ಸಾರಾಂಶ
ಶಿಗ್ಗಾಂವಿ ತಾಲೂಕಿನ ಬಂಕಾಪುರ, ಹುಲಗೂರಿನಲ್ಲಿ ರಸಗೊಬ್ಬರ ಮಾರಾಟದ ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾಬುರಾವ್ ದೀಕ್ಷಿತ ಅವರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಮೂರು ಮಳಿಗೆಗಳ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.
ಶಿಗ್ಗಾಂವಿ:ತಾಲೂಕಿನ ಬಂಕಾಪುರ, ಹುಲಗೂರಿನಲ್ಲಿ ರಸಗೊಬ್ಬರ ಮಾರಾಟದ ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾಬುರಾವ್ ದೀಕ್ಷಿತ ಅವರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಮೂರು ಮಳಿಗೆಗಳ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.
ಬಂಕಾಪುರದ ಕಿಸಾನ್ ಟ್ರೇಡರ್ಸ, ಹುಲಗೂರಿನ ಶಿವಯೋಗೇಶ್ವರ ಟ್ರೇಡರ್ಸ್, ಮಾಲತೇಶ ಕೃಷಿ ಕೇಂದ್ರದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಬಿಲ್ಲುಗಳನ್ನು ರೈತರಿಗೆ ನೀಡದೆ ಇರುವ ಕಾರಣ ಸದರಿ ಅಂಗಡಿಯ ರಸಗೊಬ್ಬರ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.ರಸಗೊಬ್ಬರ ಮಾರಾಟಗಾರರು ದರ ಹಾಗೂ ದಾಸ್ತಾನು ಪಟ್ಟಿ, ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಹಾಗೂ ಬಿಲ್ಲು ನೀಡುವುದು. ರೈತರು ಕೇಳಿದ ಗೊಬ್ಬರವನ್ನು ಮಾತ್ರ ನೀಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಮಾರಾಟ ಮಳಿಗೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಯೂರಿಯಾ ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಯೂರಿಯಾ ಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ಹಾಗೂ ಎನ್.ಪಿ.ಕೆ ನೀರಿನಲ್ಲಿ ಕರಗುವ ಗೊಬ್ಬರವನ್ನು ಬಳಕೆ ಮಾಡುವಂತೆ ತಿಳಿಸಿದ್ದಾರೆ.