ಕೆಎಂಸಿಯಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಟ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ

| Published : Feb 14 2025, 12:33 AM IST

ಕೆಎಂಸಿಯಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಟ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಡಾ. ಬಿ. ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ಮಂಗಳೂರು, ಲಯನ್ಸ್‌ ಕ್ಲಬ್‌ ಕದ್ರಿ ಸಹಯೋಗದಲ್ಲಿ ‘ಕ್ಯಾನ್‌ ಕಾನ್‌ ಕರ್‌’ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕ್ಯಾನ್ಸರ್‌ ಕುರಿತಾದ ಮಿಥ್ಯ ಮತ್ತು ಸತ್ಯದ ಕುರಿತು ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಮನೋಸ್ಥೈರ್ಯದ ಮಹತ್ವದ ಮೇಲೆ ತಜ್ಞರು ಬೆಳಕು ಚೆಲ್ಲಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಡಾ. ಬಿ. ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ಮಂಗಳೂರು, ಲಯನ್ಸ್‌ ಕ್ಲಬ್‌ ಕದ್ರಿ ಸಹಯೋಗದಲ್ಲಿ ‘ಕ್ಯಾನ್‌ ಕಾನ್‌ ಕರ್‌’ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ಕುರಿತಾದ ಮಿಥ್ಯ ಮತ್ತು ಸತ್ಯದ ಕುರಿತು ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಮನೋಸ್ಥೈರ್ಯದ ಮಹತ್ವದ ಮೇಲೆ ತಜ್ಞರು ಬೆಳಕು ಚೆಲ್ಲಿದರು. ಕೇವಲ ವೈದ್ಯಕಿಯ ಚಿಕಿತ್ಸೆಗೆ ಬಗ್ಗೆ ಮಾತ್ರವಲ್ಲದೇ ಭಾವನಾತ್ಮಕ ಹಾಗೂ ಜೆನೆಟಿಕ್‌ ಆಯಾಮಗಳ ಬಗ್ಗೆಯೂ ಸಮಗ್ರ ಚರ್ಚೆ ನಡೆಸಲಾಯಿತು. ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದ್ದಲ್ಲಿ ಕ್ಯಾನ್ಸರ್‌ ರೋಗವನ್ನು ಗುಣಪಡಿಸಬಹುದು ಎಂಬ ಸಂದೇಶವನ್ನು ತಜ್ಞರು ನೀಡಿದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಜೀವನಶೈಲಿಯ ಬಗ್ಗೆಯೂ ತಜ್ಞರು ಅರಿವು ನೀಡಿದರು. ಪ್ಲಾಸ್ಟಿಕ್‌

ಡಬ್ಬಿಗಳಲ್ಲಿ ಶೇಖರಿಸಿಟ್ಟ ಆಹಾರ ಸೇವನೆ ಕೂಡ ಕ್ಯಾನ್ಸರ್‌ಕಾರಕ ಹಾಗೇ ಆನುವಂಶಿಕವಾಗಿ ಬರುವ ಕ್ಯಾನ್ಸರ್‌ ಮತ್ತು

ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಅನುಭವಿಸುವ ಮಾನಸಿಕ ತುಮುಲಗಳ ಬಗ್ಗೆಯೂ ಚರ್ಚಿಸಲಾಯಿತು.

ಆಂಕಾಲಜಿ ತಜ್ಞರು, ಮನೋರೋಗ ತಜ್ಞರು ಹಾಗೂ ಆರೋಗ್ಯ ಸೇವೆಯ ತಜ್ಞರು ಕಾರ್ಯಕ್ರಮದಲ್ಲಿ ಸಭಿಕರ

ಪ್ರಶ್ನೆಗಳಿಗೆ ಉತ್ತರಿಸಿದರು. ಈ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿರುವ ಹಲವು ಗೊಂದಲಗಳಿಗೆ ಪರಿಹಾರ

ನೀಡಲಾಯಿತು.

ತಜ್ಞ ವೈದ್ಯರಾದ ಡಾ. ಪ್ರಶಾಂತ ಬಿ. (ಕನ್ಸಲ್ಟೆಂಟ್‌ ಹೆಮೆಟೊಲಾಜಿ), ಡಾ. ಅಭಿಷೇಕ್‌ ಕೃಷ್ಣ (ರೇಡಿಯೇಶನ್‌ ಒನ್ಕೊಲಾಜಿಸ್ಟ್‌), ಡಾ.ವಿವೇಕಾನಂದ ಭಟ್‌ (ಕನ್ಸಲ್ಟೆಂಟ್‌ ಮೆಡಿಕಲ್‌ ಜೆನೆಟಿಕ್ಸ್‌), ಆಸ್ಪತ್ರೆಯ ಮನೋಶಾಸ್ತ್ರಜ್ಞ ಡಾ. ಕೀರ್ತಿಶ್ರೀ ಸೋಮಣ್ಣ, ಡಾ. ಹರೀಶ್‌ ಇ. (ಸರ್ಜಿಕಲ್‌ ಆನ್ಕೋಲಾಜಿಸ್ಟ್‌), ಡಾ. ಸನಲ್‌ ಫರ್ನಾಂಡಿಸ್‌, (ಮೆಡಿಕಲ್‌ ಒನ್ಕೋಲಾಜಿಸ್ಟ್‌), ಡಾ. ಕಾರ್ತಿಕ್‌ ಕೆ. ಎಸ್‌. (ಕನ್ಸಲ್ಟೆಂಟ್‌ ಸರ್ಜಿಕಲ್‌ ಒನ್ಕೊಲಾಜಿಸ್ಟ್‌), ಡಾ. ಬಸಿಲಾ ಅಮೀರ್‌ ಅಲಿ (ಕನ್ಸಲ್ಟೆಂಟ್‌ ಬ್ರೆಸ್ಟ್‌ ಸರ್ಜನ್‌), ಡಾ. ಹರ್ಷ ಪ್ರಸಾದ್‌ (ಕನ್ಸಲ್ಟೆಂಟ್‌ ಪಿಡಿಯಾಟ್ರಿಕ್‌ ಹೆಮೆಟೊ-ಒನ್ಕೊಲಾಜಿ), ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಗೀರ್‌ ಸಿದ್ಧಿಕಿ, ಮಾತನಾಡಿದರು.