ಸಾರಾಂಶ
ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟದ ಸಂಸ್ಕೃತಿಯ ಕೊಂಡಿಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿ ಎಂದು ಉಪನ್ಯಾಸಕ ಜಿ.ವಿ.ಸುದರ್ಶನ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟದ ಸಂಸ್ಕೃತಿಯ ಕೊಂಡಿಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿ ಎಂದು ಉಪನ್ಯಾಸಕ ಜಿ.ವಿ.ಸುದರ್ಶನ್ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಬ್ರಿಟಿಷರ ವಸಾಹತು ಶಾಹಿಯಿಂದ ಸ್ವಾತಂತ್ರ್ಯವನ್ನು ತಂದು ಕೊಟ್ಟ ಹೋರಾಟಗಾರರ ದೃಢತೆ, ಸಮರ್ಪಣಾ ಮನೋಭಾವ ಹಾಗೂ ಸ್ವಾರ್ಥರಹಿತ ಸೇವಾ ಭಾವನೆ ನೆನೆಯಬೇಕು ಎಂದರು.ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಮಹದೇವಮ್ಮ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ ಕೊಡುಗೆ ನೀಡಲು ಸಾಮರ್ಥ್ಯವಿರುವ ಸಾಮಾಜಿಕ ಮೌಲ್ಯಗಳ ಬಗ್ಗೆ ಅರಿವುಳ್ಳರಾಗಿರಬೇಕು ಎಂದರು.
ಈ ದೇಶದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ.ಅಹಿಂಸೆ, ತ್ಯಾಗ,ಸರಳತೆ,ಸಹೋದರತೆ ಭಾವ ಹೊಂದಿದೆ.ಇದು ಜಗತ್ತಿನ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ.ಸ್ವಾತಂತ್ರೋತ್ಸವದಲ್ಲಿ ಮೈಮರೆಯದೆ ದೇಶದ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.ಪದವಿಪೂರ್ವಕಾಲೇಜು ಪ್ರಾಂಶುಪಾಲ ಮಲ್ಲಪ್ಪ, ರಾಷ್ಟ್ರೀಯ ಹಬ್ಬಗಳ ಸಮಿತಿ ಸಂಚಾಲಕ ಟಿ.ಎಂ.ಮರಿಸ್ವಾಮಿ,ಕಚೇರಿ ಅಧೀಕ್ಷಕಜಿ.ಸಿ.ಬಸವರಾಜು,ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಮಲ್ಲುಸ್ವಾಮಿ ಎನ್,ಐಕ್ಯೂಎಸಿ ಸಂಚಾಲಕ ಮಣಿಕಂಠ ಸಿ.ಎಂ,ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಎಚ್.ಕೆ. ಪ್ರಭುಸ್ವಾಮಿ,ಸ್ಕೌಟ್ಸ್ ರೋವರ್ಸ್ ಲೀಡರ್ಸ್ ಎನ್.ಗುರುಪ್ರಸಾದ್ ಹಾಗೂ ಅಧ್ಯಾಪಕ,ಅಧ್ಯಾಪಕೇತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.