ಶಿವ ಸಂಕಲ್ಪ ವೀರಶೈವ ಲಿಂಗಾಯತ ಒಕ್ಕೂಟದಿಂದ ವೀರಶೈವ ಲಿಂಗಾಯತ ಸಮಾಜದಲ್ಲಿ 50 ವರ್ಷಗಳ ವೈವಾಹಿಕ ಜೀವನ ಪೂರೈಸಿದ ಹಿರಿಯ ದಂಪತಿಗಳಿಗೆ ಸನ್ಮಾನ ಹಾಗೂ ಎಸ್ಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.23ರಂದು ಸಂಜೆ 4ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮಹಾ ಪೋಷಕ ಮಹಾಲಿಂಗಯ್ಯ ಶಾಸ್ತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವ ಸಂಕಲ್ಪ ವೀರಶೈವ ಲಿಂಗಾಯತ ಒಕ್ಕೂಟದಿಂದ ವೀರಶೈವ ಲಿಂಗಾಯತ ಸಮಾಜದಲ್ಲಿ 50 ವರ್ಷಗಳ ವೈವಾಹಿಕ ಜೀವನ ಪೂರೈಸಿದ ಹಿರಿಯ ದಂಪತಿಗಳಿಗೆ ಸನ್ಮಾನ ಹಾಗೂ ಎಸ್ಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.23ರಂದು ಸಂಜೆ 4ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮಹಾ ಪೋಷಕ ಮಹಾಲಿಂಗಯ್ಯ ಶಾಸ್ತ್ರಿ ಹೇಳಿದರು.ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಉಪಜಾತಿ, ಪಂಗಡ ಹಾಗೂ ಉಪಪಂಗಡಗಳ ತಾರತಮ್ಯ ತೊಡೆದು ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪನೆಯಾದ ‘ಶಿವ ಸಂಕಲ್ಪ’ ವೀರಶೈವ ಲಿಂಗಾಯತ ಒಕ್ಕೂಟವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.ಉತ್ತರಾಖಂಡದ ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕಣ್ವಕುಪ್ಪೆ ಗವಿಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಸವೇಶ್ವರ ವೀರಶೈವ ಸಮಾಜದ ನಿರ್ದೇಶಕ ಟಿ.ಬಿ.ಜಗದೀಶ್, ಖಜಾಂಚಿ ಕೆ.ಎಸ್. ತಾರಾನಾಥ್, ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್, ಎನ್.ಡಿ.ವಿ. ಹಾಸ್ಟೆಲ್ ಪ್ರಧಾನ ಕಾರ್ಯದರ್ಶಿ ಪಿ.ರುದ್ರೇಶ್ ಹಾಗೂ ಶಿವಮೊಗ್ಗ ಜಿಲ್ಲಾ ಅರ್ಚಕ ಪುರೋಹಿತ ಸಂಘದ ಅಧ್ಯಕ್ಷ ಎಂ.ಜಿ.ವಿರುಪಾಕ್ಷಯ್ಯ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಹಿರಿಯ ದಂಪತಿಗಳ ಸನ್ಮಾನಕ್ಕೆ ಹೆಸರು ನೋಂದಾಯಿಸಲು 9901768196, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ 9242415856 ಸಂಪರ್ಕಿಸಬಹುದು. ಸನ್ಮಾನಕ್ಕೆ ಅರ್ಹ ದಂಪತಿಗಳು ಹಾಗೂ ವಿದ್ಯಾರ್ಥಿಗಳು ಶಿವಮೊಗ್ಗ ನಿವಾಸಿಗಳಾಗಿರಬೇಕಿದ್ದು, ಆಧಾರ್‌ ಕಾರ್ಡ್ ಪ್ರತಿ ನೀಡಬೇಕು ಎಂದು ತಿಳಿಸಿದರು.ಶಿವ ಸಂಕಲ್ಪ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಇ. ವಿಶ್ವಾಸ್, ಕಾರ್ಯದರ್ಶಿ ಪಿ.ಎಚ್. ಕುಬೇರಪ್ಪ, ಪ್ರಧಾನ ಕಾರ್ಯದರ್ಶಿ ಜಿ. ಪಿ. ಶ್ರೀಕಾಂತ್, ಸೋಮಶೇಖರ, ಶಕುಂತಲಾ ಜಗದೀಶ್, ಜಯಂತಿ, ಸುನಿತಾ ಹಾಲೇಶ್, ವಿನುತಾ, ವಿರೂಪಾಕ್ಷ, ಕಾಂತರಾಜ್, ಪ್ರಮೋದ ಇದ್ದರು.