ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಕರ್ಷಕ ಪಥಸಂಚಲನ

| Published : Aug 16 2024, 12:54 AM IST

ಸಾರಾಂಶ

78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಕರ್ಷಕ ಪಥಸಂಚಲನ ಹಾಗೂ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮೆರುಗು ತಂದಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಕರ್ಷಕ ಪಥಸಂಚಲನ ಹಾಗೂ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮೆರುಗು ತಂದಿತು.

ನಗರದ ಜಿಲ್ಲಾ ಪೊಲೀಸ್‌ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ ಹಾಗೂ ಶಾಲೆ-ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಬೆರಗುಗೊಳಿಸಿತು.

ಡಿಎಆರ್‌ ಕೇಂದ್ರ ಸ್ಥಾನ, ಚಾಮರಾಜನಗರ ಸಿವಿಲ್‌ ಪೊಲೀಸ್‌ ತುಕಡಿ, ಅರಣ್ಯ ಇಲಾಖೆ ತುಕಡಿ, ಎನ್‌ಸಿಸಿ ಚಾಮರಾಜನಗರ ವೈದ್ಯಕೀಯ ಮಹವಿದ್ಯಾಲಯ, ಸಂತಜೋಸೆಪ್‌ ಪ್ರೌಢಶಾಲೆ, ಜೆಎಸ್‌ಎಸ್‌ ಪ್ರೌಢಶಾಲೆ, ಸೇವಾ ಭಾರತಿ ಪ್ರೌಢಶಾಲೆ, ಸಂತಪೌಲ ಪ್ರೌಢಶಾಲೆ, ಬಂಜಾರ ಇಂಡಿಯನ್ ಶಾಲೆ, ಎಂಸಿಎಸ್‌ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಪೊಲೀಸ್‌ ವಾದ್ಯವೃಂದ ಆಕರ್ಷಕ ಪಥಸಂಚಲನಕ್ಕೆ ಸಾಥ್‌ ನೀಡಿತು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮಕ್ಕಳಿಂದ ನಮೋ ನಮೋ ಭಾರತಾಂಬೆಗೆ ನಮನ, ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯಿಂದ ಸಂಗೊಳ್ಳಿ ರಾಯಣ್ಣ ನೃತ್ಯ ರೂಪಕ, ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ನಮ್ಮ ಸೈನಿಕರ ಪರಿಕಲ್ಪನೆ, ಯುನಿವರ್ಸ್‌ ಶಾಲೆ ಮಕ್ಕಳಿಂದ ಗಾಂಧಿ ಯುಗ, ಸಂತ ಜೋಸೆಫ್‌ರ ಶಾಲೆ ಮಕ್ಕಳಿಂದ ರಸ್ತೆ ಸುರಕ್ಷತೆ ನೃತ್ಯ ರೂಪಕಗಳು ಗಣ್ಯರು ಹಾಗೂ ಸಾರ್ವಜನಿಕರಿಗೆ ಮನಮೋಹಕಗೊಳಿಸಿತು. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಲಾಖೆಗಳು ಹಾಗೂ ಶಾಲೆ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.15ಸಿಎಚ್‌ಎನ್51 ಮತ್ತು 52ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.