ಸಗಣಿಗೊಬ್ಬರದಲ್ಲಿ ದೊಡ್ಡ ಶಕ್ತಿ ಇದ್ದು ಅದರಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಜತೆಗೆ ಸಸ್ಯಗಳ ಬೆಳವಣಿಗೆಗೆ ಬೇಕಾದ ಹೇರಳವಾದ ಪೋಷಕಾಂಶಗಳನ್ನು ಕೊಟ್ಟಿಗೆ ಗೊಬ್ಬರ ಒದಗಿಸುತ್ತದೆ. ಇದರಿಂದಾಗಿ ಸಗಣಿಗೆ ಬಂಗಾರದ ಬೆಲೆ ಬಂದಿದೆ.
ಧಾರವಾಡ:
ರಾಸಾಯನಿಕಗೊಬ್ಬರದ ವ್ಯಾಪಕ ಬಳಕೆಯಿಂದ ಸಗಣಿಗೊಬ್ಬರ ಉಪಯೋಗ ಮಾಡದ ಸ್ಥಿತಿ ಇತ್ತು. ಆದರೆ, ಪ್ರಸಕ್ತ ದಿನದಲ್ಲಿ ರೈತರು ಮತ್ತೆ ಸಾವಯವ ಕೃಷಿಯತ್ತ ವಾಲುತ್ತಿದ್ದು ಸಗಣಿಗೊಬ್ಬರಕ್ಕೆ ಹೆಚ್ಚು ಬೇಡಿಕೆ ಬಂದಿದೆ ಎಂದು ಹಿರೇಗುಂಜಳದ ಘಜಜಾಮೃತ ರೈತ ಮಲ್ಲೇಶಪ್ಪ ಬಿಸಿರೊಟ್ಟಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಬಸಪ್ಪ ಶ. ಮುಂದಿನಮನಿ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತು ಬಸವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಸವ ಕೃಷಿ ಪ್ರಶಸ್ತಿ ಸ್ವೀಕರಿಸಿ ತಿಪ್ಪೆಯನ್ನು ತುಪ್ಪ ಮಾಡುವುದು ಎಂಬ ಕುರಿತು ಉಪನ್ಯಾಸ ನೀಡಿದರು.
ಸಗಣಿಗೊಬ್ಬರದಲ್ಲಿ ದೊಡ್ಡ ಶಕ್ತಿ ಇದ್ದು ಅದರಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಜತೆಗೆ ಸಸ್ಯಗಳ ಬೆಳವಣಿಗೆಗೆ ಬೇಕಾದ ಹೇರಳವಾದ ಪೋಷಕಾಂಶಗಳನ್ನು ಕೊಟ್ಟಿಗೆ ಗೊಬ್ಬರ ಒದಗಿಸುತ್ತದೆ. ಇದರಿಂದಾಗಿ ಸಗಣಿಗೆ ಬಂಗಾರದ ಬೆಲೆ ಬಂದಿದೆ. ಎರೆಹುಳು ಗೊಬ್ಬರಕ್ಕೂಇಂದು ಅಧಿಕ ಬೇಡಿಕೆ ಇದೆ. ಎರೆಹುಳು ರೈತನ ಮಿತ್ರನಾಗಿ ಕಾರ್ಯನಿರ್ವಹಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತಿದೆ. ಜತೆಗೆ ಇಂದು ಎರೆಹುಳು ಗೊಬ್ಬರ ಒಂದು ಉಪಕಸುಬು ಆಗಿದೆ ಎಂದರು.ದತ್ತಿ ದಾನಿಗಳಾದ ಸದಾನಂದ ಮುಂದಿನಮನಿ ದತ್ತಿ ಆಶಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ) ೨೦೨೫ರ ಪರೀಕ್ಷೆಯಲ್ಲಿ ಉತ್ತೀರ್ಣನಾದ ಗ್ರಾಮೀಣ ಪ್ರತಿಭೆ ರಿಷಿ ಬೊಂಗಾಳೆ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕವಿವ ಸಂಘದ ಗೌರವ ಉಪಾಧ್ಯಕ್ಷ ಕೆ.ಬಿ. ನಾವಲಗಿಮಠ ಅಧ್ಯಕ್ಷತೆ ವಹಿಸಿದರು. ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಬಸವಣ್ಣೆಪ್ಪ ನವಲಗುಂದ, ಮಾಳಪ್ಪ ಅಮರಶೆಟ್ಟಿ, ಪ್ರಮೀಳಾ ಜಕ್ಕಣ್ಣವರ, ಡಾ. ಗುರುಮೂರ್ತಿ ಯರಗಂಬಳಿಮಠ, ಪಿ.ಎಸ್. ಪತ್ರಾವಳಿ, ಗಂಗಾಧರ ಹುರಳಿ, ಕೆ.ಎನ್. ಜಾಕೋಜಿ, ದಯಾನಂದ ಮುಂದಿನಮನಿ, ಕೃಷ್ಣ ಬೊಂಗಾಳೆ, ಎನ್.ಆರ್. ಬಾಳೀಕಾಯಿ, ಮಹಾಂತಯ್ಯ ಹಿರೇಮಠ, ಕೋಯಪ್ಪನವರ ಸತೀಶ, ರಾಜೇಶ ನಾವಲಗಿಮಠ, ನಾಗರಾಜ ಕೊಲ್ಲೂರಿ, ವಿಜಯಾ ಹರವಿ, ಮಹಾದೇವ ಬೆಟಗೇರಿ ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರ್ವಹಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.