ಕನ್ನಡಪ್ರಭ ವಾರ್ತೆ, ಕಡೂರು

ಶ್ರೀ ರಾಮನವಮಿ ಅಂಗವಾಗಿ ಕಡೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಶ್ರೀರಾಮ ಮತ್ತು ಶ್ರೀಆಂಜನೇಯ ದೇವಾಲಯಗಳಲ್ಲಿ ರಾಮನವಮಿ ಶ್ರದ್ದಾಭಕ್ತಿಯಿಂದ ನಡೆಯಿತು.

ಪಟ್ಟಣದ ಕೋಟೆ ಶ್ರೀಪಾತಾಳಾಂಜನೇಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆಗಳೊಂದಿಗೆ ರಾಮನವಮಿ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿಗೆ ಪುಣ್ಯಾಹ, ಕುಂಭಾಭಿಷೇಕ ನಡೆದು ಅದ್ಭುತ ಅಲಂಕಾರ ಕಂಗೊಳಿಸಿತು.

11 ಗಂಟೆಗೆ ರಾಮತಾರಕ, ದೇವತೆಗಳನ್ನು ಹೋಮಕ್ಕೆ ಆಹ್ವಾನಿಸಿ ಋತಿಜ್ವರು ಚಾಲನೆ ನೀಡಿದರು. ನೂರಾರು ಭಕ್ತರು ಆಗಮಿಸಿ ಹೋಮದಲ್ಲಿ ಪಾಲ್ಗೊಂಡರು, ಮಧ್ಯಾಹ್ನ 1 ಗಂಟೆಗೆ ಹೋಮ, ಮಹಾಮಂಗಳಾರತಿ ಪೂರ್ಣಾಹುತಿಯಲ್ಲಿ ಭಾಗ ವಹಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾದರು.

ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಮುಖಂಡರು ಹಾಗು ದೇವಾಲಯದ ಟ್ರಸ್ಟಿನ ಪದಾಧಿಕಾರಿ ಮಲ್ಲಿಕಾರ್ಜುನ (ಮಲ್ಲು), ಅಡಕೆ ಚಂದ್ರಶೇಖರ್, ಹುಲಿಕೆರೆ ಮಹೇಶ್, ಬಸವರಾಜು, ಮಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಯಗಟಿ ಗ್ರಾಮದಲ್ಲಿ 800 ವರ್ಷಗಳ ಇತಿಹಾಸದ ಶ್ರೀವೀರಾಂಜನೇಯ ದೇವಾಲಯದಲ್ಲಿ ಸಂಭ್ರಮದ ರಾಮನವಮಿ ನಡೆಯಿತು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಮಾಜಿ ಶಾಸಕ ವೈ.ಎಸ್.ವಿ. ದತ್ತ ಮತ್ತು ಬೆಳ್ಳಿ ಪ್ರಕಾಶ್‌ ಪಾಲ್ಗೊಂಡಿದ್ದರು.

ಪಟ್ಟಣದ ದೊಡ್ಡಪೇಟೆ ಶ್ರೀ ರಾಮ ದೇವಾಲಯದಲ್ಲಿ ಸಾಂಪ್ರದಾಯಿಕ ರಾಮನವಮಿ ನಡೆಯಿತು. ಪುರಸಭೆ ಹಿರಿಯ ಸದಸ್ಯ ತೋಟದ ಮನೆ ಮೋಹನ್ ನೇತೃತ್ವದಲ್ಲಿ ಯುವಕರು ಪಾಲ್ಗೊಂಡಿದ್ದರು.

ಕಡೂರು ಪಟ್ಟಣದ ಶ್ರೀ ಪೇಟೆ ಗಣಪತಿ ಆಂಜನೇಯ ದೇವಾಲಯದ ಸಮಿತಿ ಪದಾಧಿಕಾರಿ ಟಿ.ಡಿ.ರಾಜನ್, ಕೆ.ಬಿ. ಸೋಮೇಶ್ ಭಾಗವಹಿಸಿದ್ದರು. ತಾಲೂಕಿನ ನಿಡಘಟ್ಟ, ಜೋಡಿಹೋಚೀಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿಜೃಂಭಣೆಯ ರಾಮೋತ್ಸವ ನಡೆಯಿತು.

27ಕೆಕೆಡಿಯು1.

ಕಡೂರಿನ ಕೋಟೆಯ ಶ್ರೀಆಂಜನೇಯ ಸ್ವಾಮಿ ದೇಗುಲದಲ್ಲಿ ರಾಮನವಮಿ ನಡೆಯಿತು.

27ಕೆಕೆಡಿಯು1ಎ.

ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆದ ಶ್ರೀರಾಮನವಮಿ ಆಚರಣೆಯಲ್ಲಿ ಕಂಗೊಳಿಸುತ್ತಿರುವ ಶ್ರೀ ಆಂಜನೇಯ ಸ್ವಾಮಿ.

27ಕೆಕೆಡಿಯು1ಬಿ. ಕಡೂರಿನ ಕೋಟೆಯ ಶ್ರೀ ಆಂಜನೇಯಸ್ವಾಮಿ