ಕೊರಟಗೆರೆ: ತುಂಬಾಡಿ ಹೊಸಕೆರೆ ನೋಡಲು ಹೋಗಿದ್ದ ಬೆಂಗಳೂರು ಮೂಲದ ತಂದೆ ಮಗಳು ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ: ತುಂಬಾಡಿ ಹೊಸಕೆರೆ ನೋಡಲು ಹೋಗಿದ್ದ ಬೆಂಗಳೂರು ಮೂಲದ ತಂದೆ ಮಗಳು ಇಬ್ಬರು ಕಾಲು ಜಾರಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ತುಂಬಾಡಿ ಗ್ರಾಮ ಹೊಸಕೆರೆ ಬಳಿ ಬೆಂಗಳೂರಿನ ಶಿವಾಜಿನಗರ ನಿವಾಸಿಗಳಾದ ಫೀರ್ದೋಸ್ (೩೫) ಮಗಳು ಅಹೀಮಾ (೬) ಬಾಲಕಿ ಮೃತ ದುರ್ದೈವಿಗಳು. ಪಟ್ಟಣದ ಗಿರಿನಗರದ ಸಂಬಂಧಿಕರ ಮನೆಗೆ ಬಂದಿದ್ದ ಫೀರ್ದೋಸ್ ಕುಟುಂಬಸ್ಥರು ತುಂಬಾಡಿ ಹೊಸಕೆರೆ ಕೋಡಿ ಬಿದ್ದಿರುವುದನ್ನು ನೋಡಲು ತೆರಳಿದ್ದರು. ಈ ವೇಳೆ ಮಗಳು ಕಾಲು ಜಾರಿ ಬೀಳುತ್ತಿದ್ದನ್ನು ಕಂಡ ಫಿರ್ದೋಸ್ ಮಗಳನ್ನು ಉಳಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರು ಮುಳುಗುವುದನ್ನು ಕಂಡು ಮೃತ ಫೀರ್ದೋಸ್ ಮಡದಿ ನೀರಿನ ಒಳಗೆ ಇಳಿದಿದ್ದಾರೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಮಹಿಳೆಯನ್ನು ಹೊರಗೆ ತಂದಿದ್ದಾರೆ. ನಂತರ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಇಬ್ಬರ ಶವವನ್ನ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ಪಿಎಸ್‌ಐ ಚೇತನ್‌ಕುಮಾರ್ ಭೇಟಿ ನೀಡಿ ತಿನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.