ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕಿನ ಡೋರ್ನ್ನ್ಹಳ್ಳಿ ಸಂತ ಅಂಥೋಣಿಯವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬಸಿಲಿಕಾದ ತೇರಿನ ಮೆರವಣಿಗೆ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಎಸ್.ಜೆ. ಫ್ರಾನ್ಸಿಸ್ ಸೆರಾವೊ ಅವರು ಬೆಳಗ್ಗೆ 10ಕ್ಕೆ ಹಬ್ಬದ ಆಡಂಬರ ಗಾಯನ ಪೂಜೆಗೆ ಚಾಲನೆ ನೀಡಿದರು.
ಡೋರ್ನಹಳ್ಳಿ ಚರ್ಚಿನ ಧರ್ಮಗುರು ಡೇವಿಡ್ ಸಗಾಯರಾಜ್, ಕೊಲ್ಕತ್ತಾ ಧರ್ಮಗುರು ರಾಬರ್ಟ್ ಗ್ರೆಗೋರಿ ಮೊಂತೇರೋ, ಬೋಗಾದಿಯ ಧರ್ಮಗುರು ವ್ಯಾಲೆಂಟಿನ ರಾಜೇಂದ್ರಕುಮಾರ್, ಮೈಸೂರು ರೆಕ್ಟರ್ ಪ್ರಬೋಧನಾ ಗುರು ಥಾಮಸ್ ಮಂಜಲಿ, ಗಂಜಾಂ ಅಮಲೋದ್ಬವ ಮಾತೆಯ ದೇವಾಲಯದ ಧರ್ಮಗುರು ಜೆ. ಅಂತೋಣಪ್ಪ, ಬೆಂಗಳೂರಿನ ಮಾಹ ಧರ್ಮ ಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷ ಜೋಸೆಫ್ ಸೂಸೈನಾಥನ್, ಬೋಗಾದಿಯ ಕೃಪಾಲಯ ಗುರುಮಠದ ಅಲೆಕ್ಸಾಂಡರ್ ಡ್ಯಾನಿಯಲ್, ಹನೂರು ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಎಫ್. ಸಂಜಯ್ ಕುಮಾರ್, ಮಾದಾಪುರ ನಿರ್ಮಲ ಮಾತೆ ದೇವಾಲಯದ ಧರ್ಮಗುರು ಎ. ಸೂಸೈ, ನಂಜನಗೂಡು ಬಾಲಯೇಸು ದೇವಾಲಯದ ಧರ್ಮಗುರು ಎಂ. ಮೈಕಲ್ ಮರಿ ಹಬ್ಬದ ಆಡಂಬರ ಗಾಯನ ಬಲಿ ಪೂಜೆ ನಡೆಸಿಕೊಟ್ಟರು.ಬಳಿಕ ಸಂಜೆ 6ಕ್ಕೆ ಚರ್ಚ್ ಮುಂಭಾಗದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಸಂತ ಅಂಥೋಣಿಯವರ ವೈಭವದ ತೇರಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂತ ಆಂಥೋಣಿ ಬಸಿಲಿಕಾ ಚರ್ಚಿನ ಆಡಳಿತಾಧಿಕಾರಿ ಪ್ರವೀಣ್ ಪೆದ್ರು ಹಾಗೂ ಧರ್ಮಗುರು ಡೇವಿಡ್ ಸಗಾಯರಾಜ್ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.ಐತಿಹಾಸಿಕ ಮತ್ತು ಪವಾಡ ಪುರುಷ ಎಂದೇ ಹೆಸರು ವಾಸಿಯಾದ ಡೋರ್ನಹಳ್ಳಿ ಸಂತ ಅಂಥೋಣಿಯವರ ವಾರ್ಷಿಕ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಹಿನ್ನೆಲೆ ಮೈಸೂರು-ಅರಸೀಕೆರೆ ರೈಲು ಗಾಡಿಗಳನ್ನು ಮೂರು ದಿನದವರೆಗೆ ಡೋರ್ನ್ನಹಳ್ಳಿ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡುವುದರ ಜೊತೆಗೆ ಮೈಸೂರು ಮತ್ತು ಕೆ.ಆರ್. ನಗರದಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ.ಕಳೆದ ವಾರದಿಂದ ಆರಂಭವಾಗಿದ್ದ ಸಂತ ಅಂತೋಣಿ ಬಸಿಲಿಕಾದ ವಾರ್ಷಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಆಡಂಬರದ ಗಾಯನ ಪೂಜೆ ವೀಕ್ಷಿಸಿ ಅಂಥೋಣಿಯವರ ದರ್ಶನ ಪಡೆದರು. ಶಾಸಕ ಡಿ. ರವಿಶಂಕರ್ ಭೇಟಿ ನೀಡಿ ಚರ್ಚಿನ ಧರ್ಮಗುರುಗಳಿಗೆ ಜಾತ್ರಾ ಮಹೋತ್ಸವದ ಶುಭಾಷಯಗಳನ್ನು ತಿಳಿಸಿದರಲ್ಲದೆ, ತಾಲೂಕು ಆಡಳಿತದ ವತಿಯಿಂದ ಬಂದಂತಹ ಭಕ್ತ ಸಮೂಹಕ್ಕೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.ದಕ್ಷಿಣ ಭಾರತದ ಭಾಗದಲ್ಲಿ ಕ್ರೈಸ್ತ ಭಾಂದವರ ಜಾತ್ರಾ ಮಹೋತ್ಸವ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಬೇರೆಲ್ಲೂ ಇಲ್ಲ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಸಕಲ ಸೌಕರ್ಯಗಳನ್ನು ಕಲ್ಪಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.ಧರ್ಮಗುರು ಡೇವಿಡ್ ಸಗಾಯರಾಜ್, ಬಸಿಲಿಕಾದ ಆಡಳಿತಾಧಿಕಾರಿ ಪ್ರವೀಣ್ ಪೆದ್ರು, ಜಿಪಂ ಮಾಜಿ ಸದಸ್ಯರಾದ ಸಿದ್ದಪ್ಪ, ಮಾರ್ಚಹಳ್ಳಿ ಶಿವರಾಮು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಕಾಂಗ್ರೆಸ್ ಮುಖಂಡರಾದ ಬಿ.ಎಂ. ಗಿರೀಶ್, ಕೆ.ಪಿ. ಜಗದೀಶ್, ಕುಮಾರ್, ಪ್ರಕಾಶ್ ಇದ್ದರು.ಸಂತ ಅಂಥೋಣಿಯವರ ಸಂಭ್ರಮದ ಜಾತ್ರಾ ಮಹೋತ್ಸವ
ಜಾತ್ರಾ ಮಹೋತ್ಸವ ಹಿನ್ನೆಲೆ ಮೈಸೂರು-ಅರಸೀಕೆರೆ ರೈಲು ಗಾಡಿಗಳನ್ನು ಮೂರು ದಿನದವರೆಗೆ ಡೋರ್ನ್ನಹಳ್ಳಿ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡುವುದರ ಜೊತೆಗೆ ಮೈಸೂರು ಮತ್ತು ಕೆ.ಆರ್. ನಗರದಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.