ಸಾರಾಂಶ
ರಸಗೊಬ್ಬರಗಳನ್ನು ರೈತರ ಆಧಾರ್ ಪಡೆದು ಪಿ.ಓ.ಎಸ್ ಯಂತ್ರದ ಮೂಲಕವೇ ವಿತರಿಸಬೇಕು. ರಸಗೊಬ್ಬರ, ಬಿತ್ತನೆಬೀಜ ಮತ್ತು ಕೀಟನಾಶಕ ಕಾಯ್ದೆಗಳ ಅನುಸಾರ ವಹಿವಾಟು ನಡೆಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿವಿಧ ಕೃಷಿ ಪರಿಕರಗಳನ್ನು ಕಾಯ್ದೆಗಳನುಸಾರ ಯಾವುದೇ ಕೊರತೆಯಾಗದಂತೆ ತಾಲ್ಲೂಕಿನ ರೈತರಿಗೆ ಪಾರದರ್ಶಕವಾಗಿ ಮಾರಾಟ ಮಾಡಬೇಕೆಂದು ತಹಸೀಲ್ದಾರ್ ಎಂ. ಅನಿಲ್ ಸೂಚಿಸಿದರು.ಚಿಕ್ಕಬಳ್ಳಾಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಕೃಷಿ ಪರಿಕರ ಮಾರಾಟಗಾರರೊಂದಿಗೆ ಮುಂಗಾರು ಹಂಗಾಮು ಪೂರ್ವ ಸಿದ್ದತಾ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯವಾಗಿರುವ ಬಿತ್ತನೆಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುವಾಗ ಹೆಚ್ಚು ಹಣ ಪಡೆಯಬಾರದು. ನಿಗದಿಪಡಿಸಿದ ದರಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ಗುಣಮಟ್ಟದ ಪರಿಕರಗಳನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು. ದರಪಟ್ಟಿ ಫಲಕ ಅಳವಡಿಸಿ
ರಸಗೊಬ್ಬರಗಳ ದಾಸ್ತಾನು ವಿವರ, ದರ ಪಟ್ಟಿಯನ್ನು ಸಾರ್ವಜನಿಕರಿಗೆ ಎದ್ದುಕಾಣುವಂತೆ ಫಲಕಗಳಲ್ಲಿ ಪ್ರದರ್ಶಿಸಬೇಕು.ಕೃಷಿ ಪರಿಕರಗಳನ್ನು ಕೊಳ್ಳುವ ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ಸೂಕ್ತ ವಿವರಗಳೊಂದಿಗೆ ನೀಡಬೇಕು. ಪರಿಕರಗಳ ದಾಸ್ತಾನು ವಿವರಗಳನ್ನು ಇಲಾಖೆಗೆ ಕಾಲಕಾಲಕ್ಕೆ ಸಲ್ಲಿಸಬೇಕೆಂದು ಎಂದರು. ರಸಗೊಬ್ಬರಗಳನ್ನು ರೈತರ ಆಧಾರ್ ಪಡೆದು ಪಿ.ಓ.ಎಸ್ ಯಂತ್ರದ ಮೂಲಕವೇ ವಿತರಿಸಬೇಕು. ರಸಗೊಬ್ಬರ, ಬಿತ್ತನೆಬೀಜ ಮತ್ತು ಕೀಟನಾಶಕ ಕಾಯ್ದೆಗಳ ಅನುಸಾರ ವಹಿವಾಟು ನಡೆಸಬೇಕು. ಯಾವುದೇ ಕೊರತೆ ಲೋಪದೋಷಗಳಿಗೆ ಅವಕಾಶವಾಗದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಪರಿಕರಗಳನ್ನು ಮಾರಾಟ ಮಾಡಬೇಕೆಂದು ತಿಳಿಸಿದರು.ರಾತರಿಗೆ ಮಾಹಿತಿ ನೀಡಿಸಹಾಯಕ ಕೃಷಿ ನಿರ್ದೇಶಕ ಎ. ಕೇಶವರೆಡ್ಡಿ ಮಾತನಾಡಿ, ರೈತರಿಗೆ ಕೃಷಿ ಪರಿಕರಗಳ ಅಳವಡಿಕೆ ಕುರಿತು ತಾಂತ್ರಿಕ ಮಾಹಿತಿ ನೀಡಬೇಕು. ಕೃಷಿ ಸಂಬಂಧ ಪರಿಕರಗಳ ಮಾರಾಟದ ವಿವರಗಳ ಮಾಹಿತಿಯನ್ನು ಇಲಾಖೆಗೆ ತಪ್ಪದೆ ಸಲ್ಲಿಸಬೇಕು ಎಂದರು. ಗುಣಮಟ್ಟದ ಕೃಷಿ ಪರಿಕರ ನೀಡಿ
ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ರೈತರಿಗೆ ಸಕಾಲದಲ್ಲಿ ಗುಣಮಟ್ಟದ ಕೃಷಿ ಪರಿಕರಗಳನ್ನು ನೀಡಲು ಎಲ್ಲಾ ಪರಿಕರ ಮಾರಾಟಗಾರರು ಮುಂದಾಗಬೇಕು ಎಂದರು. ಸಭೆಯಲ್ಲಿ ಕೃಷಿ ಅಧಿಕಾರಿಗಳಾದ ಗಂಗಾಧರರೆಡ್ಡಿ, ರಾಮಚಂದ್ರ, ಕೃಷಿ ಇಲಾಖೆಯ ಸಿಬ್ಬಂದಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು ಇದ್ದರು.