ಭೂಮಿಯಲ್ಲಿ ಫಲವತ್ತತೆ ಕುಸಿತ ಆತಂಕಕಾರಿ: ವಿಜ್ಞಾನಿ ಬಸವನಗೌಡ

| Published : May 09 2024, 01:02 AM IST

ಸಾರಾಂಶ

ಜೈವಿಕ ಆಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು ಪರಿಸರ ಪೂರಕವಾಗಿರುತ್ತವೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ದಾವಣಗೆರೆಯಲ್ಲಿ ಹೇಳಿದರು.

- ಕೃಷಿಯಲ್ಲಿ ಜೈವಿಕ ನಿಯಂತ್ರಣ ಕುರಿತು ತರಬೇತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜೈವಿಕ ಆಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು ಪರಿಸರ ಪೂರಕವಾಗಿರುತ್ತವೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.

ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದಲ್ಲಿ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ವತಿಯಿಂದ ಹಮ್ಮಿಕೊಂಡ ಕೃಷಿಯಲ್ಲಿ ಜೈವಿಕ ನಿಯಂತ್ರಣ ತರಬೇತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿ ಫಲವತ್ತತೆ ಕುಗ್ಗುತ್ತಿದೆ. ಜೊತೆಗೆ ಪರಿಸರದಲ್ಲಿರುವ ಉಪಯುಕ್ತ ಕೀಟಗಳ ಸಂತತಿ ನಾಶವಾಗುತ್ತಿದೆ. ಇದು ಆತಂಕದ ವಿಷಯವಾಗಿದೆ ಎಂದು ತಿಳಿಸಿದರು.

ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ಹತ್ತಿ ಮತ್ತು ಮೆಕ್ಕೆಜೋಳಗಳಲ್ಲಿ ಟ್ರೈಕೋಕಾರ್ಡ್ ಮೊಟ್ಟೆಗಳ ಚೀಟಿಯನ್ನು ಕಟ್ಟುವುದರಿಂದ ಮೆಕ್ಕೆಜೋಳದಲ್ಲಿ ಲದ್ದಿಹುಳದ ನಿಯಂತ್ರಣ ಹಾಗೂ ಹತ್ತಿಯಲ್ಲಿ ಕಾಯಿ- ಕೊರಕದ ನಿಯಂತ್ರಣವನ್ನು ಜೈವಿಕ ವಿಧಾನದಿಂದ ಮಾಡಬಹುದು ಎಂದರು.

ಬಳಿಕ ರೈತರ ಹೊಲಗಳಲ್ಲಿ ಟ್ರೈಕೋಕಾರ್ಡ್ ಚೀಟಿಗಳನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ಕಟ್ಟುವ ವಿಧಾನವನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನಿರ್ದೇಶಕ ಕೃಷ್ಣಮೂರ್ತಿ ರೈತರು ಪಾಲ್ಗೊಂಡಿದ್ದರು.

- - - -8ಕೆಡಿವಿಜಿ33ಃ:

ಜಗಳೂರು ತಾಲೂಕಿನ ಕಲ್ಲೇದೇವರಪುರದಲ್ಲಿ ದಾವಣಗೆರೆ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿಯಲ್ಲಿ ಜೈವಿಕ ನಿಯಂತ್ರಣ ತರಬೇತಿ ಕಾರ್ಯಕ್ರಮ ನಡೆಯಿತು.