ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿವ ಆತಂಕ: ರೈಲುಗಳ ಸಂಚಾರ ವ್ಯತ್ಯಯ

| Published : Mar 20 2024, 01:19 AM IST

ಸಾರಾಂಶ

ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ-48ರ ಲಕ್ಕೂರು ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ರೈಲ್ವೆ ಇಲಾಖೆ ಮುನ್ನೆಚ್ಚರಿಕೆಯಿಂದ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.

ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ-48ರ ಲಕ್ಕೂರು ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ರೈಲ್ವೆ ಇಲಾಖೆ ಮುನ್ನೆಚ್ಚರಿಕೆಯಿಂದ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.

ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ-48ರ ತುಮಕೂರು ರಸ್ತೆಯಲ್ಲಿ ನಿರ್ಮಿಸಿರುವ ರೈಲ್ವೆ ಬ್ರಿಡ್ಜ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಇದರಿಂದ ತಡೆಗೋಡೆ ವಾಲಿಕೊಂಡು ರೈಲ್ವೆ ಹಳಿಯ ಮೇಲೆ ಬೀಳುವ ಆತಂಕ ಎದುರಾಗಿದ್ದನ್ನು ಮನಗಂಡ ರೈಲ್ವೆ ಇಲಾಖೆ ಇಬ್ಬಂದಿ ವಾಲಿದ್ದ ತಡೆಗೋಡೆ ತೆರವುಗೊಳಿಸಿದೆ.

ರೈಲುಗಳ ಸಂಚಾರ ವ್ಯತ್ಯಯ: ರೈಲ್ವೆ ಬ್ರಿಡ್ಜ್ ಮೇಲಿನ ತಡೆಗೋಡೆ ಕುಸಿಯುವ ಆತಂಕದಲ್ಲಿ ತುಮಕೂರು-ಬೆಂಗಳೂರು ಮಧ್ಯೆ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ಇನ್ನು ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸಪಟ್ಟರು.

ಪೋಟೋ 2 :

ದಾಬಸ್‌ಪೇಟೆಯ ರಾಷ್ಟ್ರೀಯ ಹೆದ್ದಾರಿ,48ರಲ್ಲಿ ಲಕ್ಕೂರು ಬ್ರಿಡ್ಜ್ ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ಪೊಲೀಸ್ ಆರಕ್ಷಕ ರಾಜು ಭೇಟಿ ನೀಡಿ ಪರಿಶೀಲಿಸಿದರು.