ನೋಂದಣಿ ಮಾಡಿದ ರೈತರು ಗೋವಿನಜೋಳದ ತೂಕ ಮಾಡುವಂತೆ ನಿತ್ಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡ ಕಂಪನಿಯವರು ತೂಕ ಮಾಡಲು ನಮಗೆ ತಿಳಿಸಿಲ್ಲ ಎಂದು ಹೇಳುತ್ತಿದ್ದಾರೆ.

ನರಗುಂದ: ಸರ್ಕಾರ ಎಲ್ಲ ರೈತರ ಪೂರ್ತಿ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು. ರೈತರ ಹೋರಾಟ ನಡೆಸಿದ ಸಂದರ್ಭದಲ್ಲಿ ಸರ್ಕಾರ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಭರವಸೆ ನೀಡಿತ್ತು. ಅದರಂತೆ ವಿವಿಧ ಜಿಲ್ಲೆಗಳಲ್ಲಿ ಹಲವು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಅಲ್ಪಸ್ವಲ್ಪ ರೈತರ ಗೋವಿನಜೋಳವನ್ನು ವಿವಿಧ ಕಂಪನಿಯವರ ಮೂಲಕ ಖರೀದಿಸಿದೆ. ಆದರೆ ನೋಂದಣಿ ಮಾಡಿಕೊಂಡ ನೂರಾರು ರೈತರ ಗೋವಿನಜೋಳ ತೂಕ ಮಾಡಿಲ್ಲ.

ನೋಂದಣಿ ಮಾಡಿದ ರೈತರು ಗೋವಿನಜೋಳದ ತೂಕ ಮಾಡುವಂತೆ ನಿತ್ಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡ ಕಂಪನಿಯವರು ತೂಕ ಮಾಡಲು ನಮಗೆ ತಿಳಿಸಿಲ್ಲ ಎಂದು ಹೇಳುತ್ತಿದ್ದಾರೆ.

ಆದ್ದರಿಂದ ಸರ್ಕಾರ ಈ ಹಿಂದೆ ಹೇಳಿದಂತೆ ಎಲ್ಲ ರೈತರ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ ಅವರು ರೈತರ ಮನವಿ ಸ್ವೀಕರಿಸಿದರು. ಟಿ.ಬಿ. ಶಿರಿಯಪ್ಪಗೌಡ್ರ, ಎಂ.ಬಿ. ಅರಹುಣಿಸಿ, ಬಿ.ಬಿ. ನರಗುಂದ, ಡಿ.ಬಿ. ಪಾಟೀಲ ಇದ್ದರು. ಮಲ್ಲಾಪುರದಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ

ರೋಣ: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ 2002- 03ನೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2005- 06ನೇ ಸಾಲಿನಲ್ಲಿ ಶಿಕ್ಷಣ ಪೂರೈಸಿದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಕಂಬೋಗಿ ಮಾತನಾಡಿ, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಹೊರಗಿನ ಪ್ರಪಂಚದ ಜ್ಞಾನ, ಹೊಸ ಸಂಸ್ಕೃತಿ, ಅನುಭವ ತಿಳಿಸಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.ಹಳೆ ವಿದ್ಯಾರ್ಥಿಗಳಾದ ಡಾ. ಸದಾಶಿವ ಭಿಕ್ಷಾವತಿಮಠ, ಹನುಮಂತಪ್ಪ ಕರಿಲೆಕ್ಕನವರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಭುಸ್ವಾಮಿ ಭಿಕ್ಷಾವತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯವನ್ನು ಗುರುಮಲ್ಲಯ್ಯ ಪುರಾಣಿಕಮಠ ವಹಿಸಿದ್ದರು. ಜಿ. ಹಂಪಮ್ಮ, ನಿವೃತ್ತ ಶಿಕ್ಷಕ ವಿ.ಎಸ್. ವಾಲಿ, ಎಸ್.ಜಿ. ದಾನಪ್ಪಗೌಡರ, ವೈ.ಡಿ. ಗಾಣಿಗೇರ, ಗೀತಾ ಶೆಟ್ಟರ, ಗ್ರಾಪಂ ಅಧ್ಯಕ್ಷ ಹನುಮಂತಗೌಡ ಹುಲ್ಲೂರ ಮುಂತಾದವರು ಇದ್ದರು.