ಸಾರಾಂಶ
ಒಳಮೀಸಲಾತಿಯನ್ನು ಜಾರಿ ಮಾಡುವುದರಿಂದ ಎಲ್ಲಾ ಶೋಷಿತ ಸಮುದಾಯಗಳಿಗೆ ಅನುಕೂಲವಾಗುವ ಕಾರಣದಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜೂನ್ ೯ ರಂದು ನಡೆಯುವ ಕ್ರಾಂತಿಕಾರಿ ಹೋರಾಟದಲ್ಲಿ ಶೋಷಿತ ಸಮುದಾಯದವರು ಹಾಗೂ ಹಿತೈಷಿಗಳು ಭಾಗಿಯಾಗುವಂತೆ ಕ್ರಾಂತಿಕಾರಿ ಹೋರಾಟ ರಥದ ನೇತೃತ್ವ ವಹಿಸಿರುವ ಬಿ.ಆರ್. ಭಾಸ್ಕರ್ ಪ್ರಸಾದ್ ವಿನಂತಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಒಳಮೀಸಲಾತಿಯನ್ನು ಜಾರಿ ಮಾಡುವುದರಿಂದ ಎಲ್ಲಾ ಶೋಷಿತ ಸಮುದಾಯಗಳಿಗೆ ಅನುಕೂಲವಾಗುವ ಕಾರಣದಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜೂನ್ ೯ ರಂದು ನಡೆಯುವ ಕ್ರಾಂತಿಕಾರಿ ಹೋರಾಟದಲ್ಲಿ ಶೋಷಿತ ಸಮುದಾಯದವರು ಹಾಗೂ ಹಿತೈಷಿಗಳು ಭಾಗಿಯಾಗುವಂತೆ ಕ್ರಾಂತಿಕಾರಿ ಹೋರಾಟ ರಥದ ನೇತೃತ್ವ ವಹಿಸಿರುವ ಬಿ.ಆರ್. ಭಾಸ್ಕರ್ ಪ್ರಸಾದ್ ವಿನಂತಿಸಿದರು.ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಲವಾರು ವರ್ಷಗಳಿಂದ ಒಳಮೀಸಲಾತಿಗಾಗಿ ಶೋಷಿತ ಸಮುದಾಯಗಳು ಹೋರಾಟ ನಡೆಸುತ್ತಾ ಬಂದಿದ್ದು, ಪ್ರೊ. ಕೃಷ್ಣಪ್ಪನವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ೨ ತಿಂಗಳ ಕಾಲಾವಕಾಶ ಪಡೆದಿತ್ತು. ನಂತರ ಮೀಸಲಾತಿ ಘೋಷಣೆಯಾಗುವ ತನಕ ನೇಮಕಾತಿ ತಡೆಹಿಡಿಯಬೇಕಿದ್ದ ಸರ್ಕಾರ ಬ್ಯಾಕ್‌ಲಾಕ್ ಹುದ್ದೆಗಳ ನೇಮಕಾತಿ ನೆಪ ಅನುಸರಿಸಿತು. ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ಅನುಸರಿಸುತ್ತಾ ಬಂದಿದ್ದು, ಇದೇ ರೀತಿ ನೇಮಕಾತಿ ಮುಂದುವರಿಸಿದಲ್ಲಿ ಹೋರಾಟ ಅನಿವಾರ್ಯ ಎಂದರು.
ರಾಜ್ಯದಾದ್ಯಂತ ಎಲ್ಲಾ ತಾಲೂಕಿನಲ್ಲೂ ಕ್ರಾಂತಿ ರಥ ಸಂಚರಿಸುವ ಮೂಲಕ ಜೂ. ೯ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಮೂಲಕ ಒಳಮೀಸಲಾತಿಗೆ ಒತ್ತಾಯಿಸುತ್ತೇವೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ೩೧೭ಜೆ ಅನುಸರಿಸಿ ಬಡ್ತಿ ನೀಡಿತು. ಮುಂದುವರಿದಂತೆ ನೇರ ನೇಮಕಾತಿ ಅಸ್ತ್ರ ಪ್ರಯೋಗಿಸಿದ್ದು, ನೇಮಕಾತಿ ಬಡ್ತಿ ನಿರಂತರವಾಗಿದೆ. ಆದರೆ ಒಳಮೀಸಲಾತಿ ವಿಚಾರ ಕೈಗೆತ್ತಿಕೊಂಡಿಲ್ಲ. ಇತ್ತೀಚೆಗೆ ಡಾ. ಬಾಬು ಜಗಜೀವರಾಮ್ ಜನ್ಮದಿನಾಚರಣೆ ಸಂದರ್ಭದಲ್ಲಿ ಕ್ಯಾಬಿನೆಟ್‌ನಲ್ಲಿ ನೇಮಕಾತಿ ತಡೆ ಹಿಡಿಯುತ್ತೇವೆ ಎಂದಿದ್ದಾರೆ. ಆದರೆ ಮುಖ್ಯಮಂತ್ರಿಗಳ ವಾಗ್ದಾನದಂತೆ ನಡೆಸಬೇಕಿರುವ ಮಂತ್ರಿಗಳು ಆದೇಶ ಹೊರಡಿಸದೇ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂದಿನ ಸ್ಥಳೀಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.ಡಿಎಸ್‌ಎಸ್ ಒಕ್ಕೂಟ ರಾಜ್ಯಸಂಚಾಲಕ ನಾರಾಯಣ್, ಕರ್ನಾಟಕ ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕ್ಯಾತನಹಳ್ಳಿ, ಸಿ.ಆರ್.ಮಂಜುನಾಥ್, ತಾಲೂಕು ಅಧ್ಯಕ್ಷ ರವಿಕುಮಾರ್, ಮುಖಂಡರಾದ ಎಚ್‌ಸಿಎನ್ ಚಂದ್ರು ಇತರರು ಇದ್ದರು.