ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಕಾಂಗ್ರೆಸ್ ಸರ್ಕಾರ ಚಾಮರಾಜನಗರ ವಿಶ್ವವಿದ್ಯಾಲಯವನ್ನು ಆರ್ಥಿಕ ನಷ್ಟ ಕಾರಣ ನೀಡಿ, ಮುಚ್ಚಲು ಮುಂದಾದರೆ ವಿದ್ಯಾರ್ಥಿಗಳೊಡಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಎಚ್ಚರಿಸಿದರು.ನಗರದಲ್ಲಿ ಸರ್ಕಾರ ಆರ್ಥಿಕ ನೆಪವೊಡ್ಡಿ ರಾಜಕೀಯಕೋಸ್ಕರ ಚಾಮರಾಜನಗರ ವಿವಿಯನ್ನು ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ರಸ್ತೆತಡೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ, ಗಡಿ ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಬಡವರ ಮಕ್ಕಳಿಗೂ ತಾವಿರುವ ಸ್ಥಳಗಲ್ಲಿಯೇ ಉನ್ನತ ಶಿಕ್ಷಣ ಪಡೆಯಲಿ ಎಂಬ ಕಾರಣಕ್ಕೆ ವಿಶ್ವ ವಿದ್ಯಾನಿಲಯವನ್ನು ಘೋಷಣೆ ಮಾಡಲಾಗಿದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ರಾಜಕೀಯಗೋಸ್ಕರ ಮುಂದುವರಿಸುವುದು ಬೇಡ ಎಂದು ವಿಶ್ವವಿದ್ಯಾನಿಲಯವನ್ನು ಮುಚ್ಚಲು ಮುಂದಾಗಿರುವುದು ಶೋಚನೀಯ. ಇದೊಂದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.
ಗಡಿ ಜಿಲ್ಲೆಯಲ್ಲಿ ಗ್ರಾಮೀಣ ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿದೆ, ಮುಚ್ಚಿದರೆ ಅವರು ಮೈಸೂರಿಗೂ ಬೆಂಗಳೂರಿಗೂ ಹೋಗಲು ಸಾಧ್ಯವಿಲ್ಲ ಎಂದರು. ವಿಶ್ವವಿದ್ಯಾಲಯಗಳು ಆ ಪ್ರದೇಶದ ಶೈಕ್ಷಣಿಕ ಪ್ರಗತಿಗೆ ನಾಂದಿಯಾಗುತ್ತವೆ. ಅಲ್ಲದೇ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿರುವ ದಲಿತರು, ಹಿಂದುಳಿದ ವರ್ಗಗಳ ಬಡ ಹೆಣ್ಣು ಮಕ್ಕಳು ಮತ್ತು ಉತ್ಸಾಹಿ ಯುವಕರಿಗೆ ವಿಶ್ವ ವಿದ್ಯಾನಿಲಯ ಬಂದ್ ಆದರೆ, ತೀವ್ರ ತೊಂದರೆಯಾಗುತ್ತದೆ ಎಂದರು.ಜಿಲ್ಲೆಯ ವ್ಯಾಪ್ತಿಯಲ್ಲಿ ೫ ಸಾವಿರಕ್ಕೂ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಮುಂದೆ ೧೦ ಸಾವಿರ ಆಗಬಹದು. ಏನಾದರೂ ಮುಚ್ಚಲು ಮುಂದಾದರೆ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಆಟೋ ಸುರೇಶ್, ಕಂಡಕ್ಟರ್ ಸೋಮು, ಪರ್ವತರಾಜ್, ಮಹೇಶ್ ರವಿಚಂದ್ರಪ್ರಸಾದ್, ರಾಚಪ್ಪ, ಲಿಂಗರಾಜು, ಚಂದ್ರಶೇಖರ್, ಆಕಾಶ್, ಮಂಜು ಇತರರು ಇದ್ದರು.