ಜೀವವಿಮಾ ನಿಗಮ ಸರ್ವರ ಪಾಲಿನ ಕಲ್ಪವೃಕ್ಷ: ಶಾಸಕ ಕೆ.ಸಿ.ವೀರೇಂದ್ರ

| Published : Jul 10 2024, 12:32 AM IST

ಜೀವವಿಮಾ ನಿಗಮ ಸರ್ವರ ಪಾಲಿನ ಕಲ್ಪವೃಕ್ಷ: ಶಾಸಕ ಕೆ.ಸಿ.ವೀರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

Felicitation to MLA Veerendra by LIC team

-ಚಳ್ಳಕೆರೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರರನ್ನು ಎಲ್‌ಐಸಿ ರಂಗಸ್ವಾಮಿ ಬಳಗದಿಂದ ಅಭಿನಂದನೆ

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆ:

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಕರ್ತವ್ಯ ಪ್ರಜ್ಞೆಯನ್ನು ಮೆರೆದ ಶಾಸಕ, ಜೀವವಿಮಾ ಕಂಪನಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೆ.ಸಿ.ವೀರೇಂದ್ರ ಅವರನ್ನು ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಬಳಗ, ಜೀವ ವಿಮಾ ಶಾಖೆಯ ಹಿರಿಯ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವರ್ಗ ಅವರ ನಿವಾಸದಲ್ಲಿ ಸನ್ಮಾನಿಸಿದರು.

ಜೀವವಿಮಾ ನಿಗಮದ ವ್ಯವಸ್ಥಾಪಕ ಕೆ.ಪಿ.ಚನ್ನಪ್ಪ ಮಾತನಾಡಿ, ಶಾಸಕರಾಗಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕೆ.ಸಿ.ವೀರೇಂದ್ರ(ಪಪ್ಪಿ) ಕಳೆದ ಹಲವಾರು ವರ್ಷಗಳಿಂದ ಜೀವವಿಮಾ ನಿಗಮದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರಲ್ಲದೆ, ಇತ್ತೀಚೆಗೆ ತಾನೇ ತಮ್ಮ ೫೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ರಾಜಕೀಯ ಕ್ಷೇತ್ರದಲ್ಲೂ ಅವರು ಇನ್ನೂ ಹೆಚ್ಚಿನ ಸ್ಥಾನ ಪಡೆಯಲಿ ಎಂದು ಶುಭ ಹಾರೈಸುವುದಾಗಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ), ಜೀವವಿಮಾ ನಿಗಮ ಸಮಾಜದ ಎಲ್ಲಾ ವರ್ಗದ ವಿಶ್ವಾಸ ಗಳಿಸಿರುವುದು ಸಂತಸ ತಂದಿದೆ. ಜೀವನಕ್ಕೆ ಇಂದು ಹೆಚ್ಚು ಭದ್ರತೆ ನೀಡುತ್ತಿರುವ ಜೀವವಿಮಾ ನಿಗಮದ ಕಾರ್ಯ ಮೆಚ್ಚುವಂತಹದ್ದು ಎಂದರು.

ಎಲ್‌ಐಸಿ ದುಗ್ಗಾವರ ರಂಗಸ್ವಾಮಿ, ಜಿ.ಎಚ್.ಹನುಮಂತಪ್ಪ, ಡಿಎಂಕೆ ರವಿಕುಮಾರ್, ಶಾಖಾ ಸಹಾಯಕ ವ್ಯವಸ್ಥಾಪಕ ಸೂರಪ್ಪ, ಬೇಕರಿ ವಿಜಯ್, ಬಿ.ಫರೀದ್‌ಖಾನ್, ಜಿ.ಟಿ.ಶಶಿಧರ, ಸಣ್ಣ ತಿಮ್ಮಣ್ಣ, ವೆಂಕಟೇಶ್, ತಿರುಪತಿ, ಹೊನ್ನೂರು ಗೋವಿಂದಪ್ಪ, ಜಿ.ಆರ್.ಉಮೇಶ್, ಚಿದಾನಂದಪ್ಪ, ರೇವಣ್ಣ, ಶಾಂತಕುಮಾರ್, ಮಂಜಣ್ಣ ಉಪಸ್ಥಿತರಿದ್ದರು.

-------

ಪೋಟೋ: ೯ಸಿಎಲ್‌ಕೆ೩

ಚಳ್ಳಕೆರೆ ನಗರದ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದಿಂದ ಅಭಿನಂದಿಸಲಾಯಿತು.