ಮಾನ್ವಿ ಬಾಲಕಿಯರ ಹಾಸ್ಟಲ್‌ನಲ್ಲಿ ಜಗಳ, ಸಂಧಾನ

| Published : Mar 23 2024, 01:02 AM IST

ಸಾರಾಂಶ

ಎಸ್ಸಿ-ಎಸ್ಟಿ ಹಾಸ್ಟಲ್‌ನಲ್ಲಿ ಕುಡಿಯುವ ನೀರು ತುಂಬಿದ್ದ ಬಕೆಟ್‌ನಲ್ಲಿ ಬಾತ್‌ ರೂಮ್‌ಗೆ ಬಳಸುವ ಜಗ್ಗನ್ನು ಹಾಕಿರುವುದನ್ನು ಪಿಯುಸಿ ಓದುತ್ತಿರುವ ಮಂಜುಳಾ ಪ್ರಶ್ನಿಸಿದ್ದು, ಈ ವಿಚಾರವಾಗಿ ವಸತಿ ನಿಲಯದ ಬಿಇಡಿ ಓದುತ್ತಿರುವ ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ಇತರರು ಮಂಜುಳಾ ಜೊತೆಗೆ ಜಗಳವಾಡಿದ ಘಟನೆ ನಡೆದಿದೆ.

ಮಾನ್ವಿ: ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯರ ನಡುವೆ ಜಗಳ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಮಾಹಿತಿ ಪಡೆದ ಅಧಿಕಾರಿಗಳು ಹಾಸ್ಟಲ್‌ಗೆ ತೆರಳಿ ಸಂಧಾನ ಸಭೆಯನ್ನು ನಡೆಸಿದ್ದಾರೆ.

ಎಸ್ಸಿ-ಎಸ್ಟಿ ಹಾಸ್ಟಲ್‌ನಲ್ಲಿ ಕುಡಿಯುವ ನೀರು ತುಂಬಿದ್ದ ಬಕೆಟ್‌ನಲ್ಲಿ ಬಾತ್‌ ರೂಮ್‌ಗೆ ಬಳಸುವ ಜಗ್ಗನ್ನು ಹಾಕಿರುವುದನ್ನು ಪಿಯುಸಿ ಓದುತ್ತಿರುವ ಮಂಜುಳಾ ಪ್ರಶ್ನಿಸಿದ್ದು, ಈ ವಿಚಾರವಾಗಿ ವಸತಿ ನಿಲಯದ ಬಿಇಡಿ ಓದುತ್ತಿರುವ ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ಇತರರು ಮಂಜುಳಾ ಜೊತೆಗೆ ಜಗಳವಾಡಿ ಹಲ್ಲೆ ನಡೆಸಿ ಗಾಯಪಡಿಸಿದ್ದು, ಗಾಯಾಳು ಮಂಜುಳಾ ಅವರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯು ಮಾನ್ವಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಗಳದ ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು, ಮುಖಂಡರು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿ ಮುಚ್ಛಳಿಕೆ ಬರೆಸಿಕೊಂಡು ಸಂಧಾನ ಮಾಡಿದ್ದಾರೆ. ಇದೇ ವೇಳೆ ಹಾಸ್ಟಲ್‌ನಲ್ಲಿರುವ ಕೊಂದು ಕೊರತೆಗಳನ್ನು ವಿಚಾರಿಸಿರುವ ಅಧಿಕಾರಿಗಳು, ಸಣ್ಣ-ಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವುದಾಗಿ ತಿಳಿಸಿದ್ದಾರೆ.