ಸಾರಾಂಶ
ಜಿಲ್ಲಾದ್ಯಂತ ಪಶು ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಿ, ಗ್ರಾಮೀಣ ಪ್ರದೇಶದ ಸೇವೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ, ಚಿಕಿತ್ಸೆ ನೀಡಲು ಹಣ ಕೇಳುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ರೈತ ಸಂಘದಿಂದ ಮಾ.೪ರಂದು ಮಂಗಳವಾರ ಜಾನುವಾರುಗಳ ಸಮೇತ ಪಶು ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ಅರಣ್ಯ ಇಲಾಖೆಯ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಜಿಲ್ಲಾದ್ಯಂತ ಪಶು ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಿ, ಗ್ರಾಮೀಣ ಪ್ರದೇಶದ ಸೇವೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ, ಚಿಕಿತ್ಸೆ ನೀಡಲು ಹಣ ಕೇಳುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ರೈತ ಸಂಘದಿಂದ ಮಾ.೪ರಂದು ಮಂಗಳವಾರ ಜಾನುವಾರುಗಳ ಸಮೇತ ಪಶು ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ಅರಣ್ಯ ಇಲಾಖೆಯ ಆವರಣದಲ್ಲಿ ನಡೆದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯಲ್ಲಿ ಸತತ ಬರಗಾಲದ ಹಿನ್ನೆಲೆಯಲ್ಲಿ ಅಂರ್ತಜಲ ದಿನೇ ದಿನೇ ಕುಸಿತಗೊಂಡು ಕೊಳವೆಬಾವಿಗಳು ಕೈಕೊಟ್ಟು, ಬೆಳೆ ಕೈಗೆ ಸಿಗದೆ ಖಾಸಗಿ ಫೈನಾನ್ಸ್ ಸಾಲಕ್ಕೆ ಸಿಲುಕಿ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದು, ಜಿಲ್ಲೆಯ ರೈತರ ಬಾಳಿಗೆ ಬೆಳಕಾಗಿ ಹೈನೋದ್ಯಮ ಕೈಹಿಡಿದಿದೆ. ಆದರೆ ಜಿಲ್ಲೆಯ ಹೈನುಗಾರಿಕೆಯ ಬೆಳಕಾಗಿರುವ ಹಸುಗಳನ್ನು ರಕ್ಷಣೆ ಮಾಡಬೇಕಾದ ಇಲಾಖೆ ಇದ್ದು, ಇಲ್ಲದಂತಾಗಿ ಪ್ರತಿಯೊಂದು ಚಿಕಿತ್ಸೆಗೆ ಖಾಸಗಿ ವೈದ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಆದ್ದರಿಂದ ರೈತರ ಜಾನುವಾರುಗಳ ಸೇವೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಿ ಜಾನುವಾರುಗಳ ಸಮೇತ ಪಶು ಉಪನಿರ್ದೇಶಕರ ಕಚೇರಿಗೆ ಮಾ.4ರಂದು ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. ರಾಜ್ಯ ಮುಖಂಡ ಬಂಗಾವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಮಂಜುನಾಥ, ಶಿವು, ರಾಜೇಂದ್ರ ಗೌಡ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ನವೀನ್, ತರ್‍ನಹಳ್ಳಿ ಆಂಜಿನಪ್ಪ, ತರ್‍ನಹಳ್ಳಿ ವೆಂಕಿ ಇದ್ದರು.