ರೈತ ದಸರಾ- ರೈತರ ಮುಖಂಡರ ಕಡೆಗಣನೆಗೆ ಖಂಡನೆ

| Published : Sep 27 2025, 02:00 AM IST

ರೈತ ದಸರಾ- ರೈತರ ಮುಖಂಡರ ಕಡೆಗಣನೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಮುಖಂಡರಿಂದ ರೈತ ದಸರಾ ಉದ್ಘಾಟನೆ ಮಾಡಿಸಬೇಕಿತ್ತು. ಕೃಷಿ ಸಚಿವ ಚೆಲುವರಾಯಸ್ವಾಮಿ ಕಾಟಾಚಾರಕ್ಕೆ ಎಂಬಂತೆ ಬಂದು ರೈತ ದಸರಾ ಉದ್ಘಾಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ರೈತ ದಸರಾದಲ್ಲಿ ರೈತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಖಂಡಿಸಿ ಕೆಲಕಾಲ ಪ್ರತಿಭಟಿಸಿದರು.ನಗರದ ಜೆ.ಕೆ. ಮೈದಾನದಲ್ಲಿ ಶುಕ್ರವಾರ ನಡೆದ ರೈತ ದಸರಾ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರಿಂದ ರೈತ ದಸರಾ ಉದ್ಘಾಟನೆ ಮಾಡಿಸಬೇಕಿತ್ತು. ಕೃಷಿ ಸಚಿವ ಚೆಲುವರಾಯಸ್ವಾಮಿ ಕಾಟಾಚಾರಕ್ಕೆ ಎಂಬಂತೆ ಬಂದು ರೈತ ದಸರಾ ಉದ್ಘಾಟಿಸಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ರೈತ ದಸರಾ ಮೆರವಣಿಗೆ ಉದ್ಘಾಟನೆಗೂ ಬರಲಿಲ್ಲ. ಮುಂದಿನ ವರ್ಷ ಪ್ರಗತಿಪರ ರೈತರಿಂದ ರೈತ ದಸರಾ ಉದ್ಘಾಟನೆ ಮಾಡಿಸಬೇಕು. ಇಲ್ಲದಿದ್ದರೆ ಪ್ರತಿಭಟಿಸುತ್ತೇವೆ ಎಂದು ಅವರು ಎಚ್ಚರಿಸಿದರು.ರೈತರ ಮನವಿ ಸ್ವೀಕರಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ನಿಮ್ಮ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಮುಖಂಡರಾದ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಬಿ.ಪಿ. ಪರಶಿವಮೂರ್ತಿ, ವರಕೊಡು ನಾಗೇಶ್, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕಿರಗಸೂರು ಪ್ರಸಾದ್ ನಾಯಕ, ಬನ್ನೂರು ಸೂರಿ, ಕಾಟೂರು ಮಹದೇವಸ್ವಾಮಿ, ವಾಜಮಂಗಲ ಮಹದೇವು, ಅಂಬಳೆ ಮಂಜುನಾಥ್, ರಂಗರಾಜು, ರಾಮಚಂದ್ರ, ಪುಟ್ಟೇಗೌಡನಹುಂಡಿ ರಾಜು, ಗಿರೀಶ್, ರವಿಕುಮಾರ್, ಪುಟ್ಟಸ್ವಾಮಿ ಮೊದಲಾದವರು ಇದ್ದರು.