ಸಾರಾಂಶ
ಮಂಗಳೂರು: ಶೈಕ್ಷಣಿಕ ಸಹಯೋಗ ಮತ್ತು ಅಂತರ್‌ಶಿಸ್ತೀಯ ಸಂಶೋಧನೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ನಗರದ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫಾವೊಸ್ತಿನ್ ಲುಕಾಸ್ ಲೋಬೊ ಮತ್ತು ಸೈಂಟ್ ಅಲೋಶಿಯಸ್ ವಿವಿಯ ಎಐಎಂಟಿ ಕೇಂದ್ರದ ನಿರ್ದೇಶಕ ಫಾ.ಡಾ.ಕಿರಣ್ ಕೋತಾ ಎಸ್.ಜೆ. ಪರಸ್ಪರ ಸಹಿ ಹಾಕಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಂಶೋಧನಾ ಮುಖ್ಯಸ್ಥ ಡಾ. ರಮೇಶ್ ಭಟ್ ಮತ್ತು ಸೈಂಟ್ ಅಲೋಶಿಯಸ್ ವಿವಿಯ ಎಂಜಿನಿಯರಿಂಗ್ ಕಾಲೇಜಿನ ಡೀನ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಎಸ್. ರೂಬನ್ ನೇತೃತ್ವ ವಹಿಸಿದ್ದರು. ವಿವಿಯ ಅಂತಾರಾಷ್ಟ್ರೀಯ ಮತ್ತು ದೇಶೀಯ ಸಂಬಂಧಗಳ ಅಧ್ಯಕ್ಷ ರೋಶನ್ ಫ್ರೆಡ್ರಿಕ್ ಡಿಸೋಜ ನೆರವು ನೀಡಿದರು.ಸಹಯೋಗಿ ಸಂಶೋಧನಾ ಯೋಜನೆಗಳು, ಅಂತರ್ ಶಿಸ್ತೀಯ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಂತಹ ಜಂಟಿ ಉಪಕ್ರಮಗಳನ್ನು ಸುಗಮಗೊಳಿಸುವುದು, ಜ್ಞಾನ ವಿನಿಮಯ ಮತ್ತು ಪರಸ್ಪರ ಬೆಳವಣಿಗೆಗೆ ವೇದಿಕೆಯನ್ನು ಸೃಷ್ಟಿಸುವುದು ಈ ಒಪ್ಪಂದದ ಉದ್ದೇಶ.