ರೈತರು, ವ್ಯಾಪಾರಸ್ಥರು, ಬಡವರಿಗೆ ಸಹಕಾರ ಸಂಘಗಳಿಂದ ಅನುಕೂಲ

| Published : Jan 26 2025, 01:33 AM IST

ಸಾರಾಂಶ

ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೈತರ ಅನುಕೂಲತೆಗಾಗಿ ಜಾರಿಗೊಳಿಸಿವೆ

ಮರಿಯಮ್ಮನಹಳ್ಳಿ; ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೈತರ ಅನುಕೂಲತೆಗಾಗಿ ಜಾರಿಗೊಳಿಸಿವೆ. ಸಹಕಾರ ತತ್ವದಡಿ ರೈತರಿಗೆ ಮತ್ತು ಸಹಕಾರಿಗಳಿಗೆ ನೆರವಾಗಿ ನೆರವಾಗಲಿವೆ ಎಂದು ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಹೊಸಪೇಟೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ ತಿಳಿಸಿದರು.

ಇಲ್ಲಿನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾಮಂಡಳ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ ಹೊಸಪೇಟೆ ಸಹಯೋಗದಲ್ಲಿ ಕ್ಲಸ್ಟರ್‌ ಮಟ್ಟದ ಸದಸ್ಯ ಶಿಕ್ಷಣ ಯೋಜನೆಯ ತರಗತಿಗಳಿಗೆ ಭಾಗವಹಿಸುವ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರು ಸ್ವಾಭಿಮಾನದಿಂದ ಜೀವನ ಸಾಗಿಸಲು ಸಹಕಾರ ಸಂಘಗಳು ಅಪಾರವಾದ ಕೊಡುಗೆ ನೀಡಿವೆ. ರೈತರಿಗೆ ಮತ್ತು ಜನಸಾಮಾನ್ಯರಿಗೆ ಇನ್ನಷ್ಟು ಸಹಾಯ ನೀಡಲು ಸಹಕಾರ ಸಂಘಗಳು ಮುಂದಾಗಿವೆ. ಸಹಕಾರ ಸಂಘಗಳನ್ನು ಜನರು ಸಮರ್ಪಕವಾಗಿ ಬಳ‍ಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾಗಿದೆ. ಸಹಕಾರಿ ತತ್ವದ ಮೂಲಕ ವಿವದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಲ್ಲಿ ಅನೇಕ ಜನಪರವಾದ ಯೋಜನೆಗಳಿವೆ. ಅವುಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು.

ಸಹಕಾರ ಸಂಘಗಳು ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ, ಬಡವರಿಗೆ ಅನುಕೂಲವಾಗಿವೆ. ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ, ರೈತರಿಗೆ ಬಿತ್ತನೆಬೀಜ, ಗೊಬ್ಬರ ಸೇರಿದಂತೆ ಇತರೆ ಕೃಷಿ ಸಾಮಗ್ರಿಗಳನ್ನು ಸಹಕಾರ ಸಂಘದ ಮೂಲಕ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದರು.

ಸಹಕಾರ ಸಂಘವನ್ನು ನಮ್ಮ ಹಿರಿಯರು ಬಹಳ ದೂರದೃಷ್ಟಿಯಿಂದ ಕಟ್ಟಿದ್ದಾರೆ. ಅದರ ಉಪಯೋಗವನ್ನು ನಾವೆಲ್ಲರೂ ಪಡೆದುಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ ಜಿಲ್ಲಾ ಸಹಕಾರ ಶಿಕ್ಷಕ ಶ್ರೀನಿವಾಸ ಗೊಲ್ಲರ್‌ ಸಭೆಯಲ್ಲಿ ಮಾತನಾಡಿದರು.

ಮರಿಯಮ್ಮನಹಳ್ಳಿಯ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿದೇರ್ಶಕರಾದ ಸದಸ್ಯರಾದ ಮಾಬುಸಾಹೇಬ್‌, ಈ.ಶೇಷಪ್ಪ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ. ಬಸವರಾಜಯ್ಯ, ಮುಖಂಡರಾದ ಎಚ್‌. ಮಂಜುನಾಥ, ಕೊಟ್ಗಿ ಮಾರುತೇಶ್‌, ಕೆ.ರಾಮಚಂದ್ರಪ್ಪ, ಮಂಜಮ್ಮ, ಜೀನುಗಾರ್‌ ವೀರಾಂಜಿನೇಯ, ಹುರುಕೊಳ್ಳಿ ಸುದರ್ಶನ್, ಶ್ರೀನೀವಾಸ, ಹೊನ್ನೂರಬಾಷಾ, ಸಿಬ್ಬಂದಿ ಎಚ್‌.ಕಿರಣ್, ಕೆ.ಎಂ. ವಿರುಪಾಕ್ಷಯ್ಯ, ಎಸ್‌. ಬಸವರಾಜ, ಕೊಟ್ಗಿ ಚಂದ್ರಶೇಖರ್‌ ಉಪಸ್ಥಿತರಿದ್ದರು.