ಲಂಡನ್ ಬುಕ್ ಆಫ್ ರೆಕಾರ್ಡ್ ಪುರಸ್ಕೃತ ಡಾ. ಶ್ರೀವತ್ಸ ಉಪಾಧ್ಯಾಯಗೆ ಗೌರವ

| Published : Jul 08 2024, 12:34 AM IST

ಲಂಡನ್ ಬುಕ್ ಆಫ್ ರೆಕಾರ್ಡ್ ಪುರಸ್ಕೃತ ಡಾ. ಶ್ರೀವತ್ಸ ಉಪಾಧ್ಯಾಯಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಕ್ಷೇತ್ರದ ಸಾಧನೆಗೆ ಗ್ರೇಟ್ ಇಂಡಿಯಾ ಪಾರ್ಲಿಮೆಂಟ್ ಅವಾರ್ಡ್ 2024 ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್ ಪಡೆದ ಕೊಲಕಾಡಿ ಡಾ. ಶ್ರೀವತ್ಸ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಶಿಕ್ಷಣ, ಧಾರ್ಮಿಕ ಕ್ಷೇತ್ರದ ಜೊತೆಗೆ ಸಾಮಾಜಿಕ ರಂಗಗಳಲ್ಲಿ ಡಾ. ಶ್ರೀವತ್ಸ ಉಪಾಧ್ಯಾಯ ಅವರ ಸಾಧನೆ ಅಭಿನಂದನೀಯ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಧಾರ್ಮಿಕ ಕ್ಷೇತ್ರದ ಸಾಧನೆಗೆ ಗ್ರೇಟ್ ಇಂಡಿಯಾ ಪಾರ್ಲಿಮೆಂಟ್ ಅವಾರ್ಡ್ 2024 ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್ ಪುರಸ್ಕೃತರಾಗಿ ಜ್ಯೋತಿಷ್ಯ ವಿಭಾಗದಲ್ಲಿ ಪ್ರಶ್ನ ಮಾರ್ಗಂ ಮತ್ತು ಬೃಹಜ್ಮಾತಕ ಪ್ರಬಂಧಕ್ಕೆ ಪುಣೆ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದ ಕೊಲಕಾಡಿ ಡಾ. ಶ್ರೀವತ್ಸ ಉಪಾಧ್ಯಾಯ ಅವರನ್ನು ಕೊಲಕಾಡಿಯ ಪದ್ಮಶ್ರೀ ನಿಲಯದಲ್ಲಿ ತಮ್ಮ ಆಶ್ರಮದ ವತಿಯಿಂದ ಗೌರವಿಸಿ ಮಾತನಾಡಿದರು.

ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ, ವೇದಮೂರ್ತಿ ವಾದಿರಾಜ ಉಪಾಧ್ಯಾಯ. ಕೊಲಕಾಡಿ, ಶಶಿಕಲಾ ಉಪಾಧ್ಯಾಯ, ಶ್ರೀವಿದ್ಯಾ ಮತ್ತಿತರರು ಉಪಸ್ಥಿತರಿದ್ದರು. ಗುರುಪ್ರಸಾದ್ ಭಟ್ ಸ್ವಾಗತಿಸಿದರು, ಪುನೀತ್ ಕೃಷ್ಣ ವಂದಿಸಿದರು. ಶ್ರೀವಿದ್ಯಾ ನಿರೂಪಿಸಿದರು.