ದೇಶದ ಏಳಿಗೆಗೆ ಹೋರಾಡಿ: ವಾಗ್ಮಿ ಹಾರಿಕಾ

| Published : Feb 08 2024, 01:31 AM IST

ಸಾರಾಂಶ

ಮಂಗಲಗಿ ಗ್ರಾಮದ ಯುವಕರು ಹಮ್ಮಿಕೊಂಡಿರುವ ರಾಮೋತ್ಸವ ಹಾಗೂ ಹಿಂದೂ ಜಾಗೃತಿ ಸಮಾವೇಶ ಯಶಸ್ವಿ.

ಕನ್ನಡಪ್ರಭ ವಾರ್ತೆ ಕಾಳಗಿ

ಭಾರತ ವಿಶ್ವಗುರುವಾಗುವತ್ತ ಮುನ್ನುಗ್ಗುತ್ತಿದೆ. ಈ ದೇಶದ ಪ್ರತಿಯೊಬ್ಬನ ಕಣಕಣದಲ್ಲಿ ದೈವಿ ಶಕ್ತಿ ಇದೆ. ಹಿಂದುಗಳು ಕುಂಭಕರ್ಣನಂತೆ ಮಲಗದೆ ಸಿಡಿದೆದ್ದು ದೇಶದ ಏಳಿಗೆಗಾಗಿ ಹೋರಾಡಬೇಕಿದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದ್ದಾರೆ.

ಮಂಗಲಗಿ ಗ್ರಾಮದ ಯುವಕರು ಹಮ್ಮಿಕೊಂಡಿರುವ ರಾಮೋತ್ಸವ ಹಾಗೂ ಹಿಂದೂ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಮಾತನ್ನಾಡಿದರು.

ಮೊದಲು ಹಿಂದೂಗಳಾಗೋಣ, ನಂತರ ನಮ್ಮ ಜಾತಿ ಧರ್ಮ ಮಾಡುವ, ಧರ್ಮ ಇದ್ದ ಕಡೆ ಯಾವಾಗಲೂ ಜಯವಾಗುತ್ತದೆ. ರಾಮನ ಆದರ್ಶ ಮಕ್ಕಳಿಗೆ ಹೇಳಿಕೊಡಿ ಜತಗೆ ಉತ್ತಮ ಸಂಸ್ಕಾರ ಕಲಿಸಿ, ಒಮ್ಮೆ ವಾಲ್ಮೀಕಿ ನಾರದರಿಗೆ ಕೇಳಿದಂತೆ ಜಗತ್ತಿಗೆ ಆದರ್ಶ ಕೊಡಬೇಕು ಅಂತಹ ವ್ಯಕ್ತಿ ಯಾರು ಎಂದಾಗ, ನಾರದರು ರಾಮನ ಹೆಸರು ಹೇಳಿದರೆಂದು ಹಾರಕಾ ಹೇಳಿದರು.

ಶ್ರೀಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಮ್ಮ ತಮ್ಮ ಬೇಳೆ ಬೆಯಿಸೋಗೋಸ್ಕರ ಸಮಾಜದಲ್ಲಿ ಜಾತಿ ಮತ ಭೇದವೆಂಬ ವಿಷಬೀಜ ಬಿತ್ತಿ ದೊಡ್ಡ ದೊಡ್ಡ ಧರ್ಮವನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆಂದು ದೂರಿದ ಹಾರಿಕಾ ಇಂತಹ ಬೆಳವಣಿಗೆಯನ್ನು ಮಟ್ಟ ಹಾಕಬೇಕು ಎಂದರು.

ಸೇಡಂ ಕೊತ್ತಲಬಸಬೇಶ್ವರ ವಿರಕ್ತ ಮಠದ ಸದಾಶಿವ ಸ್ವಾಮಿಜಿ ಮಾತನಾಡಿ, ಭವ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಕೀರಿಟ ವಸ್ತ್ರ ಕಮಲದ ಹೂವನ್ನು ಅರ್ಪಿಸುವುದನ್ನು ಕಂಡರೆ ವಿಶ್ವದಲ್ಲಿಯೇ ಭಕ್ತಿಯ ಧಾರ್ಮಿಕ ನಾಡು ಹೆಮ್ಮೆಯ ಬೀಡು ಭಾರತ ಎಂದರು.

ಸುಗೂರ ಕೆ ಗ್ರಾಮದ ಪವನದಾಸ ಮಾಹರಾಜ ಮಾತನಾಡಿ, ಅಯೋಧ್ಯೆಯ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಿಂದ ದೇಶದಲ್ಲಿ ರಾಮರಾಜ್ಯ ಮರಳಿ ಬಂದಂತಾಗಿದೆ ಎಂದರು.

ಮಂಗಲಗಿ ಹಿರೇಮಠದ ಶಾಂತ ಸೋಮನಾಥ ಶಿವಾಚಾರ್ಯರು ಮಾತನಾಡಿದರು. ನರಸಿಂಹರಾವ ದೇಶಪಾಂಡೆ ಅಧ್ಯಕ್ಷೆತೆ ವಹಿಸಿದರು. ನಿಂಬೇಣ್ಣಪ್ಪ ಕೋರವಾರ, ಸಂತೋಷ ಪಾಟೀಲ ಮಂಗಲಗಿ, ರಾಜಶೇಖರ ರಾಜಾಪುರ, ಶ್ರೀನಿವಾಸ ಗೋಗಿ, ಈರಣ್ಣ ಭೂತಪೂರ, ರಂಗಾರೆಡ್ಡಿ ಮಂಗಲಗಿ, ಕಾಳಗಿ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಗದ್ದಿ, ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ, ವಿಜಯಕುಮಾರ್ ಚೇಂಗಟಿ, ರೇವಣಸಿದ್ದ ಬಡಾ, ಶಿವಕುಮಾರ್ ಕೊಡಸಾಲಿ, ಶರಣು ಚಂದಾ, ಭೀಮರಾವ ಪಾಟೀಲ ಕೊಡದೂರ ಇದ್ದರು. ನೇತ್ರಾವತಿ ಮರಗೋಳ ನಿರೂಪಿಸಿದರು. ಭವಾನಿ ಕಾಂತಿ ಪ್ರಾರ್ಥಿಸಿದರು, ಆನಂದ ಮಠಪತ್ತಿ ವಂದಿಸಿದರು.