇವೆ ಎಂದರು.

ಘೋಷಿಸಿದ ಮರುದಿನವೇ ಸಾವಿರ ಮೆಟ್ರಿಕ್ ಟನ್ ಕೊಬ್ಬರಿಯನ್ನು ಕನಿಷ್ಠ 11000 ಗರಿಷ್ಟ 11,500 ರು.ಗಳಂತೆ ಖರೀದಿ ಮಾಡಲು ನಿರ್ಧರಿಸಲಾಗಿದೆ. ರೈತರಿಗೆ ಯಾವುದೇ ಷರತ್ತು ಹಾಕದೆ, ಯಾವುದೇ ಗರಿಷ್ಟ ಮಟ್ಟ ಘೋಷಿಸದೆ ಖರೀದಿ ಮಾಡಲು ನಿರ್ಧರಿಸಲಾಗಿದೆ. ಖರೀದಿಯಲ್ಲಿ ಪಾರದರ್ಶಕತೆ ಕಾಯುವ ಉದ್ದೇಶದಿಂದ ರೈತರು ತಂದ ಕೊಬ್ಬರಿಯನ್ನು ಅವರ ಮುಂದೆಯೇ ಗುಣಮಟ್ಟ ಪರೀಕ್ಷೆ ಮಾಡಿ ನಂತರ ಪಡೆದುಕೊಂಡು ಅಲ್ಲಿಯೇ ತಕ್ಷಣವೇ ಹಣ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಮತ್ತು ಇದರ ವಿಡಿಯೋ ಚಿತ್ರೀಕರಣ ಸಹ ನಡೆಸಲಾಗುವುದು. ಇದರಿಂದ ರೈತರಿಗೂ ಒಂದಷ್ಟು ನಂಬಿಕೆ ತರಿಸುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ 16 ನೇ ಫೆಬ್ರವರಿ 2024 ರಂದು ಮಂಡಿಸಿದ ಬಜೆಟ್ ಪ್ರತಿಯ 41ನೇ ಅಂಶದ ಪ್ರಕಾರ ನಾವು ಕೃಷಿ ವಲಯದ ನವೋದ್ಯಮವಾಗಿರುತ್ತೇವೆ. 2019 ಗೆಜೆಟ್ ನೋಟಿಫಿಕೇಶನ್ ಪ್ರಕಾರ ಅರ್ಹತೆ ಹೊಂದಿರುತ್ತೇವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ) ಉದ್ಯೋಗ ಘಟಕವು ಉತ್ಪನ್ನಗಳ ನಾವೀನ್ಯತೆ, ಅಭಿವೃದ್ಧಿ ಅಥವಾ ಸುಧಾರಣೆಗೆ ಕೆಲಸ ಮಾಡುತ್ತಿದೆ ಅಥವಾ ಪ್ರಕ್ರಿಯೆಗಳು ಅಥವಾ ಸೇವೆಗಳು, ಅಥವಾ ಇದು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಸ್ಕೆಲೆಬಲ್ ವ್ಯವಹಾರ ಮಾದರಿಯಾಗಿದ್ದರೆ ಉದ್ಯೋಗ ಸೃಷ್ಟಿ ಅಥವಾ ಸಂಪತ್ತು ಸೃಷ್ಟಿ. ರೈತರು ಅನುಭವಿಸುತ್ತಿರುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ಮುಂದೆ ಬಂದಿರುತ್ತೇವೆ, ಆದ ಕಾರಣ ಎಲ್ಲ ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳಬೇಕು ಎಂದು ಮನವಿ ಮಾಡಿದರು.