ಸಾರಾಂಶ
ನವೋದಯ ವಿದ್ಯಾಸಂಘದ ನೂತನ ನಿರ್ದೇಶಕರಾದ ವಕೀಲರಾದ ಜಲೇಂದ್ರ ಕುಮಾರ್ ಸಂಘಕ್ಕೆ ವೈಯಕ್ತಿಕವಾಗಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ೫೦ ಸಾವಿರ ರು. ಗಳ ಹಣ ನೀಡಿದರು. ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚು ಮಾಡುವ ಸಲುವಾಗಿ ನಿರ್ದೇಶಕರಾಗಿ ಶಾಲೆಗೆ ಬಂದಿದ್ದು, ಈ ಹಣವನ್ನು ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿ ಜನರಿಗೆ ಉತ್ತಮ ಸಂದೇಶವನ್ನು ನೀಡಲು ಬಯಸಿದ್ದೇನೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನವೋದಯ ವಿದ್ಯಾಸಂಘದ ನೂತನ ನಿರ್ದೇಶಕರಾದ ವಕೀಲರಾದ ಜಲೇಂದ್ರ ಕುಮಾರ್ ಸಂಘಕ್ಕೆ ವೈಯಕ್ತಿಕವಾಗಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ೫೦ ಸಾವಿರ ರು. ಗಳ ಹಣ ನೀಡಿದರು.ಮಾಧ್ಯಮದವರೊಂದಿಗೆ ಮಾತನಾಡಿ ನವೋದಯ ಶಾಲೆಯ ಹಳೆಯ ವಿದ್ಯಾರ್ಥಿಯಾದ ನಾವು ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚು ಮಾಡುವ ಸಲುವಾಗಿ ನಿರ್ದೇಶಕರಾಗಿ ಶಾಲೆಗೆ ಬಂದಿದ್ದು, ಈ ಹಣವನ್ನು ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿ ಜನರಿಗೆ ಉತ್ತಮ ಸಂದೇಶವನ್ನು ನೀಡಲು ಬಯಸಿದ್ದು, ಮುಂದಿನ ದಿನಗಳಲ್ಲಿ ಐದು ವರ್ಷದ ಸುಭದ್ರ ಆಡಳಿತ ನೀಡುವಲ್ಲಿ ಎಲ್ಲಾ ನಿರ್ದೇಶಕರು ಉತ್ಸುಕರಾಗಿದ್ದು ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬೋಜೇಗೌಡ, ವಕೀಲರಾದ ಕವಿತ ಜಲೇಂದ್ರ ಮತ್ತಿತರಿದ್ದರು.