ಸಾರಾಂಶ
Felicitation for retired lecturer
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶರಣಹರಳಯ್ಯ ಶಿಕ್ಷಣ ತರಬೇತಿ ಕೇಂದ್ರದಲ್ಲಿ ೩೩ ವರ್ಷಗಳಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದ ಉಪನ್ಯಾಸಕ ಎನ್.ಮಂಜುನಾಥ್ ಅವರನ್ನು ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ, ಉಪ್ಪಾರ ಸಂಘದಿಂದ ಅವರ ನಿವಾಸದಲ್ಲಿ ಸನ್ಮಾನಿಸಿದರು.ರಂಗಸ್ವಾಮಿ ಮಾತನಾಡಿ, ಉಪನ್ಯಾಸಕ ಎನ್.ಮಂಜುನಾಥ್, ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿದ್ಧಾರೆ. ಅವರ ದಕ್ಷ, ಪ್ರಾಮಾಣಿಕ ಸೇವೆಯನ್ನು ಎಲ್ಲರೂ ಗೌರವಿಸಿದ್ದಾರೆ. ಶಿಕ್ಷಕ ವೃತ್ತಿ ಹಾಗೂ ಶಿಕ್ಷಣದ ಮೌಲ್ಯದ ಬಗ್ಗೆ ಹೆಚ್ಚು ತಿಳಿದುಕೊಂಡು ಬೋಧಿಸಿದ ಕೀರ್ತಿ ಮಂಜುನಾಥ್ ಅವರದ್ದು, ನಿವೃತ್ತಿಯ ಅವರ ಬದುಕು ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎನ್.ಮಂಜುನಾಥ್, ಕಲಿಕೆಯಲ್ಲಿ ಹಲವಾರು ವಿಧಾನಗಳನ್ನು ರೂಪಿಸಿಕೊಂಡು ಬೋಧನೆ ಮಾಡುತ್ತಿದ್ದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮವಿಶ್ವಾಸದಿಂದ ನನ್ನ ಬೋಧನೆಯನ್ನು ಕಲಿತಿದ್ಧಾರೆ. ಶಿಕ್ಷಣ ಇಲಾಖೆಯ ಕಾರ್ಯ ಪುಣ್ಯ ಕಾರ್ಯವೆಂದು ಭಾವಿಸುವೆ ಎಂದರು.ಉಪ್ಪಾರ ಸಂಘದ ಗೌರವಾಧ್ಯಕ್ಷ ಎಸ್.ಯಲ್ಲಪ್ಪ, ಕಾರ್ಯದರ್ಶಿ ವೆಂಕಟೇಶ್, ಅಗ್ನಿಶಾಮಕ ಠಾಣಾಧಿಕಾರಿ ಕರಿಯಣ್ಣ, ಎಂ.ಚೇತನ್, ಮಮತ ಮಂಜುನಾಥ್, ನಯನ, ನವ್ಯ, ಅಶ್ವಿನಿ, ಕಿರಣ್, ಶಿಕ್ಷಕರಾದ ತಿಪ್ಪೇಸ್ವಾಮಿ, ರಂಗನಾಥ, ಚನ್ನಕೇಶವ, ರಾಜಣ್ಣ, ಶ್ರೀನಿವಾಸ್, ರಮೇಶ್, ಮುಖಂಡ ಮುಸ್ಟೂರುಲಿಂಗಪ್ಪ, ನಾಗರಾಜು, ತಿಪ್ಪೇಸ್ವಾಮಿ, ನಾಗರಾಜು, ಪಿ.ಜಿ.ರಾಘವೇಂದ್ರ ಉಪಸ್ಥಿತರಿದ್ದರು.
----ಪೋಟೋ:೨೮ಸಿಎಲ್‌ಕೆ೪
ಚಳ್ಳಕೆರೆ ನಗರದ ನಿವಾಸದಲ್ಲಿ ನಿವೃತ್ತ ಉಪನ್ಯಾಸಕ ಎನ್.ಮಂಜುನಾಥ್ ದಂಪತಿಯನ್ನು ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.