ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುವ ಲೈನ್‌ಮನ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಜನತೆಗೆ ವಿದ್ಯುತ್ ಪೂರೈಯಿಸುವ ಕಷ್ಟದಾಯಕ ಮಾಡುತ್ತಿದ್ದಾರೆ.
ಕೊಟ್ಟೂರು: ಹಗರಿಬೊಮ್ಮನಹಳ್ಳಿ ಕ್ಷೇತ್ರದ ವಿದ್ಯುತ್ ಸಮಸ್ಯೆಗಳನ್ನು ನಿವಾರಿಸಲು ಇಂಧನ ಸಚಿವ ಕೆಜೆ ಜಾರ್ಜ್ ಪೂರ್ಣ ಪ್ರಮಾಣದಲ್ಲಿ ಉತ್ತಮ ಸಹಕಾರ ಮತ್ತು ಸಹಾಯ ನೀಡುತ್ತಿದ್ದಾರೆ ಎಂದು ಶಾಸಕ ಕೆ ನೇಮರಾಜ ನಾಯ್ಕ್ ಹೇಳಿದರು.ಜೆಸ್ಕಾಂ ಕೊಟ್ಟೂರು ಉಪ ವಿಭಾಗದ ₹1 ಕೋಟಿ ವೆಚ್ಚದ ಕಚೇರಿ ನೂತನ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುವ ಲೈನ್‌ಮನ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಜನತೆಗೆ ವಿದ್ಯುತ್ ಪೂರೈಯಿಸುವ ಕಷ್ಟದಾಯಕ ಮಾಡುತ್ತಿದ್ದಾರೆ. ಇನ್ನು ಉತ್ತಮ ಬಗೆಯಲ್ಲಿ ಸೇವೆ ಸಲ್ಲಿಸಲು ಇವರಿಗೆ ಸಾರ್ವಜನಿಕರು ಸದಾ ಸಹಕರಿಸಬೇಕು ಎಂದರು.ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ತೇಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಹಗರಿಬೊಮ್ಮನಹಳ್ಳಿ ಜೆಸ್ಕಾಂ ಎಇಇ ಸತೀಶ್, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಡಾ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಮಾತನಾಡಿದರು.ಬಳ್ಳಾರಿ ವಲಯ ಜೆಸ್ಕಾಂ ಸಿವಿಲ್ ಇಇ ಖಾಜಮೋಹಿದ್ದಿನ್, ಕೊಟ್ಟೂರು ಜೆಸ್ಕಾಂ ಎಇಇ ಆರ್.ನಾಗರಾಜ್, ಎಂ. ಏಕಾಂತ್ ರೆಡ್ಡಿ, ಅರ್ಪಣ, ವೈ ಮೈಲೇಶ್, ಮಂಜುನಾಥ ವಿನೋದ್, ಕನಕ ಕುಮಾರ್, ಹೊನ್ನೂರಪ್ಪ, ಮಂಜುನಾಥ, ಚೇತನ್ ಕುಮಾರ್, ಕೋಗಳಿ ಸಿದ್ದಲಿಂಗನ ಗೌಡ, ಶರಣಪ್ಪ, ನಾಗರಾಜ್, ತಿಪ್ಪೇಶ್, ಪ್ರದೀಪಕುಮಾರ್ ಇದ್ದರು.
ಬಣವಿಕಲ್ಲು ಕೊಟ್ರೇಶ್ ನಿರೂಪಿಸಿದರು.