ಹುಲ್ಲೇಪುರದಲ್ಲಿ ಕರಡಿ ಪ್ರತ್ಯಕ್ಷ ರೈತರಲ್ಲಿ ಆತಂಕ

| Published : May 21 2024, 12:34 AM IST

ಸಾರಾಂಶ

ಹುಲ್ಲೇಪುರ ತೋಟದ ಮನೆಯ ಮುಂಭಾಗ ಕರಡಿ ಪ್ರತ್ಯಕ್ಷಗೊಂಡ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹುಲ್ಲೇಪುರ ಗೋದ್ವೆ ಗುಡ್ಡದ ಬಳಿ ಸಮೀಪದಲ್ಲಿ ಬರುವ ಬೆಂಗಳೂರಿನ ನಿವಾಸಿ ಗಿರಿಧರ್ ತೋಟದ ಮನೆಯ ಮುಂಭಾಗ ಭಾನುವಾರ ಸಂಜೆ ಕರಡಿ ಪ್ರತ್ಯಕ್ಷವಾಗಿದ್ದು, ಇದರಿಂದಾಗಿ ಕಾವಲುಗಾರ ಮಂಜು ಮತ್ತು ಕುಟುಂಬದವರು ಭಯಭೀತರಾಗಿ ಸುತ್ತಮುತ್ತಲಿನ ರೈತರಿಗೆ ಮಾಹಿತಿ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಹನೂರು ಹುಲ್ಲೇಪುರ ತೋಟದ ಮನೆಯ ಮುಂಭಾಗ ಕರಡಿ ಪ್ರತ್ಯಕ್ಷಗೊಂಡ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹುಲ್ಲೇಪುರ ಗೋದ್ವೆ ಗುಡ್ಡದ ಬಳಿ ಸಮೀಪದಲ್ಲಿ ಬರುವ ಬೆಂಗಳೂರಿನ ನಿವಾಸಿ ಗಿರಿಧರ್ ತೋಟದ ಮನೆಯ ಮುಂಭಾಗ ಭಾನುವಾರ ಸಂಜೆ ಕರಡಿ ಪ್ರತ್ಯಕ್ಷವಾಗಿದ್ದು, ಇದರಿಂದಾಗಿ ಕಾವಲುಗಾರ ಮಂಜು ಮತ್ತು ಕುಟುಂಬದವರು ಭಯಭೀತರಾಗಿ ಸುತ್ತಮುತ್ತಲಿನ ರೈತರಿಗೆ ಮಾಹಿತಿ ನೀಡಿದ್ದಾರೆ.

ವಿವಿಧಡೆ ಕಾಣಿಸಿಕೊಂಡ ಕರಡಿ :

ಕಳೆದ ಒಂದು ತಿಂಗಳಿನಿಂದ ಹನೂರು ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲೇಮಾಳ ರಸ್ತೆಯ ರೈತ ಬಸವರಾಜ್ ಮನೆಯ ಮುಂಭಾಗ ರಾತ್ರಿ ವೇಳೆ ಕಾಣಿಸಿಕೊಂಡಿತ್ತು. ಒಂದು ವಾರದ ನಂತರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜುಗೌಡರ ಗೋದ್ವೆ ಗುಡ್ಡದ ಬಳಿ ಜಮೀನಿನಲ್ಲಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ಕರಡಿ ಮತ್ತೆ ಅದೇ ವ್ಯಾಪ್ತಿಯಲ್ಲಿ ಬೆಂಗಳೂರು ನಿವಾಸಿ ಗಿರಿಧರ್ ಎಂಬವರಿಗೆ ಸೇರಿದ ಮೀನು ಸಾಕಾಣಿಕೆ ಕೇಂದ್ರ ಜಮೀನಿನ ಬಳಿ ನೆನ್ನೆ ಸಂಜೆ ಕರಡಿ ಕಾಣಿಸಿಕೊಂಡು ಕೆಲವು ಕಾಲ ಅಲ್ಲಿ ಇದ್ದ ಕಾವಲುಗಾರ ಮತ್ತು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.ಅರಣ್ಯಾಧಿಕಾರಿಗಳ ಡಾಂಗುಡಿ:

ಸುದ್ದಿ ತಿಳಿದ ತಕ್ಷಣ ವಲಯ ಅರಣ್ಯಾಧಿಕಾರಿ ಪ್ರವೀಣ್, ಸಿಬ್ಬಂದಿಗಳು ಗೋಧ್ವೆ ಗುಡ್ಡದ ಬಳಿ ಮತ್ತು ತೋಟದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿಗಾಗಿ ಹುಡುಕಾಟ ನಡೆಸಿ ಮತ್ತೆ ಕಾಣಿಸಿಕೊಂಡರೆ ಅರಣ್ಯ ಇಲಾಖೆಯ ಕಂಟ್ರೋಲ್ ರೂಂ ಅಧಿಕಾರಿ ವರ್ಗದವರಿಗೆ ದೂರವಾಣಿ ಕರೆ ಮಾಡಿ ತಿಳಿಸುವಂತೆ ಅರಣ್ಯ ಸಿಬ್ಬಂದಿ ಕಾವಲುಗಾರ ಮಂಜು ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ .

ಕರಡಿ ಹಿಡಿಯಲು ಆಗ್ರಹ:

ಗೋಧ್ವೆ ಗುಡ್ಡದ ಸುತ್ತಮುತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿಯೇ ಕರಡಿ ಓಡಾಡುತ್ತಿರುವುದರಿಂದ ತೋಟದ ಜಮೀನುಗಳಲ್ಲಿರುವ ರೈತರು ಓಡಾಡಲು ಭಯಭೀತರಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಇರುವ ಕರಡಿಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಯುವ ರೈತ ಮುಖಂಡ ದೊರೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಕರಡಿ ಪ್ರತ್ಯಕ್ಷವಾದಾಗ ಕೂಡಲೇ ನಮ್ಮ ಇಲಾಖೆಗೆ ತೋಟದ ಮನೆಯ ರೈತರು ತಕ್ಷಣ ಮಾಹಿತಿ ನೀಡಿದ್ದಾರೆ. ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಅದು ಒಂದೆಡೆ ನಿಲ್ಲುವುದಿಲ್ಲ ಬೇರೆ ಬೇರೆ ಸ್ಥಳವನ್ನು ಬದಲಾಯಿಸುತ್ತಾ ಇರುತ್ತದೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಕರಡಿ ಸರಿ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.-ಪ್ರವೀಣ್, ವಲಯ ಅರಣ್ಯ ಅಧಿಕಾರಿ, ಮಹದೇಶ್ವರ ವನ್ಯಜೀವಿ ವಲಯ ಹನೂರು