ಸಾರಾಂಶ
ಕಡೂರು, ತಾಲೂಕಿನ ಜಿ.ಕಾರೇಹಳ್ಳಿ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಮೂರು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನಧಾಪ್ ತಿಳಿಸಿದರು.
ಕಡೂರು: ತಾಲೂಕಿನ ಜಿ.ಕಾರೇಹಳ್ಳಿ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಮೂರು ವರ್ಷದ ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನಧಾಪ್ ತಿಳಿಸಿದರು.ಗ್ರಾಮಸ್ಥರ ಕೋರಿಕೆಯಂತೆ ಗ್ರಾಮದ ಸಮೀಪ ಬೋನ್ ಇಡಲಾಗಿತ್ತು. ಈ ಬೋನ್ ನಲ್ಲಿ ಚಿರತೆ ಸೆರೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಗುಡ್ಡೆಹಳ್ಳಿಯ ಸಮೀಪ ಚಿರತೆ ಸೆರೆಯಾಗಿದ್ದು ಇದು ಎರಡನೆಯದಾಗಿದೆ.ವಲಯ ಅರಣ್ಯಾಧಿಕಾರಿಗಳು ಅಧಿಕಾರ ಸ್ವೀಕರಿಸಿದ ಬಳಿಕ ಸೆರೆ ಹಿಡಿಯಲಾದ ಚಿರತೆ ಸಂಖ್ಯೆ 4ಕ್ಕೆ ಏರಿದೆ. ಉಪ ವಲಯ ಅರಣ್ಯಾಧಿಕಾರಿ ಹರೀಶ್, ಗಸ್ತು ಪಾಲಕ ಏಕಾಂತಪ್ಪ ಕಾರ್ಯಾಚರಣೆಯಲ್ಲಿ ಇದ್ದರು.