ಸಾರಾಂಶ
ಮಣಿಪಾಲ ಫರ್ನ್ಸ್ ಮತ್ತು ಪೆಟಲ್ಸ್ ಸಂಸ್ಥೆಯ ನೂತನ ಮಳಿಗೆಯನ್ನು ಮಣಿಪಾಲದ ಶಿರೂರು ಟವರ್ಸ್‌ನಲ್ಲಿ ಉದ್ಘಾಟಿಸಲಾಯಿತು. ವಾಮನ ತೀರ್ಥ ಪರಂಪರೆಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಳಿಗೆಯನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಫರ್ನ್ಸ್ ಮತ್ತು ಪೆಟಲ್ಸ್ ಸಂಸ್ಥೆಯ ನೂತನ ಮಳಿಗೆಯನ್ನು ಮಣಿಪಾಲದ ಶಿರೂರು ಟವರ್ಸ್‌ನಲ್ಲಿ ಉದ್ಘಾಟಿಸಲಾಯಿತು. ವಾಮನ ತೀರ್ಥ ಪರಂಪರೆಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಡಿವೈಎಸ್ಪಿ ಪ್ರಭು ಡಿ.ಟಿ., ಸಮಾಜ ಸೇವಕರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶರಣ್, ವಾಣಿಜ್ಯೋದ್ಯಮಿ ಸುನಿಲ್ ಸಾಲಿಯಾನ್ ಕಡೆಕಾರ್, ಬ್ಯಾಂಕ್ ಆಫ್ ಬರೋಡದ ಮುಖ್ಯ ಪ್ರಬಂಧಕ ರೋಹಿತ್ ಮತ್ತು ನಮ್ರುತ ಸಿನ್ಹಾ ಮತ್ತಿತರರು ಹಾಜರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಫರ್ನ್ಸ್ ಮತ್ತು ಪೆಟಲ್ಸ್ ಸಂಸ್ಥೆಯು ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಲಿದೆ ಎಂದು ಅಭಿಪ್ರಾಯಪಟ್ಟರು.ಫರ್ನ್ಸ್ ಮತ್ತು ಪೆಟಲ್ಸ್ ಸಂಸ್ಥೆಯ ಮಾಲಕರು, ತಮ್ಮ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶಮ ಅವರು ನೆರವೇರಿಸಿದರು.