ಸಾರಾಂಶ
ಖಾಸಗಿ ಶಾಲೆಯ ಅಟೆಂಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ಈ ಸಂಬಂಧ ಶಾಲೆಯ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಹುಕ್ಕೇರಿ: ಇಲ್ಲಿನ ಖಾಸಗಿ ಶಾಲೆಯ ಅಟೆಂಡರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ಈ ಸಂಬಂಧ ಶಾಲೆಯ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಎಸ್‌ಕೆ ಪಬ್ಲಿಕ್ ಶಾಲೆ ಅಧ್ಯಕ್ಷ ಚನ್ನಬಸಪ್ಪ (ಪಿಂಟು) ರವೀಂದ್ರ ಶೆಟ್ಟಿ, ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ, ಗುಮಾಸ್ತ ಶಂಕರ ಅಲಗರಾವುತ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾ.6ರಂದು ಶಾಲೆಯ ಆಡಳಿತ ಮಂಡಳಿ ಕೊಠಡಿಯಲ್ಲಿ ಆರೋಪಿಗಳಾದ ಪಿಂಟು, ರಾಘವೇಂದ್ರ, ಶಂಕರ ಮೂವರು ಸೇರಿ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿದಾರ ವಿನಾಯಕ ಮಹಾಂತೇಶ ಪಾಟೀಲ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಅಧ್ಯಕ್ಷ, ಪ್ರಾಚಾರ್ಯ, ಕ್ಲರ್ಕ್ ದೈಹಿಕ ಹಲ್ಲೆ ನಡೆಸಿದ್ದರಿಂದ ತೀವ್ರ ಅಸ್ವಸ್ಥರಾದ ಅಟೆಂಡರ್ ವಿನಾಯಕ ಪಾಟೀಲ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾರತೀಯ ದಂಡ ಸಂಹಿತೆ 2023ರ ಅಡಿ 126(2), 115(2), 352, 351, 3(5) ಅನ್ವಯ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.