ಸಾರಾಂಶ
ನಗರದ ಪಂ. ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗಣೇಶ ಚತುರ್ಥಿ ಅಂಗವಾಗಿ ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಬುಧವಾರ ಪ್ರತಿಷ್ಠಾಪಿಸಲಾದ ಗಣೇಶನನ್ನು ಸಂಭ್ರಮದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಗದಗ: ನಗರದ ಪಂ. ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗಣೇಶ ಚತುರ್ಥಿ ಅಂಗವಾಗಿ ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಬುಧವಾರ ಪ್ರತಿಷ್ಠಾಪಿಸಲಾದ ಗಣೇಶನನ್ನು ಸಂಭ್ರಮದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ನಗರದ ಮಸಾರಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಎಪಿಎಂಸಿ ಮಾರುಕಟ್ಟೆಯವರೆಗೆ ವಾದ್ಯ ಮೇಳಗಳೊಂದಿಗೆ ಗಣೇಶನ ಭವ್ಯ ಮೆರವಣಿಗೆ ಜರುಗಿತು. ಮರವಣಿಗೆಯಲ್ಲಿ ಒಂಟೆಗಳು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.ನಂತರ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಟ್ರಸ್ಟ್ ಕಮಿಟಿಯ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ವಾರಕರ, ಕಾರ್ಯದರ್ಶಿ ರಾಜು ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ನಿತೀಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ದುಂಡಪ್ಪನವರ, ವಿನಯ ಕಾಡಪ್ಪನವರ, ಬಸವರಾಜ ಕಾಡಪ್ಪನವರ, ಪ್ರವೀಣ, ವಿನೀತ ಕವಲೂರ, ಶರತ್ ಅಗಡಿ, ಸಾಗರ ವಜ್ರೇಶ್ವರಿ, ಅಜೀತ ಪುಣೇಕರ್, ಬಸವರಾಜ ಬಾವಿಕಟ್ಟಿ ಮುಂತಾದವರಿದ್ದರು.