ಈ ಬಾರಿ ಮತಕ್ಷೇತ್ರವೂ ಸೇರಿದಂತೆ ರಾಜ್ಯದ ಬಹುತೇಕಗಳಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಸಂಪೂರ್ಣ ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸರ್ಕಾರ ಇಲ್ಲಿತನಕವೂ ಒಂದು ನೈಯಾಪೈಸೆ ಬೆಳೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾಕ್ಕಾಗಿ ಆಗ್ರಹಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ನ.27 ರಂದು 11 ಗಂಟೆಗೆ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಇಡಿ ರಾಜ್ಯಾದ್ಯಂತ ರೈತರ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಈ ಬಾರಿ ಮತಕ್ಷೇತ್ರವೂ ಸೇರಿದಂತೆ ರಾಜ್ಯದ ಬಹುತೇಕಗಳಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಸಂಪೂರ್ಣ ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸರ್ಕಾರ ಇಲ್ಲಿತನಕವೂ ಒಂದು ನೈಯಾಪೈಸೆ ಬೆಳೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಪರಿಹಾಕ್ಕಾಗಿ ಆಗ್ರಹಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ನ.27 ರಂದು 11 ಗಂಟೆಗೆ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಇಡಿ ರಾಜ್ಯಾದ್ಯಂತ ರೈತರ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ದಾಸೋಹ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಕ ಮಳೆ ಸುರಿದ ಪರಿಣಾಮ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿ ಸುಮಾರು 52 ದಿನಗಳು ಗತಿಸಿದರೂ ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆ ಪರಿಹಾರ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿದೆ. ಪ್ರಾರಂಭದಿಂದಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯಯೇಂದ್ರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸಿಎಂ ಸಿದ್ದರಾಮ್ಯನವರು ಗುಲಬುರ್ಗಕ್ಕೆ ತೆರಳುವಾಗ ಕೇವಲ ಸಾಂಕೇತಿಕ ವೈಮಾನಿಕ ಸಮೀಕ್ಷೆ ನೋಡಿದಂತೆ ಮಾಡಿ ಯಾವ ರೈತರಿಗೆ ಒಂದು ನೈಯಾ ಪೈಸೆ ಪರಿಹಾರ ಕೊಡದೇ ಬರಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯಾದ್ಯಂತವಿರುವ ಎಲ್ಲ 224 ಮತಕ್ಷೇತ್ರದಲ್ಲಿ ಹಾಗೂ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕೂಡ ರೈತರ ಪ್ರತಿಭಟನೆ ನಡೆಸುವ ಮೂಲಕ ಸ್ಥಳೀಯ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಅದು ಪ್ರಥಮವಾಗಿ ನ.27 ರಂದು ಮುದ್ದೇಬಿಹಾಳದಿಂದಲೇ ಈ ಹೋರಾಟ ಪ್ರಾರಂಭಿಸಲಾಗುವುದು. ಈ ವೇಳೆ ಸುಮಾರು 2 ರಿಂದ 3 ಸಾವಿರ ರೈತರು ಭಾಗವಹಿಸಲಿದ್ದಾರೆ. ಕಾರಣ ರೈತರು ಪಕ್ಷಾತೀತವಾಗಿ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕೋರಿದರು.