ಕನ್ನಡಪ್ರಭ ವಾರ್ತೆ ಬಾಗಲಕೋಟೆ ತಾಲೂಕಿನ ಹಳ್ಳೂರು, ಭಗವತಿ ಗ್ರಾಮಗಳಲ್ಲಿ ಶಾಸಕ ಜೆ.ಟಿ.ಪಾಟೀಲ ಬುಧವಾರ ಬೆಳಗ್ಗೆ ಪ್ರಚಾರ ಕೈಗೊಂಡು ಉಮೇಶ ಮೇಟಿ ಅವರ ಪರ ಮತ ಯಾಚಿಸಿದರು. ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಗ್ರಾಮಗಳ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಾಲೂಕಿನ ಹಳ್ಳೂರು, ಭಗವತಿ ಗ್ರಾಮಗಳಲ್ಲಿ ಶಾಸಕ ಜೆ.ಟಿ.ಪಾಟೀಲ ಬುಧವಾರ ಬೆಳಗ್ಗೆ ಪ್ರಚಾರ ಕೈಗೊಂಡು ಉಮೇಶ ಮೇಟಿ ಅವರ ಪರ ಮತ ಯಾಚಿಸಿದರು. ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಗ್ರಾಮಗಳ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಬಸವರಾಜ ಮೇಟಿ, ಮಹಾಂತೇಶ ಜನಗೌಡರ, ಗಿರೀಶ ನಾಡಗೌಡರ, ಧರ್ಮಣ್ಣ ಭಗವತಿ, ವೆಂಕಟೇಶ ಜಂಬಗಿ ಇತರರು ಇದ್ದರು.
ನಗರದಲ್ಲಿ ಬಿರುಸಿನ ಪ್ರಚಾರ:ನಗರದ ವಿದ್ಯಾಗಿರಿ ಭಾಗದಲ್ಲಿ ಮಂಗಳವಾರ ಸಂಜೆ ಸಚಿವ ಬೈರತಿ ಸುರೇಶ ಪ್ರಚಾರ ನಡೆಸಿ ಮತ ಯಾಚಿಸಿದರು.
ದಿ.ಎಚ್.ವೈ.ಮೇಟಿ ಅವರ ಪ್ರಯತ್ನದಿಂದ ನಗರದ ಜನತೆಯ ವೈದ್ಯಕೀಯ ಮಹಾವಿದ್ಯಾಲಯ ಕನಸು ನನಸಾಗುತ್ತಿದೆ. ಬಡವರ, ಹಳ್ಳಿ ಜನತೆ ಪರ ಅಪಾರ ಕಾಳಜಿ ಹೊಂದಿದ್ದ ಅವರ ಕಾರ್ಯಗಳನ್ನು ಗಮನಿಸಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಸಚಿವರಾದ ಅಜಯಕುಮಾರ್ ಸರನಾಯಕ, ಎಸ್.ಆರ್.ಪಾಟೀಲ, ಉಮೇಶ ಮೇಟಿ, ಮುಖಂಡರಾದ ನಾಗರಾಜ ಹದ್ಲಿ, ಶಿವಕುಮಾರ ನಂದಿಕೋಲಮಠ, ಮಲ್ಲಿಕಾರ್ಜುನ ಚರಂತಿಮಠ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವೀಣಾ ಕಾಶಪ್ಪನವರ ಹಾಗೂ ಬಾಯಕ್ಕ ಮೇಟಿ, ಆನಂದ ಜಿಗಜಿನ್ನಿ, ಸಂತೋಷ ಹೊಕ್ರಾಣಿ, ಹಣಮಂತ ರಾಕುಂಪಿ, ಶಂಕರ ನಾಯಕ, ಭರತ ಈಟಿ, ರಕ್ಷಿತಾ ಈಟಿ, ಅಬ್ದುಲ್ ರಜಾಕ್ ಬೇನೂರ, ಅಕ್ಬರ್ ಮುಲ್ಲಾ, ಜಾಫರ್ ಬೇಪಾರಿ ಇತರರು ಇದ್ದರು.
---------------------ಕೋಟ್ಸ್..
ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಇಲ್ಲಿನ ಮತದಾರರು ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಲಿದ್ದಾರೆ.- ಆರ್.ವಿ.ದೇಶಪಾಂಡೆ, ಮಾಜಿ ಸಚಿವ