ಕರ್ನಾಟಕದ ಚನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ಮಾತ್ರ ನೆಲೆಸಿರುವ ಜಟ್ಟಿ ಜನಾಂಗದವರು, ಈ ಆಧುನಿಕ ಕಾಲದಲ್ಲೂ ಸಂಸ್ಥಾನದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಜಟ್ಟಿ ಜನಾಂಗದ ಈ ವಿಶಿಷ್ಟ ಪರಂಪರೆಯನ್ನು ಉಳಿಸುವ ಜೊತೆಗೆ, ದಸರಾ ವಜ್ರ ಮುಷ್ಠಿ ಕಾಳಗದಲ್ಲಿ ಭಾಗವಹಿಸಿದ ಜಟ್ಟಿಗಳಿಗೆ ಮಾಸಿಕ ಗೌರವ ಧನ ನೀಡುವ ಮೂಲಕ ನೆರವಾಗಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಗರದ ಜಟ್ಟಿಗರ ಬೀದಿಯಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ವರ್ಷಗಳಿಂದ ನೆಲೆಸಿರುವ ಜಟ್ಟಿಗಳು, ಮೈಸೂರು ಸಂಸ್ಥಾನದ ದಸರಾ ವೈಭವದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ ಎಂದು ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಡಾ. ವಿಜಯ್ ರಾಂಪುರ ತಿಳಿಸಿದರು.

ಪಟ್ಟಣದ ಕೋಟೆಯ ಜಟ್ಟಿಗರ ಗರಡಿ ಮನೆ ಆವರಣದಲ್ಲಿ, ಈ ವರ್ಷದ ದಸರಾ ವಜ್ರ ಮುಷ್ಠಿ ಕಾಳಗದಲ್ಲಿ ಸೆಣಸಲಿರುವ ತೇಜಸ್ ಜಟ್ಟಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಶುಭಹಾರೈಸಿ ಮಾತನಾಡಿ, ದಸರಾ ಆಚರಣೆ ಸಂದರ್ಭದಲ್ಲಿ ಬಹು ವರ್ಷಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ವಜ್ರ ಮುಷ್ಠಿ ಕಾಳಗ ತನ್ನ ವಿಶೇಷತೆಯಿಂದ ವಿಶ್ವದಾದ್ಯಂತ ಕುತೂಹಲ ಹುಟ್ಟಿಸುತ್ತಿದೆ ಎಂದರು.

ಕರ್ನಾಟಕದ ಚನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ಮಾತ್ರ ನೆಲೆಸಿರುವ ಜಟ್ಟಿ ಜನಾಂಗದವರು, ಈ ಆಧುನಿಕ ಕಾಲದಲ್ಲೂ ಸಂಸ್ಥಾನದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಜಟ್ಟಿ ಜನಾಂಗದ ಈ ವಿಶಿಷ್ಟ ಪರಂಪರೆಯನ್ನು ಉಳಿಸುವ ಜೊತೆಗೆ, ದಸರಾ ವಜ್ರ ಮುಷ್ಠಿ ಕಾಳಗದಲ್ಲಿ ಭಾಗವಹಿಸಿದ ಜಟ್ಟಿಗಳಿಗೆ ಮಾಸಿಕ ಗೌರವ ಧನ ನೀಡುವ ಮೂಲಕ ನೆರವಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಚನ್ನಪಟ್ಟಣ ರೋಟರಿ ನಿಕಟ ಪೂರ್ವ ಅಧ್ಯಕ್ಷ ಟಿ. ಪ್ರಸನ್ನ ಕುಮಾರ್, ಯುವ ಕವಿ ಡಾ. ಸಚಿನ್ ಕೆಲಗೆರೆ, ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಸಾಗರ್, ಜಟ್ಟಿ ಜನಾಂಗದ ಉಸ್ತಾದ್ ಪುರುಷೋತ್ತಮ ಜಟ್ಟಿ, ವಿದ್ಯಾಧರ ಜಟ್ಟಿ, ಪ್ರಕಾಶ್ ಜಟ್ಟಿ, ಚಂದ್ರ ಶೇಖರ ಜಟ್ಟಿ, ಪ್ರವೀಣ್ ಜಟ್ಟಿ, ರಘು ಜಟ್ಟಿ, ಸುರೇಶ್ ಜಟ್ಟಿ ಮುಂತಾದವರು ಹಾಜರಿದ್ದರು.