ಕೇವಲ ಬೆಳೆ ಪರಿಹಾರಕ್ಕಾಗಿ ಮಾತ್ರ ಹೋರಾಟ ನಡೆಸದೇ ರೈತರು ಬೆಳೆ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ₹2 ಸಾವಿರಗಳ ಬೆಂಬಲ ಬೆಲೆ ನಿಗದಿಗೊಳಿಸಿದೆ. ಆದರೆ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜತೆಗೆ ಈ ಹಿಂದೆ 2019ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಮಾನುಸಾರ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₹10 ಸಾವಿರಗಳ ಬೆಳೆಪರಿಹಾರ ನೀಡಿದ್ದೇವೆ. ಆಗ ₹2.34 ಲಕ್ಷ ಕೋಟಿ ಅಂದಿನ ನಮ್ಮ ಸರ್ಕಾರದ ಬಜೆಟ್ ಆಗಿತ್ತು. ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹5 ಲಕ್ಷಗಳನ್ನು ನೀಡಲಾಗಿತ್ತು. ಭಾಗಶಃ ಮನೆ ಹಾನಿಗೊಳಗಾದವರಿಗೆ 3 ಲಕ್ಷ, ಮನೆ ದುರಸ್ಥಿಗಾಗಿ ₹1 ಲಕ್ಷಗಳನ್ನು ನೀಡಲಾಗಿತ್ತು. ಆದರೆ, ಇಂದಿನ ಸರ್ಕಾರದ ₹4.17 ಲಕ್ಷ ಕೋಟಿ ಬಜೆಟ್ ಇದ್ದರೂ ಕೂಡ ಪ್ರತಿ ಹೆಕ್ಟೇರ್‌ಗೆ ₹8.5 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ ವಿನಃ ಒಬ್ಬ ರೈತನಿಗೂ ಬೆಳೆಪರಿಹಾರ ಕೊಟ್ಟಿಲ್ಲ. ಸದ್ಯ ಸರ್ಕಾರದ ಬಜೆಟ್ ಆಧಾರದ ಮೇಲೆ ಹೆಚ್ಚುವರಿಯಾಗಿ ₹20 ಸಾವಿರಗಳ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂಬುವುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.ಪ್ರತಿ ಗ್ರಾಮ ಪಂಚಾಯತಿಗೊಂದರಂತೆ ತೊಗರಿ ಕೇಂದ್ರ ತೆರೆಯವ ಮೂಲಕ ರೈತರು ತುರ್ತಾಗಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಜತೆಗೆ ಬರಿ ಬೆಳಗಾವಿ ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯದ ಎಲ್ಲ ಕಡೆಗಳಲ್ಲೂ ಕಬ್ಬಿನ ಬೆಳೆಗೆ ₹3300 ಬೆಂಬಲ ಬೆಲೆ ನಿಗದಿಪಡಿಸಿ ದೊರಕುವಂತಾಗಬೇಕು. ₹10 ಲಕ್ಷದವರೆಗೆ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಕೋಡುವಂತಾಗಬೇಕು. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್‌ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ₹6 ಸಾವಿರ ಕೊಟ್ಟರೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ರಾಜ್ಯ ಸರ್ಕಾರದಿಂದ ₹4 ಸಾವಿರ ನೀಡುತ್ತಿದ್ದ ಯೋಜನೆಯನ್ನು ಸದ್ಯ ಈ ಸರ್ಕಾರ ನಿಲ್ಲಿಸಿದ್ದು, ಈ ಯೋಜನೆ ರೈತರ ಬದುಕಿಗೆ ಅನುಕೂಲವಾಗಲಿದೆ. ಜತೆಗೆ ರೈತರ ಹೊಲಗಳಿಗೆ ವಿದ್ಯುತ್ ಟ್ರಾನ್ಸಫರ್ಮ್‌ರಗಳನ್ನು ಅಳವಡಿಸುವಂತಹದ್ದು ಜತೆಗೆ ರೈತರ ಮಕ್ಕಳಿಗೆ ವಿದ್ಯಾನಿಧಿ ಸೇರಿದಂತೆ ಕೈಬಿಟ್ಟ ಅನೇಕ ಜನಪರ ಈ ಯೋಜನೆಗಳನ್ನು ಪುನಃ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಂಜಯ ಬಾಗೇವಾಡಿ, ಸಿದ್ಧರಾಜ ಹೊಳಿ, ಶ್ರೀಶೈಲ ದೊಡಮನಿ, ಮದನಸ್ವಾನಿ ಹಿರೇಮಠ, ಸಂಗಮೇಶ ಗುಂಡಕನಾಳ, ರಾಜಶೇಖರ ಹೊಳಿ, ಲಕ್ಷ್ಮಣ ಬಿಜ್ಜೂರ, ಸಂಗಣ್ಣ ಹತ್ತಿ, ನಾಗೇಶ ಕವಡಿಮಟ್ಟಿ, ನಿಖಿಲ ಮಲಗಲದಿನ್ನಿ, ಸಂಗಮ್ಮ ದೇವರಳ್ಳಿ, ವಿಜಯ ಬಡಿಗೇರ, ಅಶೋಕ ವನಹಳ್ಳಿ, ಶಂಕರಗೌಡ ಶಿವಣಗಿ, ಹುಲಗಪ್ಪ ಕಿಲಾರಟ್ಟಿ, ಗುರುನಾಥ ದೇಶಮುಖ, ರವೀಂದ್ರ ಬಿರಾದಾರ, ಶ್ರೀಕಾಂತ ಹಿರೇಮಠ, ಶಾಂತಪ್ಪ ನಾಯಕಮಕ್ಕಳ, ಕಾವೇರಿ ಕಂಬಾರ, ಮತ್ತಣ್ಣ ನಾಯಕನಕ್ಕಳ ಸೇರಿದತೆ ಹಲವರು ಇದ್ದರು.