ಸಾರಾಂಶ
ಅಪ್ಪಣ್ಣ ಹಲವಾರು ಸಮಾಜಮುಖಿ ಕಾರ್ಯ ಜಾರಿಗೊಳಿಸುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಾಮರಸ್ಯ ಮೂಡಿಸಿದರು.
ಚಳ್ಳಕೆರೆ: ಹಡಪದ ಅಪ್ಪಣ್ಣ ಹಲವಾರು ಸಮಸ್ಯೆಗಳ ನಡುವೆಯೂ ಸಮಾಜದ ಉನ್ನತ್ತಿಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ಶೋಷಣೆ ವಿರುದ್ಧ ಹೋರಾಟ ಮಾಡಿದ ಅನೇಕ ಮಹಾನೀಯರಲ್ಲಿ ಒಬ್ಬರಾಗಿದ್ದರು, ಇಂಥಹ ಮಹಾನ್ ವ್ಯಕ್ತಿ ಚಿಂತನೆ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ತಹಸೀಲ್ದಾರ್ ರೇಹಾನ್ ಪಾಷ ತಿಳಿಸಿದರು.
ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸವಿತಾಸಮಾಜದ ಬಂಧುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಡಪದ ಅಪ್ಪಣ್ಣಮಠದ ಗುರುಸ್ವಾಮಿ ಮಾತನಾಡಿ, ಅಪ್ಪಣ್ಣ ಹಲವಾರು ಸಮಾಜಮುಖಿ ಕಾರ್ಯ ಜಾರಿಗೊಳಿಸುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಾಮರಸ್ಯ ಮೂಡಿಸಿದರು. ಇಂದಿಗೂ ಸಹ ಅವರು ಮಾಡಿದ ಸೇವೆಯನ್ನು ನಾವೆಲ್ಲರೂ ಜಯಂತಿ ಕಾರ್ಯಕ್ರಮ ಮೂಲಕ ನೆನಪಿಸಿಕೊಳ್ಳುತ್ತಿದ್ದೇವೆಂದರು.ನಿವೃತ್ತ ಶಿಕ್ಷಕ ಬಸವರಾಜು, ತಿಪ್ಪೇಸ್ವಾಮಿ, ಕಾರ್ಯದರ್ಶಿ ದಿನೇಶ್, ಮಾರುತಿ, ಪ್ರಕಾಶ್, ರುದ್ರೇಶ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗ ಪ್ರಕಾಶ್, ಡಿ.ಶ್ರೀನಿವಾಸ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.